ಕೊಂಕಣ ರೈಲು ಮಾರ್ಗದಲ್ಲೂ ವಂದೇ ಭಾರತ್ ರೈಲು ಸಂಚಾರ

Update: 2023-06-27 13:55 GMT

ಫೈಲ್‌ ಫೋಟೊ 

ಉಡುಪಿ, ಜೂ.27: ದೇಶದ ಜನರ ಭಾರೀ ಕುತೂಹಲಕ್ಕೆ ಕಾರಣವಾಗಿರುವ ‘ವಂದೇ ಭಾರತ್’ ರೈಲು ಕೊಂಕಣ ರೈಲು ಮಾರ್ಗದಲ್ಲೂ ತನ್ನ ಸಂಚಾರವನ್ನು ನಡೆಸಲಿದೆ. ಕೊಂಕಣ ರೈಲು ಮಾರ್ಗದ ಮಡಗಾಂವ್ ಜಂಕ್ಷನ್- ಮುಂಬೈ ಸಿಎಸ್‌ಎಂಟಿ- ಮಡಗಾಂವ್ ಜಂಕ್ಷನ್ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಜೂನ್ 28ರಿಂದ ವಾರದಲ್ಲಿ ಮೂರು ದಿನ ಓಡಿಸಲು ರೈಲ್ವೆ ಸಚಿವಾಲಯ ನಿರ್ಧರಿಸಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.

ರೈಲು ನಂ.22229 ಮುಂಬೈ ಸಿಎಸ್‌ಎಂಟಿ-ಮಡಗಾಂವ್ ಜಂಕ್ಷನ್ ವಂದೇ ಭಾರತ್ ರೈಲು ಮಾನ್ಸೂನ್ ವೇಳಾಪಟ್ಟಿಯಂತೆ ಜೂ.28ರಿಂದ ಅ.30ರವರೆಗೆ ಪ್ರತಿ ಸೋಮವಾರ, ಬುಧವಾರ ಹಾಗೂ ಶುಕ್ರವಾರದಂದು ಮುಂಜಾನೆ 5:25ಕ್ಕೆ ಮುಂಬೈಯಿಂದ ಹೊರಟು ಅದೇ ದಿನ ಅಪರಾಹ್ನ 3:30ಕ್ಕೆ ಮಡಗಾಂವ್ ಜಂಕ್ಷನ್ ತಲುಪಲಿದೆ.

ರೈಲು ನಂ.22230 ಮಡಗಾಂವ್ ಜಂಕ್ಷನ್- ಮುಂಬೈ ಸಿಎಸ್‌ಎಂಟಿ ವಂದೇಭಾರತ್ ರೈಲು ಮಾನ್ಸೂನ್ ವೇಳಾಪಟ್ಟಿಯಂತೆ ಜೂ.29ರಿಂದ ಅ.31ರವರೆಗೆ ಪ್ರತಿ ಮಂಗಳವಾರ, ಗುರುವಾರ ಹಾಗೂ ಶನಿವಾರದಂದು ಅಪರಾಹ್ನ 12:20ಕ್ಕೆ ಮಡಗಾಂವ್‌ನಿಂದ ಹೊರಟು ಅದೇ ದಿನ ರಾತ್ರಿ 10:25ಕ್ಕೆ ಮುಂಬೈ ತಲುಪಲಿದೆ.

ಮುಂದಿನ ನವೆಂಬರ್ 1ರ ಬಳಿಕ ರೈಲು ಮಾಮೂಲಿ ಸಮಯದಲ್ಲಿ ವಾರದಲ್ಲಿ ಆರು ದಿನ -ಸೋಮವಾರ, ಮಂಗಳವಾರ, ಬುಧವಾರ, ಗುರುವಾರ, ಶನಿವಾರ, ರವಿವಾರ- ಮುಂಬೈಯಿಂದ ಮುಂಜಾನೆ 5:25ಕ್ಕೆ ನಿರ್ಗಮಿಸಿ ಅದೇ ದಿನ 1:10ಕ್ಕೆ ಮಡಗಾಂವ್ ತಲುಪಿದರೆ, ಮಡಗಾಂವ್ ನಿಂದ ಅದೇ ದಿನ ಅಪರಾಹ್ನ 2:20ಕ್ಕೆ ಹೊರಟು ರಾತ್ರಿ10:25ಕ್ಕೆ ಮುಂಬೈ ತಲುಪಲಿದೆ.

ಈ ರೈಲಿಗೆ ದಾದರ್, ಥಾಣೆ, ಪನ್ವೇಲ್, ಖೇಡ್, ರತ್ನಗಿರಿ, ಕಂಕವಲ್ಲಿ ಹಾಗೂ ಥೀವಿಂ ನಿಲ್ದಾಣಗಳಲ್ಲಿ ನಿಲುಗಡೆ ಇದ್ದು, ರೈಲು 8 ಬೋಗಿಗಳನ್ನು ಹೊಂದಿರುತ್ತದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News