ಯಕ್ಷಗಾನ ಸವ್ಯಸಾಚಿ ತೋನ್ಸೆ ಜಯಂತ್‌ಕುಮಾರಗೆ ನುಡಿನಮನ

Update: 2023-06-30 14:33 GMT

ಉಡುಪಿ: ಜೂ.೨೬ರಂದು ಅಗಲಿದ ಯಕ್ಷಗಾನ ಗುರು, ಭಾಗವತ, ಯಕ್ಷಗಾನದ ಸವಾರ್ಂಗಗಳನ್ನು ಬಲ್ಲ ಕಲಾವಿದ ತೋನ್ಸೆ ಜಯಂತ್ ಕುಮಾರರ ಶ್ರದ್ಧಾಂಜಲಿ ಸಭೆ ಉಡುಪಿ ಬನ್ನಂಜೆಯ ನಾರಾಯಣಗುರು ಅಡಿಟೋರಿಯಂನಲ್ಲಿ ಗುರುವಾರ ಜರಗಿತು.

ಉಡುಪಿಯ ಯಕ್ಷಗಾನ ಕಲಾರಂಗ, ಯಕ್ಷಶಿಕ್ಷಣ ಟ್ರಸ್ಟ್ ಹಾಗೂ ತೋನ್ಸೆಯವರ ಶಿಷ್ಯವೃಂದ ಸಂಯುಕ್ತವಾಗಿ ಕಾರ್ಯಕ್ರಮ ಆಯೋಜಿಸಿದ್ದವು ಬನ್ನಂಜೆ ಬಿಲ್ಲವರ ಸಂಘದ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.

ಉಡುಪಿ ಶಾಸಕ, ಯಕ್ಷಶಿಕ್ಷಣ ಟ್ರಸ್ಟ್‌ನ ಅಧ್ಯಕ್ಷರಾದ ಯಶಪಾಲ್ ಸುವರ್ಣ, ನಿಕಟಪೂರ್ವ ಶಾಸಕ, ಯಕ್ಷಶಿಕ್ಷಣ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಕೆ.ರಘುಪತಿ ಭಟ್, ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರರಾವ್ ಸಂಸ್ಥೆಗೆ ಅವರು ನೀಡಿದ ಸೇವೆಯನ್ನು ಸ್ಮರಿಸಿದರು.

ಹಿರಿಯ ಯಕ್ಷಗಾನ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ಮಾತನಾಡಿ ತಮ್ಮ ತಂದೆ ಕಾಂತಪ್ಪ ಮಾಸ್ತರಿಂದ ಪಡೆದ ಯಕ್ಷಗಾನಕಲೆಯನ್ನು ಅವರಂತೆ ಸಾವಿರಾರು ವಿದ್ಯಾರ್ಥಿಗಳಿಗೆ ಕಲಿಸಿದ್ದಾರೆ. ಹೊಸ ಕಾಲದ ಯಾವ ಗಿಮಿಕ್ಸ್‌ಗೂ ಬಲಿಯಾಗದೆ ಪರಂಪರೆಯ ಪರಿಶುದ್ಧತೆ ಕಾಯ್ದುಕೊಂಡ ಅಪೂರ್ವ ಭಾಗವತರು ಇವರಾಗಿದ್ದರು ಎಂದು ಅಭಿಪ್ರಾಯ ಪಟ್ಟರು.

ಎಸ್.ವಿ.ಭಟ್, ಐರೋಡಿ ಗೋವಿಂದಪ್ಪ, ಪುಂಡರೀಕಾಕ್ಷ ಉಪಾಧ್ಯ, ಉದ್ಯಾವರ ನಾಗೇಶ್‌ಕುಮಾರ್, ಮೂಕಾಂಬಿಕಾ ವಾರಂಬಳ್ಳಿ, ಸುಜುೀಂದ್ರ ಹಂದೆ, ಗುಂಡ್ಮಿ ಸದಾನಂದ ಐತಾಳ್, ಶೇಖರ ಅಂಚನ್, ಕೃಷ್ಣಸ್ವಾಮಿ ಜೋಯಿಸ, ಬಿ.ಕೇಶವರಾವ್, ರತ್ನಾಕರ ಆಚಾರ್ಯ, ಡಾ.ಪ್ರತಿಮಾ ಜಯಪ್ರಕಾಶ್ ಆಚಾರ್ಯ ನುಡಿನಮನ ಸಲ್ಲಿಸಿದರು.

ಕಾರ್ಯದರ್ಶಿಮುರಲಿ ಕಡೆಕಾರ್‌ಕಾರ್ಯಕ್ರಮನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News