ಮಂಗಳೂರು: ಸಂಬಳ ನೀಡಿಲ್ಲ ಎಂದು ಚಾಲಕ, ಕ್ಲೀನರ್‌ ಸೇರಿ ಲಾರಿಯ ಚಕ್ರ ಕಳವು; ಪ್ರಕರಣ ದಾಖಲು

Update: 2023-07-01 17:46 GMT

ಮಂಗಳೂರು: ಸಂಬಳ ನೀಡಿಲ್ಲ ಎಂದು ಲಾರಿಯ ಚಾಲಕ ಮತ್ತು ಕ್ಲೀನರ್‌ ಸೇರಿ ಡಿಸ್ಕ್‌ ಸಹಿತ ಲಾರಿಯ ಚಕ್ರಗಳನ್ನು ಕಳವು ಗೈದಿರುವ ಕುರಿತು ಪಣಂಬೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಾರಿ ಚಾಲಕ ಕೇರಳದ ಕೊಲ್ಲಂ ನಿವಾಸಿ ಸಮೀರ್ ಮತ್ತು ಕ್ಲೀನರ್‌ ಕನಕರಾಜು ಎಂಬವರು ಡಿಸ್ಕ್‌ ಸಹಿತ ಲಾರಿಯ ಚಕ್ರಗಳನ್ನು ಕಳವು ಮಾಡಿರುವ ಕುರಿತು ಈಗಲ್‌ ಲಾಜೆಸ್ಟಿಕ್ಸ್‌ ನ ಮ್ಯಾನೇಜರ್‌ ವೇಲುಮುರುಗನ್ ಟವರ್ಸ್ ನಾಮಕಲ್ಲು ಅವರು ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ. ಕಳವಾದ ಡಿಕ್ಸ್‌ ಸಹಿತ ಚಕ್ರಗಳ ಒಟ್ಟು ಮೌಲ್ಯ 2.06 ಲಕ್ಷ ರೂ ಎಂದು ಅಂದಾಜಿಸಲಾಗಿದೆ.

ಪಣಂಬೂರು ಪೊಲೀಸ್‌ ಠಾಣೆಯಲ್ಲಿ ಚಾಲಕ ಸಮೀರ್‌ ಮತ್ತು ಕ್ಲೀನರ್‌ ಕನಕರಾಜು ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News