‘ಸಜಿಪ ಪುಲ್ಲೀಸ್ ಚಲ್ಲೀಸ್’ ಕುಟುಂಬ ಸಮ್ಮಿಲನ

Update: 2023-07-03 16:41 GMT

ಮಂಗಳೂರು, ಜು.3: ಸದ್ಯದ ಸಾಮಾಜಿಕ ವ್ಯವಸ್ಥೆಯಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಕುಟುಂಬದ ಮಹತ್ವ ತಿಳಿಸುವುದು ದೊಡ್ಡ ಜವಾಬ್ದಾರಿಯಾಗಿದೆ. ಸಣ್ಣ ಕುಟುಂಬವಿರುವ ಕಾರಣ ಕುಟುಂಬದ ಉಳಿದ ಸದಸ್ಯರ ಜೊತೆ ಆ ಮಕ್ಕಳಿಗೆ ಯಾವುದೇ ಬಾಂಧವ್ಯ ಇರುವುದಿಲ್ಲ. ಕೂಡು ಕುಟುಂದಲ್ಲಿ ಬದುಕಿದರೆ ಮಕ್ಕಳು ಪ್ರತಿಯೊಬ್ಬರಿಗೆ ಗೌರವ ಕೊಡುವುದು ಸೇರಿದಂತೆ ಹಲವಾರು ಮೌಲ್ಯಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂದು ಉಳ್ಳಾಲ ಅನುದಾನಿತ ಟಿಪ್ಪುಸುಲ್ತಾನ್ ಶಾಲೆಯ ಶಿಕ್ಷಕ ಬಿಎಂ ರಫೀಕ್ ತುಂಬೆ ಹೇಳಿದರು.

ರವಿವಾರ ನಡೆದ ‘ಸಜಿಪ ಪುಲ್ಲೀಸ್ ಚಲ್ಲೀಸ್’ ಕುಟುಂಬ ಸಮ್ಮಿಲನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕುಟುಂಬದ ಹಿರಿಯ ಸದಸ್ಯರಾದ ಅಲ್ಹಾಜ್ ಶೇಖ್ ಅಬ್ದುಲ್ಲಾ ಬಾಖವಿ ದುಆಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕುಟುಂಬದ ಸದಸ್ಯರಾದ ಫಾಹೀಂ ಕಿರಾಅತ್ ಪಠಿಸಿದರು. ಮಂಚಿ ಇಬ್ರಾಹಿಂ, ಎಸ್‌ಎ ಖಾದರ್, ಝುಬೈರ್ ಹಾಜಿ, ಮುಹಮ್ಮದ್ ಬೋಳಂತೂರು, ಮುಹಮ್ಮದ್ ಕಕ್ಕಿಂಜೆ, ಅಬ್ಬಾಸ್ ಪನ್ಯ, ಅಬ್ದುಲ್ ರಝಾಕ್ ಸಜಿಪ, ಬಿ.ಮುಹಮ್ಮದ್ ಕಕ್ಕಿಂಜೆ, ಇಬ್ರಾಹೀಂ ಇನೋಳಿ, ಆರೀಫ್ ಕುಂದಾಪುರ, ನೌಫಲ್ ಕಣ್ಣೂರು, ಇಕ್ಬಾಲ್ ಕಯ್ಯಾರ್, ಜಲಾಲ್ ಇನೋಳಿ, ಸಮದ್ ಕೊಡಾಜೆ, ಹನೀಫ್ ಕಲ್ಲಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಫ್ವಾನ್ ಕಲಾಯಿ ಕ್ವಿಝ್ ಕಾರ್ಯಕ್ರಮ ನಡೆಸಿಕೊಟ್ಟರು. ಕುಟುಂಬ ಸದಸ್ಯ ರಿಗೆ ವಿವಿಧ ಸಾಂಸ್ಕೃತಿಕ ಆಟಗಳನ್ನು ಏರ್ಪಡಿಸಲಾಯಿತು. ಕಳೆದ ಎರಡು ಶೈಕ್ಷಣಿಕ ವರ್ಷದಲ್ಲಿ ಹತ್ತನೇ ತರಗತಿಯಲ್ಲಿ ವಿಶೇಷ ದರ್ಜೆಯಲ್ಲಿ ಅಂಕ ಪಡೆದ ಕುಟುಂಬದ ಪ್ರತಿಭಾನಿತ ಮಕ್ಕಳಾದ ಖತೀಜಾ ಇಫಾ (612) ಮತ್ತು ಫಾತಿಮಾ ಅಲ್ಫಾ (569) ಅವರನ್ನು ಗೌರವಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News