ಜು.19ರಿಂದ ಉದ್ನಾ -ಮಂಗಳೂರು ಜಂಕ್ಷನ್ ರೈಲು ರದ್ದು

Update: 2023-07-12 14:56 GMT

ಫೈಲ್‌ ಫೋಟೊ 

ಮಂಗಳೂರು, ಜು.12: ಉದ್ನಾ - ಮಂಗಳೂರು ಜಂಕ್ಷನ್ ನಡುವೆ ವಿಶೇಷ ರೈಲು ಸಂಖ್ಯೆ 09057 ಮತ್ತು ರೈಲು ಸಂಖ್ಯೆ 09058 ಜು.19ರಿಂದ ಆಗಸ್ಟ್ 30ರ ವರೆಗೆ ರದ್ದಾಗಲಿದೆ.

ರಸ್ತೆ ಕೆಳ ಸೇತುವೆ ನಿರ್ಮಾಣಕ್ಕಾಗಿ ಮಂಡ್ಯ ಯಾರ್ಡ್‌ನಲ್ಲಿ ಟ್ರ್ಯಾಕ್ ನಿರ್ವಹಣೆ ಮತ್ತು ರಸ್ತೆಗಳನ್ನು ಸ್ಥಗಿತಗೊಳಿಸಲು ಅನುಕೂಲವಾಗುವಂತೆ, ಕೆಲವು ರೈಲು ಸೇವೆಗಳಲ್ಲಿ ಈ ಬದಲಾವಣೆಗಳನ್ನು ಮಾಡಲಾಗಿದೆ.

ಜುಲೈ 17ರಂದು ರೈಲು ಸಂಖ್ಯೆ16586 ಮಂಗಳೂರು ಸೆಂಟ್ರಲ್ - ಎಸ್‌ಎಂವಿಬಿ ಬೆಂಗಳೂರು ಎಕ್ಸ್‌ಪ್ರೆಸ್ ರೈ ಲು (ನಂ.16585) 45 ನಿಮಿಷಗಷ್ಟು ತಡವಾಗಿ ಹೊರಡಲಿದೆ. ರೈಲು ಸಂಖ್ಯೆ 16585 ಎಸ್‌ಎಂವಿಬಿ ಬೆಂಗಳೂರು-ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲು ಓಡಾಟವು ಜು. 22 ಮತ್ತು 30 ರಂದು (ಎರಡು ದಿನಗಳವರೆಗೆ ಮಾತ್ರ) ಮಾತ್ರ ಇರುತ್ತದೆ ಎಂದು ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News