ಸಂತೆಕಟ್ಟೆ ರಾ.ಹೆದ್ದಾರಿ: ಸುರಕ್ಷಿತ ಕಾಮಗಾರಿಗೆ ಶಾಸಕರ ಸೂಚನೆ

Update: 2023-07-08 15:53 GMT

ಉಡುಪಿ, ಜು.8: ಮಳೆಯ ನಡುವೆಯೇ ಸಂತೆಕಟ್ಟೆ ರಾಷ್ಟೀಯ ಹೆದ್ದಾರಿಯಲ್ಲಿ ನಡೆದಿರುವ ಅಂಡರ್‌ಪಾಸ್ ಕಾಮಗಾರಿಯ ಹಿನ್ನೆಲೆಯಲ್ಲಿ ಸುಗಮ ಸಂಚಾರ ಹಾಗೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಶಾಸಕ ಯಶ್‌ಪಾಲ್ ಸುವರ್ಣ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ಗಳನ್ನು ನೀಡಿದ್ದಾರೆ.

ಕಾಮಗಾರಿ ನಡೆದಿರುವ ಪ್ರದೇಶಗಳಿಗೆ ಇಂದು ಭೇಟಿ ನೀಡಿದ ಅವರು, ಪರಿಸ್ಥಿತಿಯನ್ನು ಅವಲೋಕಿಸಿದ ಬಳಿಕ ಅಧಿಕಾರಿಗಳಿಗೆ ಸೂಕ್ತ ಸಲಹೆ ಸೂಚನೆ ಗಳನ್ನು ನೀಡಿದರು.

ಸಂತೆಕಟ್ಟೆ ಜಂಕ್ಷನ್ ಸದಾ ವಾಹನ ದಟ್ಟಣೆ ಹೊಂದಿರುವ ಕಾರಣ ಕಾಮಗಾರಿ ಹಿನ್ನೆಲೆಯಲ್ಲಿ ಸುರಕ್ಷತೆಗೆ ಆದ್ಯತೆ ನೀಡುವಂತೆ ಹಾಗೂ ಕಾಮಗಾರಿಯ ಪ್ರದೇಶದಲ್ಲಿ ಮಣ್ಣು ಕುಸಿತವಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದರು.

ಸಂತೆಕಟ್ಟೆ ನೇಜಾರು ತಿರುವು ಬಳಿ ರಸ್ತೆಯಲ್ಲಿ ನೀರು ನಿಂತು ಜನಸಾಮಾನ್ಯ ರಿಗೆ ಉಂಟಾಗಿರುವ ಸಮಸ್ಯೆ ಕುರಿತಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸುಗಮ ಸಂಚಾರ ವ್ಯವಸ್ಥೆಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತರಾದ ರಾಯಪ್ಪ, ಎಇಇ ಯಶವಂತ ಪ್ರಭು, ನಗರಸಭಾ ಸದಸ್ಯರಾದ ಮಂಜುಳಾ ನಾಯಕ್, ಜಯಂತಿ ಪೂಜಾರಿ, ಕಲ್ಯಾಣಪುರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೃಷ್ಣ ದೇವಾಡಿಗ, ಪ್ರಮುಖರಾದ ಉಮೇಶ್ ಶೆಟ್ಟಿ, ಸತೀಶ್ ನಾಯ್ಕ್, ದಿನೇಶ್ ಪ್ರಭು, ಅಮಿತ್ ಪೂಜಾರಿ, ಪ್ರಸಾದ್ ರಾವ್, ಚಿನ್ಮಯ ಮೂರ್ತಿ, ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News