ಪುತ್ತೂರು:ಹೆಲ್ತ್ ಪ್ಲಸ್ ಹೆಲ್ಪ್ ಸೆಂಟರ್‌ನಿಂದ ಡಯಾಲಿಸಿಸ್ ರೋಗಿಗಳಿಗೆ ಸಹಾಯ

Update: 2023-07-15 13:06 GMT

ಪುತ್ತೂರು: ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಪುತ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪುತ್ತೂರು ತಾಲೂಕಿನ 20 ರೋಗಿಗಳಿಗೆ ಹೆಲ್ತ್ ಪ್ಲಸ್ ಹೆಲ್ಪ್ ಸೆಂಟರ್ ವತಿಯಿಂದ ಅನಿವಾಸಿ ಭಾರತೀಯರಾದ ಅಬ್ದುಲ್ ಸತ್ತಾರ್ ಮತ್ತು ತೌಸೀರ್ ಅಹ್ಮದ್ ಅವರ ಸಹಕಾರದಲ್ಲಿ ಸುಮಾರು ರೂ. 3 ಲಕ್ಷ ವೆಚ್ಚದಲ್ಲಿ ಒಂದು ವರ್ಷಗಳಿಗೆ ಬೇಕಾಗುವಂತಹ ಔಷಧಿ ಮತ್ತು ಉಪಹಾರದ ವ್ಯವಸ್ಥೆ ಮಾಡಿದ್ದು, ಇದರ ಚಾಲನಾ ಕಾರ್ಯಕ್ರಮ ಶನಿವಾರ ಬೊಳುವಾರು ದ್ರುವ ಕಾಂಪ್ಲೆಕ್ಸ್ ನಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ದುವಾಶೀರ್ವಚನ ನೀಡಿದ ದಾರುಲ್ ಹಸನೀಯ ಇಫುಲ್ ಕಾಲೇಜ್ ಅಧ್ಯಕ್ಷ ಸಯ್ಯದ್ ಸರ್ಫುದ್ದೀನ್ ತಂಙಳ್ ಅವರು ರೋಗಿಗಳಿಗೆ ಸಹಾಯ ಹಸ್ತ ನೀಡುವ ಸೇವಾ ಕಾರ್ಯಗಳು ಅದರ್ಶಮಯವಾಗಿದೆ. ಜಾತಿ, ಧರ್ಮಗಳ ಬೇಧವಿಲ್ಲದೆ ಎಲ್ಲರಿಗೂ ಸೇವೆ ನೀಡುವ ಮನೋಭಾವ ನಮ್ಮದಾಗಬೇಕು. ಈ ನಿಟ್ಟಿನಲ್ಲಿ ಹೆಲ್ತ್ ಪ್ಲಸ್ ಹೆಲ್ಪ್ ಸೆಂಟರ್‍ನಿಂದ ಮಾದರಿಯಾದ ಸೇವೆ ನಡೆಯುತ್ತಿದೆ ಎಂದರು.

ಪುತ್ತೂರು ಸರ್ಕಾರಿ ಆಸ್ಪತ್ರೆಯ ದಂತ ಆರೋಗ್ಯಾಧಿಕಾರಿ ಡಾ. ಜಯದೀಪ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪತ್ರಕರ್ತ ಸಂಶುದ್ಧೀನ್ ಸಂಪ್ಯ ಮಾತನಾಡಿ ಕಿಡ್ನಿ ಸಮಸ್ಯೆಗಳಿಂದ ಬಳಲುತ್ತಿರವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದರಿಂದಾಗಿ ರೋಗಿಗಳ ಜೊತೆಗೆ ಕುಟುಂಬಸ್ಥರೂ ಸಂಕಷ್ಟ ಅನುಭವಿಸುತ್ತಾರೆ. ಇದನ್ನು ಅಲ್ಪ ಮಟ್ಟಿಗೆ ತಡೆಯುವಲ್ಲಿ ಹೆಲ್ತ್ ಪ್ಲಸ್ ಹೆಲ್ಪ್ ಸೆಂಟರ್ ವತಿಯಿಂದ ಸಹಾಯವಾಗಲಿದೆ. ಪುತ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ಒದಗಿಸಲಾಗುತ್ತಿದೆ. ಜೊತೆಗೆ ಸಾರ್ವಜನಿಕರಿಂದಲೂ ಇಂತಹ ಸಹಕಾರಗಳು ಸಿಕ್ಕಿದಲ್ಲಿ ರೋಗಿಗಳಿಗೆ ತುಂಬಾ ಸಹಾಯವಾಗಲಿದೆ ಎಂದರು.

ಹಲ್ತ್ ಪ್ಲಸ್ ಮೆಡಿಕಲ್ ಪಾಲುದಾರರಾದ ಆಶಿಫ್ ಮತ್ತು ಅಕ್ಬರ್ ಉಪಸ್ಥಿತರಿದ್ದರು. ಸರ್ಕಾರಿ ಆಸ್ಪತ್ರೆಯ ನಿಕಟಪೂರ್ವ ಸದಸ್ಯ ರಫೀಕ್ ದರ್ಬೆ ಸ್ವಾಗತಿಸಿ, ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News