ಮಂಗಳೂರು: ಜಾಮಿಯಾ ಇಸ್ಲಾಮಿಯಾ ವಾರ್ಷಿಕೋತ್ಸವ

Update: 2023-06-27 14:23 GMT

ಮಂಗಳೂರು, ಜೂ.27: ನಗರದ ಜಾಮಿಯಾ ಇಸ್ಲಾಮಿಯಾದ ಪ್ರಥಮ ವಾರ್ಷಿಕೋತ್ಸವವು ಬೋಳಾರ ಇಸ್ಲಾಮಿಕ್ ಸೆಂಟರ್‌ನಲ್ಲಿ ಇತ್ತೀಚೆಗೆ ನಡೆಯಿತು.

ಬೋಳಾರ ಎಜುಕೇಶನ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಎಸ್‌ಎ ಖಲೀಲ್ ಅಧ್ಯಕ್ಷತೆ ವಹಿಸಿದ್ದರು. ಜಾಮಿಯಾದ ನಿರ್ದೇಶಕ ಮೌಲಾನ ಶುಐಬ್ ಹುಸೇನಿ ನದ್ವಿ ಮಾತನಾಡಿ ಸಮಾಜಕ್ಕೆ ಮಾರ್ಗದರ್ಶಕರಾಗಬಲ್ಲ, ಆಧುನಿಕ ಶಿಕ್ಷಣದಲ್ಲೂ ಪದವೀಧರರಾದ ಬಹುಭಾಷಾ, ಇಸ್ಲಾಮಿ ವಿದ್ವಾಂಸರು ಇಂದಿನ ಸಮಾಜಕ್ಕೆ ಅತ್ಯಗತ್ಯವಾಗಿದೆ. ಜಾಮಿಯಾ ಈ ಅಗತ್ಯವನ್ನು ಪೂರೈಸಲು ಶ್ರಮಿಸುತ್ತಿದೆ ಎಂದರು.

ಅತಿಥಿಯಾಗಿ ಭಾಗವಹಿಸಿದ್ದ ಡಾ.ಮುಹಮ್ಮದ್ ಇಸ್ಮಾಯಿಲ್ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಉಪನ್ಯಾಸಕರಾದ ಮೌಲಾನ ಇಕ್ರಾಮುಲ್ ಹಕ್ ಸ್ವಾಗತಿಸಿದರು. ಮೌಲಾನ ರಿಯಾಝುಲ್ ಹಕ್ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News