ಪುನೀತ್ ತೆಂಡುಲ್ಕರ್‌ಗೆ ಪುಣೆ ವಿವಿಯಲ್ಲಿ ಪ್ರಥಮ ರ್‍ಯಾಂಕ್‌

Update: 2023-07-03 14:53 GMT

ಶಿರ್ವ, ಜು.3: ಪುಣೆಯ ಸಾವಿತ್ರಿ ಬಾಯಿ ಪುಲೆ ವಿಶ್ವವಿದ್ಯಾನಿಲಯದಿಂದ 2020-21ರಲ್ಲಿ ನಡೆದ ಕ್ರೆಡಿಟ್ ಬೇಸ್ದ್ ಸೆಮಿಸ್ಟರ್ ಸಿಸ್ಟಮ್ ಸ್ನಾತಕೋತ್ತರ ಪರೀಕ್ಷೆಯಲ್ಲಿ ರಸಾಯನಶಾಸ್ತ್ರ ವಿಷಯದಲ್ಲಿ ಬಂಟಕಲ್ಲು ಸಮೀಪದ ಬಿ.ಸಿ.ರೋಡ್ ನಿವಾಸಿ ಪುನೀತ್ ತೆಂಡುಲ್ಕರ್, ವಿಶ್ವವಿದ್ಯಾಲಯಕ್ಕೆ ಪ್ರಥಮ ರ್‍ಯಾಂಕ್‌ ಗಳಿಸಿದ್ದಾರೆ.

ಇವರಿಗೆ ಡಾ.ಎಸ್.ಎಫ್.ಪಾಟೀಲ್ ಸ್ವರ್ಣ ಪದಕ ಪ್ರಶಸ್ತಿ ಹಾಗೂ ದಿ.ಅನಂತ ಕೇಳ್ಕರ್ ಸ್ವರ್ಣ ಪದಕ ಪ್ರಶಸ್ತಿಯನ್ನು ಶನಿವಾರ ಪುಣೆ ವಿವಿಯಲ್ಲಿ ಜರಗಿದ ಪದವಿ ಪ್ರದಾನ ಸಮಾರಂಭದಲ್ಲಿ ಕುಲಪತಿ ಹಾಗೂ ಮಹಾರಾಷ್ಟ್ರದ ರಾಜ್ಯಪಾಲ ರಮೇಶ್ ಬೈಸ್ ಪ್ರದಾನ ಮಾಡಿದರು.

ಈ ಸಂದರ್ಭದಲ್ಲಿ ಮಹಾರಾಷ್ಟ್ರ ಸರಕಾರದ ಉನ್ನತ ಹಾಗೂ ತಾಂತ್ರಿಕ ಶಿಕ್ಷಣ ಸಚಿವ ಚಂದ್ರಕಾಂತ್ ಪಾಟೀಲ್, ಉಪಕುಲಪತಿ ಪ್ರೊ.ಸುರೇಶ್ ಗೋಸವಿ, ಕೇಂದ್ರ ಸರಕಾರದ ಡಿಪಾರ್ಟ್‌ಮೆಂಟ್ ಆಫ್ ಬಯೋಟೆಕ್ನಾಲಾಜಿ ಮಿನಿಸ್ಟ್ರಿ ಆಫ್ ಸೈನ್ಸ್ ಎಂಡ್ ಟೆಕ್ನಾಲಾಜಿ ವಿಭಾಗದ ಕಾರ್ಯದರ್ಶಿ ಡಾ.ರಾಜೇಶ್ ಗೋಖಲೆ ಉಪಸ್ಥಿತರಿದ್ದರು.

ಇವರು ಉಡುಪಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಬಿಎಸ್ಸಿ ಪದವಿಯನ್ನು ಗಳಿಸಿ ಮಂಗಳೂರು ಯುನಿವರ್ಸಿಟಿಯಿಂದ 5ನೇ ರ್‍ಯಾಂಕ್‌ ಪಡೆದಿದ್ದರು. ಪ್ರಾಥಮಿಕ ಶಿಕ್ಷಣವನ್ನು ಕಲ್ಯಾಣಪುರ ಮಿಲಾಗ್ರಿಸ್ ಆಂಗ್ಲ ಮಾಧ್ಯಮ ಶಾಲೆ, ಪ್ರೌಢ ಶಿಕ್ಷಣವನ್ನು ಮೌಂಟ್ ರೊಸರಿ ಆಂಗ್ಲ ಮಾಧ್ಯಮ ಶಾಲೆ, ಪಿಯುಸಿ ಶಿಕ್ಷಣವನ್ನು ಶಿರ್ವ ಸಂತ ಮೇರಿ ಪ.ಪೂ.ಕಾಲೇಜಿನಲ್ಲಿ ಪೂರೈಸಿದ್ದರು.

ಇವರು ಶಿರ್ವ ಸಂತ ಮೇರಿ ಕಾಲೇಜಿನ ಹಿರಿಯ ಹಿಂದಿ ಉಪನ್ಯಾಸಕರಾದ ಕೊಡಿಬೆಟ್ಟು ಡಾ.ವಿಠಲ್ ನಾಯಕ್ ಮತ್ತು ಅಜ್ಜರಕಾಡು ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಹಿಂದಿ ಉಪನ್ಯಾಸಕಿ ವಸಂತಿ ದಂಪತಿ ಪುತ್ರ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News