ಧಾರ್ಮಿಕ ಆಚರಣೆಗಳು ನಮ್ಮನ್ನು ಒಂದುಗೂಡಿಸಬೇಕು: ಮುಹಮ್ಮದ್‌ ಕಂಞಿ

Update: 2023-07-08 13:45 GMT

ಉಳ್ಳಾಲ: ಧರ್ಮಗಳ ದುರ್ವಾಖ್ಯಾನ ಆಗುತ್ತಿರುವ ಕಾಲಘಟ್ಟ ಇದು, ಧರ್ಮ‌ ಅಂದರೆ ಪ್ರೀತಿ ಪ್ರೇಮ ಉಂಟು ಮಾಡುವ, ನಮ್ಮನ್ನೆಲ್ಲ ಒಂದುಗೂಡಿಸುವ ಬದಲಿಗೆ ಪರಸ್ಪರ ವಿದ್ವೇಷವನ್ನು ಉಂಟು ಮಾಡುವ, ವಿಭಜನೆಯನ್ನು ಮಾಡುವುದನ್ನು ನೋಡುತ್ತಿದ್ದೇವೆ, ಎಲ್ಲಾ ಧರ್ಮಗಳು ವಿಭಜನೆಯನ್ನು ಸೃಷ್ಟಿ ಮಾಡುವ ಕಚ್ಚಾ ವಸ್ತುವಾಗಿ ದುರುಪಯೋಗ ಆಗುತ್ತಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯಕಾರ್ಯದರ್ಶಿ ಮೊಹಮ್ಮದ್ ಕುಂಞು ಅಭಿಪ್ರಾಯಿಸಿದರು.

ಉಳ್ಳಾಲ ಸದ್ಭಾವನಾ ವೇದಿಕೆ, ಪೊಸಕುರಲ್ ಬಳಗ, ಜಮಾಅತೆ ಇಸ್ಲಾಮೀ ಹಿಂದ್, ಕೆಥೋಲಿಕ್ ಸಭಾ ಪೆರ್ಮನ್ನೂರು ಘಟಕ, ಕೊಲ್ಯ ಬಿಲ್ಲವ ಸೇವಾ ಸಮಾಜ ಟ್ರಸ್ಟ್, ಲಯನ್ಸ್ ಕ್ಲಬ್ ಪೆರ್ಮನ್ನೂರು, ನವೋದಯ ಫ್ರೆಂಡ್ಸ್ ಉಳ್ಳಾಲಬೈಲ್ ಜಂಟಿ ಆಶ್ರಯದಲ್ಲಿ ತೊಕ್ಕೋಟ್ಟು ಸಂತ ಸಬೆಸ್ಟಿಯನ್ ಸಭಾಂಗಣದಲ್ಲಿ ಆಯೋಜಿಸಿದ ಈದ್ ಸೌಹಾರ್ದ ಕೂಟದಲ್ಲಿ ಪಾಲ್ಗೊಂಡು ಮಾತನಾಡಿದರು.

ಸಂತ ಸಬೆಸ್ಟಿಯನ್ ಧರ್ಮ ಕೇಂದ್ರದ ಪ್ರಧಾನ ಧರ್ಮಗುರು ವಂದನೀಯ ಫಾದರ್ ಸಿಪ್ರೀಯನ್ ಪಿಂಟೋ , ಉಚ್ಚಿಲ ಬೋವಿ ಶಿಕ್ಷಣ ಸಂಸ್ಥೆಯ ಸಂಚಾಲಕ ರೋಹಿತಾಶ್ವ ಉಚ್ಚಿಲ್ ಸಂದೇಶ ನೀಡಿದರು. ಉಳ್ಳಾಲ ಸದ್ಭಾವನಾ ವೇದಿಕೆಯ ಅಧ್ಯಕ್ಷ ಪ್ರಸಾದ್ ರೈ ಕಲ್ಲಿಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸದ್ಭಾವನಾ ವೇದಿಕೆ ಜೊತೆ ಕಾರ್ಯದರ್ಶಿ ಇಸಾಕ್ ಹಸನ್ ಪ್ರಾಸ್ತವಿಕವಾಗಿ ಮಾತನಾಡಿದರು. ಸಮಾಜದ ಗಣ್ಯ ಹಿರಿಯ ಸಾಧಕರು, ಉಳ್ಳಾಲ ಮೊಗವೀರ ಸಂಘದ ಮಾಜಿ ಅಧ್ಯಕ್ಷ ಸದಾನಂದ ಬಂಗೇರ, ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ (ಕೆ.ಎಸ್.ಟಿ.ಎ) ಮಾಜಿ ರಾಜ್ಯಾಧ್ಯಕ್ಷ ಆನಂದ್ ಕೆ.ಎಸ್, ಕೆಥೋಲಿಕ್ ಸಭಾ ಮಂಗಳೂರು ಪ್ರಾಂತ್ಯದ ಕೇಂದ್ರೀಯ ಸಮಿತಿ ಅಧ್ಯಕ್ಷ ಆಲ್ವಿನ್ ಡಿಸೋಜ ಇವರನ್ನು ಅಭಿನಂದಿಸಲಾಯಿತು.

ಜಮಾಅತೆ ಇಸ್ಲಾಮೀ ಹಿಂದ್ ಉಳ್ಳಾಲ ವಲಯ ಅಧ್ಯಕ್ಷ ಯು.ಎ ಅಬ್ದುಲ್ ಕರೀಮ್, ಕೊಲ್ಯ ಬಿಲ್ಲವ ಸೇವಾ ಸಮಾಜ ಟ್ರಸ್ಟ್ ಅಧ್ಯಕ್ಷ ವೇಣುಗೋಪಾಲ್ ಕೊಲ್ಯ, ಕೆಥೋಲಿಕ್ ಸಭಾ ಪೆರ್ಮನ್ನೂರು ಘಟಕ ಮತ್ತು ಲಯನ್ಸ್ ಕ್ಲಬ್ ಪೆರ್ಮನ್ನೂರು ಅಧ್ಯಕ್ಷ ಪ್ರಶಾಂತ್ ಡಿಸೋಜ, ನವೋದಯ ಫ್ರೆಂಡ್ಸ್ ಉಳ್ಳಾಲ ಬೈಲ್ ಗೌರವಾಧ್ಯಕ್ಷ ಪದ್ಮನಾಭ ಉಳ್ಳಾಲಬೈಲ್, ಪೆರ್ಮನ್ನೂರು ಸಂತ ಸಬೆಸ್ಟಿಯನ್ ಧರ್ಮ ಕೇಂದ್ರದ ಪಾಲನಾ ಸಮಿತಿ ಉಪಾಧ್ಯಕ್ಷ ಅರುಣ್ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು.

ಹಿರಾ ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಹುಸೈನ್ ಕಾಟಿಪಳ್ಳ ಸೌಹಾರ್ದ ಗೀತೆ ಹಾಡಿದರು. ಪೊಸಕುರಲ್ ನಿರ್ದೇಶಕ ವಿದ್ಯಾಧರ್ ಶೆಟ್ಟಿ ಸ್ವಾಗತಿಸಿದರು. ಡಾ.ಮೊಹಮ್ಮದ್ ಮುಬೀನ್ ಕಾರ್ಯಕ್ರಮ ನಿರೂಪಿಸಿದರು, ಸದ್ಭಾವನಾ ವೇದಿಕೆಯ ಕೋಶಾಧಿಕಾರಿ ಮೆಲ್ವಿನ್ ಡಿಸೋಜ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News