ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಪದ್ಮಾವತಿ ಅಧಿಕಾರ ಸ್ವೀಕಾರ

Update: 2023-07-06 14:24 GMT

ಪದ್ಮಾವತಿ

ಮಂಗಳೂರು, ಜು.7: ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪೆನಿ (ಮೆಸ್ಕಾಂ)ಯ ನೂತನ ವ್ಯವಸ್ಥಾಪಕ ನಿರ್ದೇಶಕಿಯಾಗಿ ಡಿ. ಪದ್ಮಾವತಿ ಬುಧವಾರ ಅಧಿಕಾರ ಸ್ವೀಕರಿಸಿದ್ದಾರೆ.

ಮೂಲತಃ ಗುಲ್ಬರ್ಗ ಜಿಲ್ಲೆಯವರಾದ ಪದ್ಮಾವತಿ ಪ್ರಸ್ತುತ ನಗರದ ಬಿಜೈ ನಿವಾಸಿಯಾಗಿದ್ದಾರೆ. ಗುಲ್ಬರ್ಗ, ಮಂಗಳೂರು, ಮೈಸೂರಿನಲ್ಲಿ ಕರ್ತವ್ಯ ನಿರ್ವಹಿಸಿದ್ದ ಇವರು ಈ ಹಿಂದೆ ಮೆಸ್ಕಾಂನ ತಾಂತ್ರಿಕ ನಿರ್ದೇಶಕಿಯಾಗಿ ಮೂರು ವರ್ಷ ಕರ್ತವ್ಯ ನಿರ್ವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News