ಪಡುಬಿದ್ರಿ: ಕಡಲಕೊರತಕ್ಕೆ ಗೋದಾಮು ನೆಲಸಮ

Update: 2023-07-07 14:22 GMT

ಪಡುಬಿದ್ರಿ: ಪಡುಬಿದ್ರಿ-ಕಾಡಿಪಟ್ಣದಲ್ಲಿ ಐದಾರು ದಿನಗಳಿಂದ ಕಾಣಿಸಿಕೊಂಡ ಕಡಲ್ಕೊರೆತಕ್ಕೆ ಶುಕ್ರವಾರ ಗೋದಾಮು ಹಾಗೂ ಬೀಚ್‍ಗೆ ಹಾನಿಯಾ ಗಿದ್ದು, ರಸ್ತೆ ಅಪಾಯದಲ್ಲಿದೆ.

ಶುಕ್ರವಾರ ಮಧ್ಯಾಹ್ನದ ಬಳಿಕ ಕಡಲ್ಕೊರೆತ ತೀವ್ರಗೊಂಡಿದೆ. ಈಗಾಗಲೇ ಹಲವು ತೆಂಗಿನ ಮರಗಳು ಸಮುದ್ರದ ಒಡಲು ಸೇರಿದೆ. ಕಾಡಿಪಟ್ಣ ಕೈರಂಪಣಿ ಫಂಡಿನ ಗೋದಾಮು ನೆಲಸಮಗೊಂಡಿದೆ. ಪಡುಬಿದ್ರಿ ಬೀಚ್‍ನಲ್ಲಿ ಬೀಚ್ ಅಭಿವೃದ್ಧಿಗೆ ನಿರ್ಮಿಸಲಾದ ಇಂಟರ್‍ಲಾಕ್, ಕಾಂಕ್ರೀಟ್ ತಡೆಗೋಡೆ ಬಹುತೇಕ ಸಮುದ್ರದ ಒಡಲು ಸೇರಿದೆ. ಇಲ್ಲಿಯೇ ಸಮೀಪದಲ್ಲಿರುವ ವಾಚ್‍ಟವರ್ ಹಾಗೂ ಹಟ್, ಇಲ್ಲಿನ ಮೀನುಗಾರಿಕಾ ರಸ್ತೆ ಕೆಲವೇ ಮೀಟರ್‍ನಷ್ಟು ದೂರವಿದ್ದು, ರಸ್ತೆ ಸಂಪರ್ಕದ ಭೀತಿ ಎದುರಾಗಿದೆ.

ತುರ್ತು ಕಾಮಗಾರಿಗೆ ಕಲ್ಲುಗಳನ್ನು ಹಾಕಲು ಮನವಿ ಮಾಡಿದರೂ ಯಾವುದೇ ಪ್ರಯೋಜವಾಗುತಿಲ್ಲ. ಇದುವರೆಗೂ ಕಲ್ಲು ಹಾಕುವ ಪ್ರಕ್ರಿಯೆ ನಡೆಸು ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಪಡುಬಿದ್ರಿ ಬೀಚ್ ಪರಿಸರದಲ್ಲಿ ಉಂಟಾಗಿರುವ ಕಡಲ್ಕೊರೆತ ಪ್ರದೇಶಕ್ಕೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಶನಿವಾರ ಭೇಟಿ ನೀಡಲಿದ್ದಾರೆ. ಇಲ್ಲಿ ಉಂಟಾಗಿರುವ ಹಾನಿ - ನಷ್ಟಗಳ ಸಮೀಕ್ಷೆ ನಡೆಸಿ ಸ್ಥಳೀಯ ನಿವಾಸಿಗಳೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

ಕಾಪು ತಾಲ್ಲೂಕಿನಲ್ಲಿ ಗುರುವಾರ ಸುರಿದ ಮಳಗೆ ಜಲಾವೃತಗೊಂಡಿದ್ದು, ಶುಕ್ರವಾರ ಮಳೆ ಕಡಿಮೆಯಾಗಿದ್ದು, ನೆರೆ ಇಳಿಮುಖಗೊಂಡಿದೆ.

ಗುರುವಾರ ಮಳೆಗೆ 64 ಕುಟುಂಬಗಳ ಒಟ್ಟು 258 ಮಂದಿಯನ್ನು ಸ್ಥಳಾಂತರಿಸಲಾಗಿತ್ತು. ಸ್ಥಳಾಂತರಗೊಂಡ ಮಂದಿ ಅವರ ಕುಟುಂಬಸ್ಥರ ಮನೆಗೆ ತೆರಳಿದ್ದರು. ಗುರುವಾರ ಮಧ್ಯರಾತ್ರಿಯಿಂದ ಶುಕ್ರವಾರವಿಡೀ ಮಳೆ ಕಡಿಮೆಯಾಗಿz. ಇದರಿಂದ ನೆರೆ ಇಳಿಮುಖಕಂಡಿದ್ದು, ಸ್ಥಳಾಂತರಗೊಂಡ ಮಂದಿ ಮತ್ತೆ ಮನೆ ಸೇರಿದ್ದಾರೆ.

ಕಾಪು ತಾಲ್ಲೂಕಿನ ಪಾಂಗಾಳ, ಉಳಿಯರಗೋಳಿ, ಮಲ್ಲಾರು, ಎಲ್ಲೂರು, ನಂದಿಕೂರು, ಪಾದೆಬೆಟ್ಟು, ಮಟ್ಟು, ತೆಂಕ, ಮಜೂರು, ಮೂಡಬೆಟ್ಟು, ಏಣಗುಡ್ಡೆ, ಬೆಳಪು, 92 ಹೇರೂರು, ನಡ್ಸಾಲು, ಬೆರ್ಳಳೆ, ಕುರ್ಕಾಲುವಿನ ಕೆಲವು ಪ್ರದೇಶಗಳು ಜಲಾವೃತವಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News