ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ‘ಸ್ಪಾರ್ಕಲ್ ಆಫ್ ಹೆವೆನ್’ ಸಂಗ್ರಹ ಅನಾವರಣ

Update: 2023-07-16 13:15 GMT

ಉಡುಪಿ, ಜು.16: ನಗರದ ಗೀತಾಂಜಲಿ ಶಾಪರ್ ಸಿಟಿಯಲ್ಲಿರುವ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಮಳಿಗೆಯಲ್ಲಿ ‘ಸ್ಪಾರ್ಕಲ್ ಆಫ್ ಹೆವೆನ್’ ಮೈನ್ ವಜ್ರಾಭರಣದ ನವೀನ ಸಂಗ್ರಹವನ್ನು ಇಂದು ಅನಾವರಣ ಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಲರ್ಸ್‌ ಕನ್ನಡದ ಮಜಾ ಭಾರತ ಖ್ಯಾತಿಯ ಆರಾಧನ ಭಟ್, ಸರಹ ಫೆರ್ನಾಂಡೀಸ್, ಹಂಸಿಕ ಈ ನೂತನ ಸಂಗ್ರಹ ಗಳನ್ನು ಅನಾವರಣಗೊಳಿಸಿದರು.

ಮಲಬಾರ್ ಗೋಲ್ಡ್ ಸಿಬ್ಬಂದಿ ಸುಮಿತ್ ಮಾತನಾಡಿ, ಆಧುನಿಕ ಮಹಿಳೆಗಾಗಿ ತಯಾರಿಸಿದ ಅದ್ಭುತ ಸಂಗ್ರಹವನ್ನು ಪ್ರದರ್ಶಿಸಲಾಗುತ್ತಿದೆ. ವಿವಿಧ ಆಕಾರಗಳ ವಿಶಿಷ್ಟ ವಜ್ರಗಳನ್ನು ಸಂಯೋಜಿತ ವಿನ್ಯಾಸದ ಆಭರಣಗಳು ಸಂಗ್ರಹದಲ್ಲಿದೆ. ಈ ಸಂಗ್ರಹದಲ್ಲಿರುವ ಪ್ರತಿಯೊಂದು ಆಭರಣವು ಸ್ವರ್ಗೀಯ ಆಕರ್ಷಯಣೆಯಾಗಿದೆ ಮತ್ತು ಧರಿಸುವ ಪ್ರತಿ ಮಹಿಳೆಯ ಸೊಬಗನ್ನು ಅಲೌಕಿಕವಾಗಿಸುತ್ತದೆ. ಈ ಆಭರಣಗಳು ಕೇವಲ 30,000ರೂ. ಬೆಲೆಯಿಂದ ಆರಂಭವಾಗುತ್ತದೆ ಎಂದರು.

28 ಹಂತದ ಗುಣಮಟ್ಟ ಪರೀಕ್ಷಿಸಿದ, ಐಎಐ ಪ್ರಮಾಣೀಕೃತ, ಶೇ.100 ವಿನಿಮಯ ಮೌಲ್ಯ ಹಾಗೂ ಬೈಬಾಕ್ ಗ್ಯಾರಂಟಿ, ಜೀವನ ಪರ್ಯಂತ ಉಚಿತ ನಿರ್ವಹಣೆ ಹಾಗೂ ಉಚಿತ ವಿಮೆಯಂತಹ ಸೌಲಭ್ಯವನ್ನು ಒದಗಿಸಲಾಗಿದೆ ಎಂದು ಅವರು ತಿಳಿಸಿದರು.

ಶಾಖಾ ಮುಖ್ಯಸ್ಥರಾದ ಹಫೀಝ್ ರೆಹಮಾನ್, ಗ್ರಾಹಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ವಿಘ್ನೇಶ್ ಕ್ರಾಯಕ್ರಮ ನಿರೂಪಿಸಿ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News