ಕೂಳೂರು: ನೂತನ ಮಸೀದಿಯ ವಕ್ಫ್, ಮದ್ರಸ ಕಟ್ಟಡದ ಉದ್ಘಾಟನೆ
ಕೂಳೂರು:: ಖುದ್ಧಾಮುಲ್ ಇಸ್ಲಾಂ ಕೂಳೂರು ಇದರ ವತಿಯಿಂದ ನಿರ್ಮಿಸಿದ ನೂತನ ಮಸೀದಿಯ ವಕ್ಫ್ ಹಾಗೂ ಮದ್ರಸ ಕಟ್ಟಡದ ಉದ್ಘಾಟನೆಯನ್ನು ದ.ಕ. ಜಿಲ್ಲಾ ಖಾಝಿ ಶೈಖುನಾ ಅಲ್ ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ನೆರವೇರಿಸಿದರು.
ಕೂಳೂರು ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬರಾದ ಇಕ್ರಾಮುಲ್ ಸಖಾಫಿ ಮಸೀದಿಯಲ್ಲಿ ಪಾಲಿಸಬೇಕಾದ ಗೌರವವನ್ನು ವಿವರಿಸಿದರು.
ಸ್ಥಳೀಯ ಖತೀಬರಾದ ಉಮರುಲ್ ಫಾರೂಕ್ ಸಖಾಫಿ ಸ್ವಾಗತಿಸಿದರು. ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷರಾದ ಅಬ್ಬಾಸ್ ಹಾಜಿ, ಮುಸ್ಲಿಂ ಸೆಂಟ್ರಲ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಹನೀಫ್, ಝೀನತ್ ಭಕ್ಷ್ ಕೇಂದ್ರ ಜುಮಾ ಮಸೀದಿ ಮಂಗಳೂರು ಇದರ ಟ್ರಸ್ಟಿ ಅದ್ದು ಹಾಜಿ, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷರಾದ ಫಕೀರಬ್ಬ ಮಾಸ್ಟರ್, ಖುದ್ಧಾಮುಲ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷರಾದ ಟಿ.ಎ. ಶಾನವಾಝ್, ಪ್ರಧಾನ ಕಾರ್ಯದರ್ಶಿ ಶೇಖ್ ಅಹ್ಮದ್, ಜೊತೆ ಕಾರ್ಯದರ್ಶಿ ರಫೀಕ್ ಕೂಳೂರು, ಖಜಾಂಚಿ ಇಬ್ರಾಹಿಂ ಖಲೀಲ್, ಗೌರವ ಸಲಹೆಗಾರರಾದ ಕೆ. ಶರೀಫ್, ಸ್ಥಳೀಯ ಕಾರ್ಪೊರೇಟರ್ ಅನಿಲ್ ಕುಮಾರ್, ಜಿ.ಎ. ಜಲೀಲ್ ಸುರತ್ಕಲ್, ಜಿ. ಮೊಹಿದ್ದೀನ್ ಕೂಳೂರು, ಉದ್ಯಮಿಗಳಾದ ಹಾಜಿ ಅಸ್ಗರಲಿ, ಅಮೀನ್ ಎಚ್. ಎಚ್. ಕೆ.ಎಂ. ಫೈಝಲ್ ಕೂಳೂರು, ಅನ್ಸಾರ್ ಕೂಳೂರು, ಶೇಖುಞಿ ದೋಟ, ಬಶೀರ್ ಮದನಿ, ಸಿರಾಜ್ ನಿಝಾಮಿ, ಹಸನ್ ಮದನಿ ಮೊದಲಾದವರು ಉಪಸ್ಥಿತರಿದ್ದರು.