ಉಡುಪಿ: ಪೌರಕಾರ್ಮಿಕರಿಗೆ ತರಬೇತಿ ಕಾರ್ಯಾಗಾರ

Update: 2023-07-15 14:18 GMT

ಉಡುಪಿ, ಜು.15: ಮ್ಯಾನ್ಯುವಲ್ ಸ್ಕ್ಯಾವೆಂಜರ್‌ಗಳ ನೇಮಕಾತಿ ನಿಷೇಧ ಮತ್ತು ಪುನರ್ವಸತಿ ಅಧಿನಿಯಮ 2013 ರ ಕಾಯ್ದೆ ಹಾಗೂ ನಿಯಮಗಳ ಬಗ್ಗೆ, ಸುರಕ್ಷತಾ ಪರಿಕರಗಳನ್ನು ಬಳಸದೇ ಬರಿಗೈನಿಂದ ಸ್ವಚ್ಛತೆ ಮಾಡಿದ್ದಲ್ಲಿ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳು ಹಾಗೂ ಸುರಕ್ಷತಾ ಪರಿಕರಗಳನ್ನು ಕಡ್ಡಾಯವಾಗಿ ಬಳಕೆ ಮಾಡುವುದರ ಕುರಿತು ಪೌರಕಾರ್ಮಿಕ ರಿಗೆ ತರಬೇತಿ ಕಾರ್ಯಾಗಾರ ಗುರುವಾರ ನಗರದ ಪುರಭವನದಲ್ಲಿ ನಡೆಯಿತು.

ಉಡಪಿ ನಗರಸಭೆಯ ಪೌರಾಯುಕ್ತ ರಾಯಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಕಲ್ಯಾಣ ಇಲಾಖೆಯ ರಮೇಶ ಪೌರಕಾರ್ಮಿಕರ ಸಿಂಧುತ್ವ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ಸಿಗುವ ಸೌಲಭ್ಯಗಳ ಕುರಿತು, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಶಂಕರ ಮಲ್ಲಾರ್ ಪೌರ ಕಾರ್ಮಿಕರಿಗೆ ನಿಗಮದಿಂದ ಸಿಗುವ ಸೌಲಭ್ಯಗಳ ಬಗ್ಗೆ, ಡಾ. ಸಾತ್ವಿಕ್ ಮಲೇರಿಯಾ, ಡೆಂಗ್ ಹಾಗೂ ಇತರೆ ಕಾಯಿಲೆಗಳ ಬಗ್ಗೆ ಮತ್ತು ನಗರಸಭೆಯ ಪರಿಸರ ಅಭಿಯಂತರರು ಏಕ ಬಳಕೆ ಪ್ಲಾಸ್ಟಿಕ್ ನಿಷೇಧಕ್ಕೆ ಸಂಬಂಧಿಸಿದಂತೆ ಮಾಹಿತಿಗಳನ್ನು ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News