ಕರ್ನಾಟಕ ಸಮಸ್ತ ಫಾಳಿಲಾ ಟೀಚರ್ಸ್, ಮ್ಯಾನೇಜ್ಮೆಂಟ್ ಕಾರ್ಯಾಗಾರ

Update: 2023-07-11 15:43 GMT

ಪುತ್ತೂರು: ರಾಜ್ಯದಲ್ಲಿ ಕಾರ್ಯಾಚರಿಸುತ್ತಿರುವ ‘ಸಮಸ್ತ’ದ ಫಾಳಿಲಾ-ಫಳೀಲಾ ಮಹಿಳಾ ಕಾಲೇಜುಗಳ ಅಧ್ಯಾಪಕ- ಅಧ್ಯಾಪಕಿಯರ ತರಬೇತಿ ಶಿಬಿರ ಮತ್ತು ಆಡಳಿತ ಸಮಿತಿಗಳ ಜಂಟಿ ಕಾರ್ಯಗಾರ ಕೂರ್ನಡ್ಕ ಮದ್ರಸಾ ಸಭಾಂಗಣದಲ್ಲಿ ನಡೆಯಿತು.

ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಸಮಸ್ತ ಕೇಂದ್ರ ಮುಶಾವರ ಸದಸ್ಯ ಶೈಖುನಾ ಅಬ್ದುಲ್ ಖಾದರ್ ಅಲ್‌ಖಾಸಿಮಿ ಬಂಬ್ರಾಣ ‘ ಧಾರ್ಮಿಕ ಜ್ಞಾನವುಳ್ಳ ಮಹಿಳೆಯರು ನೈತಿಕ ಕುಟುಂಬ ನಿರ್ಮಾಣದ ಬುನಾದಿಗಳಾಗಿದ್ದಾರೆ. ಹಿಂದಿನ ಕಾಲದಿಂದಲೂ ಅಪಾರ ಜ್ಞಾನ ಹೊಂದಿದ್ದ ವನಿತೆಯರು ಇಸ್ಲಾಮೀ ಚರಿತ್ರೆಯ ಪುಟಗಳಲ್ಲಿ ಉನ್ನತ ಸ್ಥಾನ ಪಡೆದಿರುವುದನ್ನು ಕಾಣಬಹುದು. ಫಾಳಿಲಾ-ಫಳೀಲಾ ವಿದ್ಯಾಸಂಸ್ಥೆಗಳು ಆ ಪರಂಪರೆಯನ್ನು ಇನ್ನಷ್ಟು ಬಲಪಡಿಸುವ ಪ್ರಯತ್ನವಾಗಿ ಬೆಳೆದು ಬರಲಿ.ಏಕೀಕೃತ ಶರೀಅತ್ ಪಠ್ಯಕ್ರಮ ಸಮಸ್ತದಡಿ ಕಾರ್ಯಾಚರಣೆ ಮಾಡುವ ಮೂಲಕ ಮಹತ್ವದ ಬದಲಾವಣೆ ಉಂಟು ಮಾಡುತ್ತಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕೌನ್ಸಿಲ್ ಆಫ್ ಸಮಸ್ತ ವಿಮೆನ್ಸ್ ಕಾಲೇಜಸ್ ಇದರ ಅಕಾಡಮಿಕ್ ಕೋಆರ್ಡಿನೇಟರ್ ಸಅದ್ ಫೈಝಿ ಬುರ್ಹಾನಿ ಮಾತನಾಡಿ ‘ಸಮಸ್ತ’ದ ಬಹುನಿರೀಕ್ಷಿತ ಶೈಕ್ಷಣಿಕ ಯೋಜನೆ ಇದಾಗಿದೆ. ‘ಸಮಸ್ತ’ ಕೈಗೆತ್ತಿಕೊಂಡ ಯೋಜನೆಗಳು ಈವರೆಗೆ ಯಶಸ್ವಿಯಾದ ಅನುಭವ ಮಾತ್ರ ಇರುವುದರಿಂದ ಈ ಮಹಿಳಾ ಶೈಕ್ಷಣಿಕ ಯೋಜನೆಯೂ ಯಶಸ್ಸು ಸಾಧಿಸಲಿದೆ ಎಂದರು.

