ಜೂ.26-28ರವರೆಗೆ ಉಡುಪಿ ಜಿಲ್ಲೆಯಲ್ಲಿ ವಿದ್ಯುತ್ ವ್ಯತ್ಯಯ
ಉಡುಪಿ, ಜೂ.24: ಜಿಲ್ಲಾ ವ್ಯಾಪ್ತಿಯಲ್ಲಿ ನಿರ್ವಹಣಾ ಕೆಲಸಗಳ ಕಾರಣದಿಂದ ಜೂನ್ 26ರಿಂದ 28 ರವರೆಗೆ ಈ ಕೆಳಕಂಡ ಸ್ಥಳಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.
ಉದ್ಯಾವರ ಎಂಯುಎಸ್‌ಎಸ್‌ನಿಂದ ಹೊರಡುವ ಪಿತ್ರೋಡಿ ಮತ್ತು ಪಿತ್ರೋಡಿ ಇಂಡಷ್ಟ್ರೀಯಲ್ ಫೀಡರ್‌ನಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಅಂಕುದ್ರು, ಗೋಂದಗುಡ್ಡೆ, ಪಿತ್ರೋಡಿ, ಮುದ್ದಲಗುಡ್ಡೆ, ಪಿತ್ರೋಡಿ ಇಂಡಸ್ಟ್ರೀಯಲ್ ಏರಿಯಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜೂ. 26ರಂದು ಬೆಳಗ್ಗೆ 9:30ರಿಂದ ಸಂಜೆ 5.30 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
33/11 ಕೆವಿ ಕುಂಜಿಬೆಟ್ಟು ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆವಿ ಉಡುಪಿ-3 ಫೀಡರ್ ಮಾರ್ಗದಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮಾರುತಿ ವಿಥೀಕಾ, ತೆಂಕಪೇಟೆ, ಕೆ.ಎಂ.ಮಾರ್ಗ, ಕನಕದಾಸ ರಸ್ತೆ, ನ್ಯೂ ಸಿಟಿ ಆಸ್ಪತ್ರೆ, ಹಳೆ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜೂನ್ 27ರಂದು ಬೆಳಗ್ಗೆ 9:30ರಿಂದ ಸಂಜೆ 5.30ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
110/33/11 ಕೆವಿ ಮಣಿಪಾಲ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆವಿ ಇಂದ್ರಾಳಿ ಫೀಡರಿನಲ್ಲಿ ಹಾಗೂ 33/11ಕೆವಿ ಕುಂಜಿಬೆಟ್ಟು ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆವಿ ಚಿಟ್ಪಾಡಿ ಮತ್ತು ಉದ್ಯಾವರ-1 ಫೀಡರಿನಲ್ಲಿ ನಿರ್ವಹಣೆ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಹಯಗ್ರೀವನಗರ, ಲಕ್ಷ್ಮೀಂದ್ರನಗರ, ಇಂದ್ರಾಳಿ ರೈಲ್ವೆ ನಿಲ್ದಾಣ, ಇಂದಿರಾನಗರ, ಕಸ್ತೂರ್ಬಾ ನಗರ, ಕುಕ್ಕಿಕಟ್ಟೆ, ಪದ್ಮನಾಭ ನಗರ, ಚಿಟ್ಪಾಡಿ, ಹನುಮಾನ್ ಗ್ಯಾರೇಜ್, ಅಮ್ಮಣ್ಣಿ ರಾಮಣ್ಣ ಹಾಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜೂನ್ 27ರಂದು ಬೆಳಗ್ಗೆ 9 ರಿಂದ ಸಂಜೆ 5ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
110/11ಕೆವಿ ಮಧುವನ ಉಪಕೇಂದ್ರದಿಂದ ಹೊರಡುವ ಬಾರ್ಕೂರು ಎಕ್ಸ್‌ಪ್ರೆಸ್ ಫೀಡರಿನಲ್ಲಿ 220/110/11 ಕೆವಿ ಹೆಗ್ಗುಂಜೆ ವಿದ್ಯುತ್ ಸ್ವೀಕರಣಾ ಕೇಂದ್ರದಿಂದ ಹೊರಡುವ 11 ಕೆವಿ ಹೆಗ್ಗುಂಜೆ ಫೀಡರ್ ಮಾರ್ಗದಲ್ಲಿ ಮತ್ತು 110/11 ಕೆವಿ ನಿಟ್ಟೂರು ಉಪವಿದ್ಯುತ್ ಕೇಂದ್ರದಿಂದ ಹೊರಡುವ 11 ಕೆವಿ ಶಾಂತಿವನ ಫೀಡರ್ ಮಾರ್ಗದಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಹೊಸಾಳ, ಕಚ್ಚೂರು, ರಂಗನಕೆರೆ, ಹೇರಾಡಿ, ಹನೆಹಳ್ಳಿ, ಕೂರಾಡಿ, ನಡೂರು, ಪಡುನೀಲಾವರ, ಬೆಣ್ಣೆಕುದ್ರು, ಹೆಗ್ಗುಂಜೆ, ಕಾಡೂರು, ಪೆಜಮಂಗೂರು, ಕೊಕ್ಕರ್ಣೆ, ಕೆಂಜೂರು, ಗೋಪಾಲಪುರ, ಶಾಂತಿವನ, ಬಡಾನಿಡಿಯೂರು, ಗರಡಿಮಜಲು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜೂನ್ 27ರಂದು ಬೆಳಗ್ಗೆ 9:30ರಿಂದ ಸಂಜೆ 5:30ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
