ಉಪ್ಪಿನಂಗಡಿ: ಹಾಜಿ ಮುಸ್ತಾಫ ಕೆಂಪಿ ಸ್ಮರಣಾರ್ಥ ರಕ್ತದಾನ ಶಿಬಿರ, ಅನುಸ್ಮರಣೆ

Update: 2023-07-14 17:22 GMT

ಉಪ್ಪಿನಂಗಡಿ: ಇಲ್ಲಿನ ಮಾಲೀಕುದ್ದೀನಾರ್ ಜುಮಾ ಮಸೀದಿಯ ಅಧ್ಯಕ್ಷರಾಗಿದ್ದ, ಧಾರ್ಮಿಕ, ಸಾಮಾಜಿಕ ನೇತಾರ ಹಾಜಿ ಮುಸ್ತಾಫಾ ಕೆಂಪಿಯವರ ಸ್ಮರಣಾರ್ಥ ಬೃಹತ್ ರಕ್ತದಾನ ಶಿಬಿರ ಉಪ್ಪಿನಂಗಡಿಯ ಇಂಡಿಯನ್ ಸ್ಕೂಲ್‍ನಲ್ಲಿ ನಡೆಯಿತು. ಬಳಿಕ ಮಾಲೀಕುದ್ದೀನಾರ್ ಮಸೀದಿಯಲ್ಲಿ ಜುಮಾ ನಮಾಝಿನ ಬಳಿಕ ತಹಲೀಲ್ ಸಮರ್ಪಣೆ, ಅನುಸ್ಮರಣಾ ಕಾರ್ಯಕ್ರಮ ನಡೆಯಿತು.

ಹಾಜಿ ಮುಸ್ತಫಾ ಕೆಂಪಿಯವರ ಕಬರ್ ಝೀಯಾರತ್ ನೇತೃತ್ವವನ್ನು ಆತೂರಿನ ಬದ್ರಿಯಾ ಜುಮಾ ಮಸೀದಿಯ ಖತೀಬರಾದ ಸೈಯ್ಯದ್ ಜುನೈದ್ ಜಿಫ್ರೀ ತಂಙಳ್ ವಹಿಸಿದ್ದರು. ರಕ್ತದಾನ ಶಿಬಿರವನ್ನು ಮಾಲೀಕುದ್ದೀನಾರ್ ಜುಮಾ ಮಸೀದಿಯ ಖತೀಬರಾದ ಅಬ್ದುಸ್ಸಲಾಂ ಫೈಝಿ ಉದ್ಘಾಟಿಸಿ, ದುವಾಶೀರ್ವಚನಗೈದರು.

ಶುಕ್ರವಾರದ ಜುಮಾ ನಮಾಝ್ ಬಳಿಕ ನಡೆದ ತಹಲೀಲ್ ಸಮರ್ಪಣೆ ಹಾಗೂ ಅನುಸ್ಮರಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಲೀಕುದ್ದೀನಾರ್ ಜುಮಾ ಮಸೀದಿಯ ಉಪಾಧ್ಯಕ್ಷ ಹಾಜಿ ಎಚ್. ಯೂಸುಫ್ ವಹಿಸಿದ್ದರು. ದಾರುಸ್ಸಲಾಂ ಬೆಳ್ತಂಗಡಿಯ ಸೈಯ್ಯದ್ ಝೈನುಲ್ ಆಬಿದೀನ್ ಜಿಫ್ರೀ ತಂಙಳ್ ದುವಾಶೀರ್ವಚನ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಕರ್ವೇಲು ಜುಮಾ ಮಸೀದಿಯ ಖತೀಬ್ ಸೈಯ್ಯದ್ ಅನಾಸ್ ತಂಙಳ್, ಸಮಸ್ತ ಕೇಂದ್ರ ಮುಶಾವರದ ಸದಸ್ಯರಾದ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ, ಉಸ್ಮಾನ್ ಫೈಝಿ ತೋಡಾರ್, ಮಾಲೀಕುದ್ದೀನಾರ್ ಜುಮಾ ಮಸೀದಿಯ ಖತೀಬ್ ಅಬ್ದುಸ್ಸಲಾಂ ಫೈಝಿ, ದಾರಿಮೀಸ್ ಅಸೋಸಿಯೇಶನ್‍ನ ರಾಜ್ಯಾಧ್ಯಕ್ಷ ಎಸ್.ಬಿ. ಮುಹಮ್ಮದ್ ದಾರಿಮಿ, ವಿವಿಧ ಮಸೀದಿಗಳ ಉಸ್ತಾದರು, ಅಧ್ಯಕ್ಷರು ಉಪಸ್ಥಿತರಿದ್ದರು.

