ಮಂಗಳೂರು: ಹೆದ್ದಾರಿ ಹೊಂಡ ಮುಚ್ಚಲು ಮನವಿ

Update: 2023-07-13 17:21 GMT

ಮಂಗಳೂರು: ನಗರ ಮತ್ತು ಹೊರವಲಯದ ಹೆದ್ದಾರಿಗಳಲ್ಲಿರುವ ಹೊಂಡಗಳಿಂದ ಅಪಾಯ ಎದುರಾಗುತ್ತಿದ್ದು, ಅಪಾಯವನ್ನು ತಪ್ಪಿಸಲು ಈ ಹೊಂಡಗಳನ್ನು ಮುಚ್ಚಿಸಲು ಕ್ರಮ ಜರಗಿಸಬೇಕು ಎಂದು ಎಬಿವಿಪಿ ನಿಯೋಗವು ದ.ಕ.ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.

ಹೊಂಡದಿಂದ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಬಹಳಷ್ಟು ತೊಂದರೆಯಾಗುತ್ತಿವೆ. ಅಪಘಾತಕ್ಕೆ ಕಾರಣವಾಗುತ್ತಿವೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಓರ್ವ ವಿದ್ಯಾರ್ಥಿ ರಸ್ತೆ ಹೊಂಡದಿಂದ ಅಪಘಾತಕ್ಕೀಡಾಗಿ ಮೃತಪಟ್ಟಿದ್ದರು. ಹಾಗಾಗಿ ಭವಿಷ್ಯದ ದಿನಗಳಲ್ಲಿ ಯಾರೂ ರಸ್ತೆ ಹೊಂಡಗಳಿಗೆ ಸಿಲುಕಿ ಸಮಸ್ಯೆಗೆ ಸಿಲುಕಬಾರದು. ನಗರದ ನಂತೂರು-ಶಕ್ತಿನಗರ ಹಾಗೂ ಪಂಪ್ವೆಲ್- ತೊಕ್ಕೊಟ್ಟು ಮಾರ್ಗದಲ್ಲಿ ಹೊಂಡಗಳು ಕಾಣಬಹುದಾಗಿದೆ. ಹಾಗಾಗಿ ಜಿಲ್ಲಾಡಳಿತ ಇದನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು ಎಂದು ಎಬಿವಿಪಿ ಮನವಿ ಮಾಡಿದೆ.

ಎಬಿವಿಪಿ ಮಂಗಳೂರು ಜಿಲ್ಲಾ ಸಂಚಾಲಕ ಶ್ರೇಯಸ್ ಶೆಟ್ಟಿ, ತಾಲೂಕು ಸಂಚಾಲಕ ಆದಿತ್ಯ ಶೆಟ್ಟಿ, ಪ್ರಮುಖರಾದ ಶ್ರೀಪಾದ್ ತಂತ್ರಿ ಪೊಳಲಿ, ಪೃಥ್ವಿಶ್ ಧರ್ಮಸ್ಥಳ, ಪ್ರಭಾವ್, ಜಯರಾಜ್ ನಿಯೋಗದಲ್ಲಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News