ಉಡುಪಿ: ಭಾರೀ ಮಳೆಗೆ 32 ಮನೆಗಳು, ದನದ ಕೊಟ್ಟಿಗೆಗೆ ಹಾನಿ

Update: 2023-07-06 16:01 GMT

ಉಡುಪಿ, ಜು.6: ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಾದ್ಯಂತ ಸುರಿಧ ಧಾರಾಕಾರ ಮಳೆಗೆ ಜಿಲ್ಲೆಯಲ್ಲಿ 32 ಮನೆಗಳು ಹಾಗೂ ಎರಡು ಜಾನುವಾರು ಕೊಟ್ಟಿಗೆಗಳಿಗೆ ಹಾನಿಯಾದ ವರದಿಗಳು ಬಂದಿವೆ.

ಕುಂದಾಪುರ ತಾಲೂಕಿನಲ್ಲಿ 9ಮನೆಗಳಿಗೆ, ಉಡುಪಿ ತಾಲೂಕಿನಲ್ಲಿ 7, ಬ್ರಹ್ಮಾವರ ತಾಲೂಕಿನಲ್ಲಿ 9, ಕಾಪು ತಾಲೂಕಿನಲ್ಲಿ 3, ಕಾರ್ಕಳ ತಾಲೂಕಿನಲ್ಲಿ ಮೂರು, ಬೈಂದೂರು ತಾಲೂಕಿನಲ್ಲಿ ಒಂದು ಮನೆಗೆ ಹಾನಿಯಾಗಿದ್ದು ಲಕ್ಷಾಂತರ ರೂ.ನಷ್ಟವಾಗಿರುವ ಬಗ್ಗೆ ಇಲ್ಲಿಗೆ ಮಾಹಿತಿಗಳು ಬಂದಿವೆ.

ಕಾಪು ತಾಲೂಕು 92 ಹೇರೂರು ಗ್ರಾಮದ ದೇವಕಿ ಶೆಡ್ತಿ ಎಂಬವರ ಮನೆ ಮೇಲೆ ಮರ ಬಿದ್ದು ಗೋಡೆ ಕುಸಿದು ಭಾಗಶ: ಹಾನಿಯಾಗಿದ್ದು ಒಂದು ಲಕ್ಷ ರೂ.ನಷ್ಟದ ಅಂದಾಜು ಮಾಡಲಾಗಿದೆ. ಉಡುಪಿಯ ಶಿವಳ್ಳಿ ಗ್ರಾಮದ ಯಶೋಧ ಎಂಬವರ ಮನೆ ಮೇಲೂ ಮರ ಬಿದ್ದು ಒಂದು ಲಕ್ಷರೂ. ನಷ್ಟದ ಅಂದಾಜು ಮಾಡಲಾಗಿದೆ.

ತೆಂಕನಿಡಿಯೂರು ಗ್ರಾಮದ ಟಿ.ರಾಘವೇಂದ್ರ ಅವರ ಮನೆಗೆ 50,000ರೂ., ಉದ್ಯಾವರದ ಆಶಾ ಅಮೀನ್ ಮನೆಗೆ 25ಸಾವಿರ, ಬೈಂದೂರು ತಾಲೂಕು ಹಡವು ಕುಸುಮ ಎಂಬವರ ಮನೆಎ 25 ಸಾವಿರ ರೂ., ಕುಂದಾಪುರ ತಾಲೂಕಿನ ಬಸ್ರೂರು ಗ್ರಾಮ ರಾದಾ, ಉಮೈರಾ ಹಾಗೂ ಗುಜ್ಜಾಡಿಯ ಸೀತಾರಾಮ ಆಚಾರಿ ಮನೆಗೆ ತಲಾ 40,000ರೂ. ನಷ್ಟವಾದ ಬಗ್ಗೆ ಮಾಹಿತಿ ಬಂದಿದೆ.

ಕಾರ್ಕಳದ ನಿಂಜೂರು ಗ್ರಾಮದ ಶಂಕರನಾರಾಯಣ ನಾಯಕ್ ಮನೆಗೆ 60,000ರೂ., ಬ್ರಹ್ಮಾವರ ಹೆಗ್ಗುಂಜೆ ಉದಯ ನಾಯ್ಕರ ಮನೆ, ಚಿತ್ರಪಾಡಿಯ ಚಂದ್ರ ಆಚಾರ್ ಮನೆಗೆ ತಲಾ 70ಸಾವಿರ ರೂ.ಗಳ ಹಾನಿ ಸಂಭವಿಸಿದೆ.

ಇನ್ನು ಉಡುಪಿ ತಾಲೂಕು ಹೆರ್ಗಾ ಗ್ರಾಮದ ಭಾರತಿ ಪಾಟೀಲ್‌ರ ಜಾನುವಾರ ಕೊಟ್ಟಿಗೆ ಮೇಲೆ ಮರ ಬಿದ್ದು, ಬೈಂದೂರು ತಾಲೂಕು ಯಡ್ತರೆ ಗ್ರಾಮದ ಮಾಚಿ ಪೂಜಾರ್ತಿ ಅವರ ಜಾನುವಾರು ಕೊಟ್ಟಿಗೆ ಮಳೆಯಿಂದ ಕುಸಿದು ಅಪಾರ ನಷ್ಟ ಸಂಭವಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News