ರಕ್ತದಾನ ಶಿಬಿರದಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವೃತ್ತ ನಿರೀಕ್ಷಕ ಬಿ.ಎಸ್. ರವಿ ದಂಪತಿ, ಉಪ್ಪಿನಂಗಡಿ ಪೊಲೀಸ್ ಉಪನಿರೀಕ್ಷಕ ರಾಜೇಶ್ ಕೆ.ವಿ., ಉದ್ಯಮಿ ಸಂತೋಷ್ ಕಾಮತ್ ಸೇರಿದಂತೆ ನೂರಾರು ಮಂದಿ ರಕ್ತದಾನ ಮಾಡಿದರು.

ಕಾರ್ಯಕ್ರಮದಲ್ಲಿ ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್‍ನ ಅಧ್ಯಕ್ಷ ಡಾ. ರಾಜಾರಾಮ್ ಕೆ.ಬಿ., ನಿವೃತ್ತ ಪ್ರಾಧ್ಯಾಪಕ ವಿನ್ಸೆಂಟ್ ಫೆರ್ನಾಂಡಿಸ್, ಉಪ್ಪಿನಂಗಡಿ ಗ್ರಾ.ಪಂ. ಸದಸ್ಯ ವಿನಾಯಕ ಪೈ, ಸಾಮಾಜಿಕ ಕಾರ್ಯಕರ್ತರಾದ ಜಬ್ಬಾರ್ ಮಾರಿಪಳ್ಳ, ಸುಳ್ಯ ನಗರ ಪಂಚಾಯತ್ ಸದಸ್ಯ ಶರೀಫ್ ಸುಳ್ಯ, ಸುಳ್ಯ ಯುವ ಕಾಂಗ್ರೆಸ್ ನೇತಾರ ಸಿದ್ದೀಕ್, ವಕೀಲ ನೂರುದ್ದೀನ್ ಸಾಲ್ಮರ, ಉಪ್ಪಿನಂಗಡಿ ಗ್ರಾಮ ಪಂಚಾಯತ್ ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೊಡ್ರಿಗಸ್, ಉದ್ಯಮಿಗಳಾದ ಯು. ರಾಮ, ಆಶ್ರಫ್ ಮೈಸೂರು, ಕಬೀರ್ ಸಾಲ್ಮರ, ಹಾಫೀಲ್ ಕೂರ್ನಡ್ಕ ಮತ್ತಿತರರು ಉಪಸ್ಥಿತರಿದ್ದರು.

ಎಚ್. ಯೂಸುಫ್, ಹಾರೂನ್ ಆಗ್ನಾಡಿ, ಶುಕೂರ್ ಹಾಜಿ ಶುಕ್ರಿಯಾ, ರವೂಫ್ ಹಾಜಿ, ಮಹಮ್ಮದ್ ಮುಸ್ತಫಾ, ಹಮೀದ್ ಕರಾವಳಿ, ಸಿದ್ದೀಕ್ ಕೆಂಪಿ, ಮುಹಮ್ಮದ್ ಕೂಟೇಲ್, ಇಸ್ಮಾಯಿಲ್ ತಂಙಳ್, ಶಬೀರ್ ಕೆಂಪಿ, ತೌಸೀಫ್ ಯು.ಟಿ., ಇರ್ಷಾದ್ ಯು.ಟಿ., ಅನಾಸ್ ದಿಲ್ದಾರ್, ಇಬ್ರಾಹೀಂ ಆಚಿ, ಹಮೀದ್ ಮೆಜೆಸ್ಟಿಕ್, ಅಶ್ರಫ್ ಅಂಬೊಟ್ಟು, ನಝೀರ್ ಮಠ, ಶಬೀರ್ ನಂದಾವರ, ಶುಕೂರ್ ಮೇದರಬೆಟ್ಟು, ಲತೀಫ್ ಎಚ್.ಎಸ್.ಎ., ಮುನೀರ್ ಎನ್ಮಾಡಿ, ಯೂಸುಫ್ ಪೆದಮಲೆ, ಫಯಾಜ್ ಯು.ಟಿ. ಮತ್ತಿತರರರು ಮುಂಚೂಣಿಯಲ್ಲಿ ನಿಂತು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

