ಸಮಾಜದ ಶ್ರೇಯೋಭಿವೃದ್ಧಿಗೆ ರೋಟರಿ ದೇರಳಕಟ್ಟೆ ಸಂಸ್ಥೆಯ ಕೊಡುಗೆ ಅಪಾರ: ಡಾ. ದೇವದಾಸ್ ರೈ

Update: 2023-07-11 17:46 GMT

ಮಂಗಳೂರು: ‘‘ಸಮಾಜದ ಶ್ರೇಯೋಭಿವೃದ್ಧಿಗೆ ರೋಟರಿ ದೇರಳಕಟ್ಟೆ ಸಂಸ್ಥೆಯ ಕೊಡುಗೆ ಅಪಾರ . ಸದಸ್ಯರ ನಿಷ್ಠೆ, ಕಠಿಣಪರಿಶ್ರಮ, ನಿಸ್ವಾರ್ಥ ಸೇವಾ ಮನೋಭಾವದಿಂದ ಸಂಸ್ಥೆ ಯಶಸ್ಸು ಗಳಿಸಿದೆ ಎಂದು ಮಾಜಿ ರೋಟರಿ ಜಿಲ್ಲಾ ಗವರ್ನರ್ ಡಾ. ದೇವದಾಸ್ ರೈ ಅಭಿಪ್ರಾಯಪಟ್ಟಿದ್ದಾರೆ. ನಗರದ ಈಡನ್ ಕ್ಲಬ್ ಸಭಾಂಗಣದಲ್ಲಿ ಜರಗಿದ ರೋಟರಿ ಕ್ಲಬ್ ದೇರಳಕಟ್ಟೆ ಸಂಸ್ಥೆಯ ೧೫ನೇ ವಾರ್ಷಿಕ ಸ್ಥಾಪನಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಸಂಸ್ಥೆಯು ರೋಟರಿ ಜಿಲ್ಲಾ ಮಟ್ಟದಲ್ಲಿ ಪಡೆದ ಪ್ರಶಸ್ತಿಯನ್ನು ಅಭಿನಂದಿಸಿದರು.

ಸಂಸ್ಥೆಯ ಸಲಹೆಗಾರ ಡಾ. ದೇವದಾಸ್‌ರೈ ಅವರ ಅನುಪಮ ಸೇವೆಯನ್ನು ಪರಿಗಣಿಸಿ ಸನ್ಮಾನಿಸಲಾಯಿತು. ಸಂಸ್ಥೆಯ ಸ್ಥಾಪನಾ ಸದಸ್ಯರಾದ ಡಾ. ಅನಂತನ್, ರವಿಶಂಕರ್ ರಾವ್, ಜೆ.ಪಿ. ರೈಅವರನ್ನು ಸನ್ಮಾನಿಸಲಾಯಿತು. ಮಾಜಿಅಧ್ಯಕ್ಷ ರವೀಂದ್ರ ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು.

ರೋಟರಿ ಜಿಲ್ಲಾ ಯೋಜನೆ ವಿದ್ಯಾಸಿರಿಯ ಅಂಗವಾಗಿ ದ.ಕ.ಜಿ.ಪ. ಪ್ರೌಢಶಾಲೆ ಬಬ್ಬುಕಟ್ಟೆಯ ಪ್ರತಿಭಾವಂತ ವಿದ್ಯಾರ್ಥಿನಿಯವರಾದ ಫಾತಿಮಾ ಹೈಪಾ ಹಾಗು ಜೈನಬಾ ಹೈಪಾ ರವರನ್ನು ಅಭಿನಂದಿಸಿ ವಿದ್ಯಾರ್ಥಿ ವೇತನವನ್ನು ವಿತರಿಸಿದರು.

ಜಿಲ್ಲೆಯ ಸಹಾಯಕ ಗರ್ವನರ್ ಪಿ.ಡಿ. ಶೆಟ್ಟಿ ಗೌರವಅತಿಥಿಯಾಗಿ ಪಾಲ್ಗೊಂಡು ಸಂಸ್ಥೆಯ ವಿವಿಧ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದು ಸಂತಸ ವ್ಯಕ್ತಪಡಿಸಿ ಅಭಿನಂದಿಸಿದರು.

ಸಂಸ್ಥೆಯ ಅಧ್ಯಕ್ಷೆ ಸೀತಾ ಲಕ್ಷ್ಮೀ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ವಾಣಿ ಲೋಕಯ್ಯ ವಾರ್ಷಿಕ ವರದಿ ಮಂಡಿಸಿದರು.

ವೇದಿಕೆಯಲ್ಲಿ ರೋಟರಿ ಜಿಲ್ಲಾ ನಿಯೋಜಿತ ಗವರ್ನರ್ ವಿಕ್ರಮ್‌ದತ್ತಾ ಸಂಸ್ಥೆಯ ಚುನಾಯಿತ ಅಧ್ಯಕ್ಷೆ ಲತಾ ವಿಕ್ರಮ್ ಉಪಸ್ಥಿತರಿದರು.

ಡಾ.ರವಿಶಂಕರ್‌ರಾವ್ ಕಾರ್ಯಕ್ರಮ ನಿರೂಪಿಸಿದರು. ಡಾ. ಅನಂತನ್ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News