ಮಳೆಯಿಂದ ಉಡುಪಿ ಜಿಲ್ಲೆಯ ಐದು ಮನೆಗಳಿಗೆ ಹಾನಿ

Update: 2023-07-12 15:09 GMT

ಉಡುಪಿ, ಜು.12: ಜಿಲ್ಲೆಯಲ್ಲಿ ಸುರಿದ ಗಾಳಿ-ಮಳೆಯಿಂದ ಇನ್ನೂ ಐದು ಮನೆಗಳಿಗೆ ಹಾನಿಯಾಗಿದೆ. ಕಾಪು ತಾಲೂಕಿನ ಪಡು ಗ್ರಾಮದ ಶಿವ ಪೂಜಾರಿ ಎಂಬವರ ಮನೆಯ ಗೋಡೆ ಭಾರೀ ಮಳೆಗೆ ಕುಸಿದು ಬಿದ್ದಿದ್ದು, ಇದರಿಂದ ಎರಡು ಲಕ್ಷರೂ.ಗಳಿಗೂ ಅಧಿಕ ನಷ್ಟ ಸಂಭವಿಸಿದೆ.

ಬ್ರಹ್ಮಾವರ ತಾಲೂಕು ಮಟಪಾಡಿ ಗ್ರಾಮದ ಅಕ್ಕಣ್ಣಿ ಎಂಬವರ ವಾಸದ ಮನೆ ಗಾಳಿ-ಮಳೆಯಿಂದ ಭಾಗಶ: ಹಾನಿಗೊಳಗಾಗಿದ್ದು 70,000ರೂ.ನಷ್ಟು ನಷ್ಟದ ಅಂದಾಜು ಮಾಡಲಾಗಿದೆ. ಕೆಂಜೂರು ಗ್ರಾಮದ ಗೋಪಾಲ ಎಂಬವರ ಮನೆಯೂ ಹಾನಿಗೊಂಡಿದ್ದು 35,000ರೂ. ನಷ್ಟದ ಅಂದಾಜು ಮಾಡಲಾಗಿದೆ.

ಕುಂದಾಪುರ ತಾಲೂಕು ಕಟ್‌ಬೆಲ್ತೂರು ಗ್ರಾಮದ ಬೇಬಿ ಪೂಜಾರ್ತಿ ಯವರ ಮನೆಗೂ ಭಾಗಶ: ಹಾನಿಯಾಗಿದ್ದು 30 ಸಾವಿರ ರೂ.ನಷ್ಟು ನಷ್ದವಾಗಿದ್ದರೆ, ಹೆಬ್ರಿ ತಾಲೂಕು ಶೇಡಿಮನೆಯ ಗುಲಾಬಿ ಪೂಜಾರ್ತಿ ಅವರ ಮನೆಗೆ ಹತ್ತು ಸಾವಿರದಷ್ಟು ನಷ್ಟವಾದ ಮಾಹಿತಿ ಬಂದಿದೆ.

ಕಳೆದ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ 13.2ಮಿ.ಮೀ. ಮಳೆಯಾಗಿದ್ದು, ಕಾಪುವಲ್ಲಿ 23.0, ಹೆಬ್ರಿ 16.5, ಕಾರ್ಕಳ 15.8, ಬೈಂದೂರು 13.5, ಉಡುಪಿ 12.1, ಕುಂದಾಪುರ 8.9 ಹಾಗೂ ಬ್ರಹ್ಮಾವರ ದಲ್ಲಿ 8.8ಮಿ.ಮೀ. ಮಳೆಯಾಗಿದೆ.

ಜಿಲ್ಲೆಗೆ ಶುಕ್ರವಾರ ಮತ್ತು ಶನಿವಾರ ಯೆಲ್ಲೋ ಅಲರ್ಟ್‌ನ್ನು ನೀಡಲಾಗಿದ್ದು, ನಂತರದ ದಿನಗಳಲ್ಲಿ ಸಾಧಾರಮ ಮಳೆ ಬೀಳುವ ಮುನ್ಸೂಚನೆ ನೀಡಲಾಗಿದೆ. ದಿನದಲ್ಲಿ ಬಜೆ ಡ್ಯಾಂನ ನೀರಿನ ಮಟ್ಟ 5.60 ಮೀ. ಆಗಿದ್ದರೆ, ಕಾರ್ಕಳ ಮುಂಡ್ಲಿಯಲ್ಲಿ ನೀರಿನ ಮಟ್ಟ 5.18ಮೀ. ಇದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News