ಪುತ್ತೂರು: ನಕಲಿ ದಾಖಲೆ ಸೃಷ್ಟಿಯ ವಂಚನೆ ಜಾಲ ಪತ್ತೆ; ವಿವಿಧ ಪಂಚಾಯತ್‍ಗಳ ಮೊಹರು, ದಾಖಲೆ ವಶಕ್ಕೆ

Update: 2023-07-11 12:30 GMT

ಪುತ್ತೂರು: ಸರ್ಕಾರಿ ದಾಖಲೆಗಳನ್ನು ಸೃಷ್ಟಿಸುವ ನಕಲಿ ಜಾಲವೊಂದನ್ನು ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಪತ್ತೆ ಹಚ್ಚಿದ್ದು, ನಕಲಿ ದಾಖಲೆ ಮತ್ತು ಮೊಹರುಗಳನ್ನು ವಶಕ್ಕೆ ಪಡೆದುಕೊಂಡ ಬಗ್ಗೆ ಮಂಗಳವಾರ ವರದಿಯಾಗಿದೆ.

ಪುತ್ತೂರು ನಗರದ ಪಡೀಲ್ ಎಂಬಲ್ಲಿನ ವಿಶ್ವನಾಥ ಎಂಬಾತನಿಗೆ ಸೇರಿದ ಇಲೆಕ್ಟ್ರಿಕಲ್ಸ್ ಮತ್ತು ಫ್ಲಂಬಿಂಗ್ ಸೆಂಟರ್‍ನಲ್ಲಿ ಈ ಅಕ್ರಮ ಜಾಲವನ್ನು ಪತ್ತೆ ಹಚ್ಚಲಾಗಿದೆ.

ವಿಶ್ವನಾಥ ಅನುಮತಿ ಪಡೆದ ಗುತ್ತಿಗೆದಾರನಾಗಿದ್ದು, ಮೆಸ್ಕಾಂ ಗುತ್ತಿಗೆ ಕಾಮಗಾರಿಗಳನ್ನು ನಿರ್ವಹಿಸುತ್ತಿದ್ದ. ವಿದ್ಯುತ್ ಸಂಪರ್ಕ ಪಡೆಯಲು ಪಂಚಾಯತ್ ಮತ್ತು ನಗರಸಭೆಯ ನಿರಪೇಕ್ಷಣಾ ಪತ್ರ(ಎನ್‍ಒಸಿ) ನೀಡಬೇಕಾಗಿದೆ. ವಿದ್ಯುತ್ ಗುತ್ತಿಗೆ ಕಾಮಗಾರಿ ನಿರ್ವಹಿಸುತ್ತಿದ್ದ ಈ ಅಂಗಡಿಯಲ್ಲಿ ಪುತ್ತೂರು ನಗರಸಭೆ, ಕಡಬ ತಾಲೂಕು ಪಂಚಾಯತ್, ಪುತ್ತೂರು ತಾಲೂಕಿನ ಎಲ್ಲಾ ಗ್ರಾಪಂಗಳ ಮೊಹರು, ಸುಳ್ಯ ಮತ್ತು ಬಂಟ್ವಾಳ ತಾಲೂಕುಗಳ ವಿವಿಧ ಗ್ರಾಮ ಪಂಚಾಯತ್‍ಗಳ ಮೊಹರುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ದಾಖಲೆ ಪತ್ರಗಳಿಗೆ ನಕಲಿ ಸಹಿ ಹಾಕಿ, ಅದಕ್ಕೆ ನಕಲಿ ಮೊಹರುಗಳನ್ನು ಬಳಸುತ್ತಿರುವುದಾಗಿ ಆರೋಪ ವ್ಯಕ್ತವಾಗಿದೆ. ಸಾರ್ವಜನಿಕರು ದೂರು ನೀಡಿದ ಹಿನ್ನಲೆಯಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವಿನ್ ಭಂಡಾರಿ ನೇತೃತ್ವದಲ್ಲಿ ಅಧಿಕಾರಿಗಳ ತಂಡ ದಾಳಿ ನಡೆಸಿ ನಕಲಿ ದಾಖಲೆ ಮತ್ತು ಮೊಹರುಗಳನ್ನು ವಶಕ್ಕೆ ಪಡೆದುಕೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News