ಮಂಗಳೂರು : ಭಾರೀ ಮಳೆಗೆ ಪಂಪ್‌ವೆಲ್ ಜಲಾವೃತ

Update: 2023-07-04 09:32 GMT

ಮಂಗಳೂರು : ನಗರದಲ್ಲಿ ಇಂದು ಸಂಜೆ ಸುರಿದ ಭಾರೀ ಮಳೆಗೆ ನಗರದ ಪಂಪ್‌ವೆಲ್ ಜಲಾವೃತಗೊಂಡಿವೆ. ಇದರಿಂದ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದ್ದು, ಪೊಲೀಸರು ಈ ರಸ್ತೆಯಲ್ಲಿ ವಾಹನಗಳು ಚಲಿಸದಂತೆ ತಡೆ ಹಿಡಿದಿದ್ದಾರೆ.

ವಾಹನಗಳು ನಗರದ ವೆಲೆನ್ಸಿಯಾ, ಜಪ್ಪಿನಮೊಗರು ಕಡೆಯಾಗಿ ಚಲಿಸಲಾರಂಭಿಸಿದ್ದು, ಟ್ರಾಫಿಕ್ ಜಾಮ್ ಆಗಿವೆ.

ವಾಹನಗಳ ದಟ್ಟಣೆಯಿಂದ ಆ್ಯಂಬುಲೆನ್ಸ್‌ಗಳು ಕೂಡ ಅಲ್ಲಲ್ಲಿ ಬಾಕಿಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.



Full View
Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News