ಆಶಿಕ್ ಮಾಸ್ಟರ್ ಕುಮರಂಪುತ್ತೂರ್ ‘ಟೀಚಿಂಗ್ ಮೆಥಡಾಲಜಿ’ ಕುರಿತು ವಿಷಯ ಮಂಡಿಸಿದರು. ವಿವಿಧ ಪಠ್ಯಪುಸ್ತಕಗಳನ್ನು ಆಧರಿಸಿ ಹನೀಫ್ ದಾರಿಮಿ ಕೆಮ್ಮಾರ, ಮುಸ್ತಫಾ ಅನ್ಸಾರಿ ಅಡ್ಯಾರ್ ಕಣ್ಣೂರು, ಸಮದ್ ಅನ್ಸಾರಿ ಪರ್ಲ್ಯ, ಅಹ್ಮದ್ ನಈಂ ಫೈಝಿ ತರಗತಿ ನಡೆಸಿಕೊಟ್ಟರು.

ಫೀರ್ ಮೊಹಲ್ಲಾ ಜಮಾಅತ್ ಕಮಿಟಿ ಕೂರ್ನಡ್ಕ ಇದರ ಅಧ್ಯಕ್ಷ ಕೆ.ಎಚ್.ಖಾಸಿಂ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಕೆ.ಎಂ.ಎ. ಕೊಡುಂಗಾಯಿ ಫಾಝಿಲ್ ಹನೀಫಿ, ಅನ್ಸಾರ್ ಫೈಝಿ ಅಲ್ ಬುರ್ಹಾನಿ, ಅಬ್ದುಸ್ಸಲಾಮ್ ಫೈಝಿ ಎಡಪ್ಪಲಂ, ಸೈಯದ್ ಬಾಸಿತ್ ಬಾಅಲವಿ ತಂಳ್ ಅಲ್ ಅನ್ಸಾರಿ ಕುಕ್ಕಾಜೆ , ಹನೀಫ್ ಫೈಝಿ ಬೆಳ್ತಂಗಡಿ, ಇಬ್ರಾಹಿಂ ಬಾತಿಷಾ ಅಝ್ಹರಿ, ಉಸ್ಮಾನ್ ರಾಝಿ ಬಾಖವಿ ಅಲ್ ಹೈತಮಿ, ಸಿದ್ದೀಕ್ ಫೈಝಿ ಆತೂರ್, ಅಬ್ದುಸ್ಸಲೀಂ ಲತೀಫಿ ಕೂರ್ನಡ್ಕ, ಜಿ.ಪಿ. ಇಸ್ಮಾಯೀಲ್ ದಾರಿಮಿ ಕೂರ್ನಡ್ಕ, ಶಾಫಿ ದಾರಿಮಿ ಅಜ್ಜಾವರ, ನೌಫಲ್ ಹುದವಿ ಸಿದ್ದಾಪುರ, ಅಬೂಬಕ್ಕರ್ ಸಿದ್ದೀಕ್ ವಾಫಿ ಸಿದ್ದಾಪುರ, ನಫೀರ್ ಮುಸ್ಲಿಯಾರ್ ಕುಶಾಲನಗರ, ಉನೈಸ್ ಫೈಝಿ ಕುಶಾಲನಗರ, ಅಬೂಬಕ್ಕರ್ ಸಿದ್ದೀಕ್ ಯಮಾನಿ ಮೆಲ್ಕಾರ್ ಹಾಗೂ ಮ್ಯಾನೇಜ್ಮೆಂಟ್ ಪ್ರತಿನಿಧಿಗಳಾದ ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ, ಕೆ.ಅಬ್ದುರ‌್ರಝಾಕ್ ಕೂರ್ನಡ್ಕ, ಅಬ್ದುಲ್ ಅಝೀಝ್ ಕೂರ್ನಡ್ಕ, ಎ.ಕೆ ಹಸೈನಾರ್ ಕಲ್ಲುಗುಂಡಿ, ಆದರ್ಶ್ ಆಸಿಫ್ ಹಾಜಿ, ಸಿಟಿ ಅಶ್ರಫ್ ಹಾಜಿ ಉಪ್ಪಿನಂಗಡಿ, ಆರೀಫ್ ಕಮ್ಮಾಜೆ ಕೈಕಂಬ, ಮುಹಮ್ಮದ್ ಶರೀಫ್ ಅಡ್ಯಾರ್ ಕಣ್ಣೂರ್, ಅಹ್ಮದ್ ಕಬೀರ್ ಅಡ್ಯಾರ್ ಕಣ್ಣೂರು , ಉಮ್ಮರ್ ಕೆ.ಎಸ್. ಕೂರ್ನಡ್ಕ ಮತ್ತಿತರರು ಉಪಸ್ಥಿತರಿದ್ದರು.

ಕೋ ಆರ್ಡಿನೇಟರ್ ಮುಸ್ತಫಾ ಅನ್ಸಾರಿ ಸ್ವಾಗತಿಸಿದರು. ಮುಫತ್ತಿಶ್ ಉಮರ್ ದಾರಿಮಿ ಸಾಲ್ಮರ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News