447 ಯುನಿಟ್ ರಕ್ತ ಸಂಗ್ರಹ

ಈ ಶಿಬಿರದಲ್ಲಿ 447 ಯುನಿಟ್ ರಕ್ತ ಸಂಗ್ರಹಗೊಳ್ಳುವುದರ ಮೂಲಕ ಉಪ್ಪಿನಂಗಡಿಯಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸಿತು. ಮಾಲೀಕುದ್ದೀನಾರ್ ಜುಮಾ ಮಸೀದಿ ಉಪ್ಪಿನಂಗಡಿ, ನುಸ್ರತುಲ್ ಇಸ್ಲಾಂ ಕಮಿಟಿ ಉಪ್ಪಿನಂಗಡಿಯ ನೇತೃತ್ವದಲ್ಲಿ ನಡೆದ ಈ ಶಿಬಿರಕ್ಕೆ ಎಸ್ಕೆಎಸ್ಸೆಸ್ಸೆಫ್ ಉಪ್ಪಿನಂಗಡಿ ಕ್ಲಸ್ಟರ್, ಜಂಇಯ್ಯತುಲ್ ಮುಅಲ್ಲಿಮೀನ್ ಉಪ್ಪಿನಂಗಡಿ ರೇಂಜ್, ರೇಂಜ್ ಮದರಸಾ ಮ್ಯಾನೇಜ್ಮೆಂಟ್ ಕಮಿಟಿ ಉಪ್ಪಿನಂಗಡಿ, ಉಬಾರ್ ಡೋನರ್ಸ್ ಹೆಲ್ಪ್ ಲೈನ್, ಯೂತ್ ಐಕಾನ್ ಚಾರಿಟೇಬಲ್ ಟ್ರಸ್ಟ್, ನೂರಾನಿಯಾ ಯಂಗ್‍ಮೆನ್ಸ್ ಅಸೋಸಿಯೇಷನ್ ಕುದ್ಲೂರು, ಅಲ್ ಅಮೀನ್ ಯಂಗ್ ಮೆನ್ಸ್ ಅಸೋಸಿಯೇಷನ್ ಕಡಿವಿನಬಾಗಿಲು, ಸುಲ್ತಾನ್ ಯೂಥ್ ಫೆಡರೇಶನ್ ಹಳೆಗೇಟು, ಸಬೀಲ್ರುಶಾದ್ ಯಂಗ್‍ಮೆನ್ಸ್ ಅಸೋಸಿಯೇಷನ್ ನಿನ್ನಿಕಲ್ಲು, ಶಂಶುಲ್ ಉಲೇಮಾ ಯಂಗ್‍ಮೆನ್ಸ್ ಅಸೋಸಿಯೇಷನ್ ಪವಿತ್ರನಗರ, ಇತ್ತಿಫಾಕುಲ್ ಮುಸ್ಲಿಮೀನ್ ವೆಲ್ಫೇರ್ ಅಸೋಸಿಯೇಶನ್ ಪೆರಿಯಡ್ಕ, ವಿಖಾಯ ರಕ್ತದಾನಿ ಬಳಗ, ದ.ಕ. ಜಿಲ್ಲೆ ಮತ್ತು ಬ್ಲಡ್ ಡೋನರ್ಸ್ ಮಂಗಳೂರು ಸಂಘಟನೆಗಳು ಸಹಕಾರ ನೀಡಿದವು.








 


 


 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News