ಮಣಿಪಾಲ: ಅಳಿಯನ ಮನೆಯ ಚಿನ್ನಾಭರಣ ಅತ್ತೆ ಕಳವು ಮಾಡಿದ ಆರೋಪ; ಪ್ರಕರಣ ದಾಖಲು

Update: 2023-06-23 17:06 GMT

ಉಡುಪಿ, ಜೂ.23: ಮಗಳನ್ನು ಕೊಟ್ಟ ಅತ್ತೆಯೇ ಅಳಿಯನ ಮನೆಯ ಹತ್ತು ಲಕ್ಷ ರೂ.ಗಳಿಗೂ ಅಧಿಕ ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣಗಳು ಹಾಗೂ ನಗದನ್ನು ಕಳವು ಮಾಡಿದ್ದಾರೆ ಎನ್ನಲಾದ ಘಟನೆಯೊಂದು ತಡವಾಗಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಮಣಿಪಾಲದ ಈಶ್ವರ ನಗರದಲ್ಲಿ ವಾಸವಾಗಿರುವ ಪ್ರೊ.ಭಾವಾನಾರಿ ಸತ್ಯನಾರಾಯಣ ಎಂಬವರ ಪುತ್ರ ಡಾ.ಭಾವಾನಾರಿ ಮಲ್ಲಿಕಾರ್ಜುನ್ ತನ್ನ ಹೆಂಡತಿಯ ತಾಯಿ ಎಂ.ಶೈಲಜಾ ಕುಮಾರಿ ವಿರುದ್ಧ ದೂರು ನೀಡಿದವರು.

ಕಳೆದ ಮಾರ್ಚ್ 28ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಮನೆಯ ಬೆಡ್‌ರೂಮಿನ ಕಪಾಟಿನಲ್ಲಿಟ್ಟಿದ್ದ 192 ಗ್ರಾಂ ಚಿನ್ನಾಭರಣ, 100 ಗ್ರಾಂ ಬೆಳ್ಳಿ ಆಭರಣ ಹಾಗೂ 5000ರೂ. ನಗದನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಕಳವಾದ ಸೊತ್ತುಗಳ ಒಟ್ಟು ಮೌಲ್ಯ 10,10,500ರೂ. ಎಂದು ತಿಳಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಮಣಿಪಾಲ ಪೊಲೀಸರು ತನಿಖೆ ನಡೆಸುತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News