ಉಡುಪಿ: ಕೆವೈಸಿ ಅಪ್‌ಡೇಟ್ ಮಾಡುವುದಾಗಿ ಲಕ್ಷಾಂತರ ರೂ. ಆನ್‌ಲೈನ್ ನಲ್ಲಿ ವಂಚನೆ
Update: 2023-06-22 17:27 GMT
ಉಡುಪಿ, ಜೂ.22: ಕೆವೈಸಿ ಅಪ್ಡೇಟ್ ಮಾಡುವ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ಆನ್‌ಲೈನ್ ಮೂಲಕ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂ.21ರಂದು ಡೆವಿಡ್ ಅಶೋಕ್ ರೋಡ್ರಿಗಸ್ ಎಂಬವರ ಮೊಬೈಲ್‌ಗೆ ಕೆವೈಸಿ ಅಪ್ಡೇಟ್ ಮಾಡುವ ಬಗ್ಗೆ ಸಂದೇಶ ಬಂದಿದ್ದು, ಈ ಸಂದೇಶವನ್ನು ಬ್ಯಾಂಕ್‌ನವರೇ ಕಳಿಸಿರಬಹುದೆಂದು ನಂಬಿದ ಇವರು, ಕರೆ ಮಾಡಿ ಮಾತನಾಡಿದ್ದಾರೆ. ಬಳಿಕ ಯಾರೋ ಅಪರಿಚಿತ ವ್ಯಕ್ತಿ ಕರೆ ಮಾಡಿ ತಾನು ಕೆನರಾ ಬ್ಯಾಂಕ್ ಮುಖ್ಯ ಕಚೇರಿ ಯಿಂದ ಮಾತನಾಡುತ್ತಿರುವುದಾಗಿ ಹೇಳಿ ಬ್ಯಾಂಕ್ ಖಾತೆಯ ಕೆವೈಸಿ ಅಪ್ಡೇಟ್ ಮಾಡುವಂತೆ ತಿಳಿಸಿದರು. ಡೇವಿಡ್ ಅವರಿಂದ ಓಟಿಪಿ ಪಡೆದು ಒಟ್ಟು 3,99,989 ರೂ. ಹಣವನ್ನು ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿ ವಂಚಿಸಿರುವುದಾಗಿ ದೂರಲಾಗಿದೆ.