110/11 ಕೆವಿ ಹಾಲಾಡಿ ವಿದ್ಯುತ್ ಉಪಕೇಂದ್ರದಲ್ಲಿ 110 ಕೆವಿ ಬಸ್ ಮತ್ತು ಇದಕ್ಕೆ ಸಂಬಂಧಿಸಿದ ಉಪಕರಣಗಳ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ 110/11 ಕೆವಿ ಹಾಲಾಡಿ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆವಿ ಶಂಕರನಾರಾಯಣ, ಆವರ್ಸೆ, ಬಿದ್ಕಲ್‌ಕಟ್ಟೆ, ಬೈಲೂರು, ಬೆಳ್ವೆ, ಹೈಕಾಡಿ, ವಾರಾ ಮತ್ತು ಕೆ.ಎನ್.ಎನ್.ಎಲ್ ಹಾಲಾಡಿ ಮಾರ್ಗಗಳಲ್ಲಿ ಅಮಾಸೆಬೈಲು, ಕುಳುಂಜೆ, ಶಂಕರನಾರಾಯಣ, ಹಾಲಾಡಿ-26, ಮಚ್ಚಟ್ಟು, ರಟ್ಟಾಡಿ, ತೊಂಬಟ್ಟು, ಕೆಳಸುಂಕ, ಜಡ್ಡಿನಗದ್ದೆ, ಹಾಲಾಡಿ, ಬಿದ್ಕಲ್‌ಕಟ್ಟೆ, ಗಾವಳಿ, ಹಾಲಾಡಿ-28, ಮಡಾಮಕ್ಕಿ, ಹಾಲಾಡಿ-76, ಸಿದ್ದಾಪುರ, ಉಳ್ಳೂರು-74, ಕಕ್ಕುಂಜೆ, ಹೆಸ್ಕತ್ತೂರು, ಯಡಾಡಿ-ಮತ್ಯಾಡಿ, ಹಳ್ಳಾಡಿ-ಹರ್ಕಾಡಿ, ಹಾರ್ದಳ್ಳಿ-ಮಂಡಳ್ಳಿ, ಮೊಳಹಳ್ಳಿ, ಬೈಲೂರು, ಕೊಂಡಳ್ಳಿ, ಬೆದ್ರಾಡಿ, ಕೋಣಿಹರ, ಬೆಳ್ವೆ, ಅಲ್ಬಾಡಿ, ಆರ್ಡಿ, ಹೆಂಗವಳ್ಳಿ, ಸೂರ್ಗೋಳಿ, ಶೇಡಿಮನೆ, ಹೈಕಾಡಿ ಮತ್ತು ಗೋಳಿಯಂಗಡಿ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜೂನ್ 27ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಮಾಡಲಾಗುವುದು.
110/33/11 ಕೆವಿ ಮಣಿಪಾಲ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆವಿ ಕೆಎಂಎಫ್ ಫೀಡರಿನಲ್ಲಿ ನಿರ್ವಹಣೆ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಈಶ್ವರನಗರ, ಸರಳೆಬೆಟ್ಟು, ಅರ್ಬಿ, ಪ್ರಗತಿನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜೂನ್ 28ರಂದು ಬೆಳಗ್ಗೆ 9ರಿಂದ ಸಂಜೆ 5ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಉದ್ಯಾವರ ಎಂಯುಎಸ್‌ಎಸ್‌ನಿಂದ ಹೊರಡುವ ಸಂಪಿಗೆನಗರ ಮತ್ತು ಕಡೆಕಾರ್ ಫೀಡರ್‌ನಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರು ವುದರಿಂದ ಸಾಲ್ಮರ, ಕಲಾಯಿಬೈಲು, ಸಂಪಿಗೆನಗರ, ಕುತ್ಪಾಡಿ, ಅನಂತಕೃಷ್ಣ ನಗರ, ಕಡೆಕಾರ್, ಕಿದಿಯೂರು, ಪಡುಕೆರೆ, ಕನ್ನರ್ಪಾಡಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜೂನ್ 28ರಂದು ಬೆಳಗ್ಗೆ 9:30ರಿಂದ ಸಂಜೆ 5:30ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
33/11 ಕೆವಿ ಹೆಬ್ರಿ ಉಪವಿದ್ಯುತ್ ಸ್ಥಾವರದಲ್ಲಿ ನಿರ್ವಹಣಾ ಕಾಮಗಾರಿ ಯನ್ನು ಹಮ್ಮಿಕೊಂಡಿರುವುದರಿಂದ 33/11 ಕೆವಿ ಹೆಬ್ರಿ ಉಪಕೇಂದ್ರದಿಂದ ಸರಬರಾಜಾಗುವ ಬೇಳೆಂಜೆ, ಕಳ್ತೂರು, ಸಂತೆಕಟ್ಟೆ, ಕರ್ಜೆ, ಮುಂಡಾಡಿಜೆಡ್ಡು, ಕುರ್ಪಾಡಿ, ಚಾರ, ಶಿವಪುರ, ಕನ್ಯಾನ, ನಾಡ್ಪಾಲು, ಸೋಮೇಶ್ವರ, ಸೀತಾನದಿ, ಮಡಾಮಕ್ಕಿ, ಕಾಸನಮಕ್ಕಿ, ಮುದ್ರಾಡಿ, ವರಂಗ, ಮುನಿಯಾಲು, ಕಬ್ಬಿನಾಲೆ, ಕೆರೆಬೆಟ್ಟು, ಹೊಸುರು, ಬಚ್ಚಾಪ್ಪು, ಹೆಬ್ರಿ, ಕಲ್ಲಿಲ್ಲು ವಾಟರ್ ಸಫ್ಲೈ, ಹುಟ್ಟುರ್ಕೆ ವಾಟರ್ ಸಫ್ಲೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜೂನ್ 28ರಂದು ಬೆಳಗ್ಗೆ 9ರಿಂದ ಸಂಜೆ 5:30ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.