ಬಾಪೂಜಿ ಸೇವಾ ಕೇಂದ್ರಗಳಲ್ಲಿ ವಿವಿಧ ನಾಗರಿಕ ಸೇವಾ ಸೌಲಭ್ಯ
Update: 2023-07-15 13:59 GMT
ಉಡುಪಿ, ಜು.15: ಗ್ರಾಮಪಂಚಾಯತ್ ಕಚೇರಿಗಳಲ್ಲಿ ಸ್ಥಾಪಿಸಲಾಗಿರುವ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಸರಕಾರದಿಂದ ನೀಡಲಾಗುವ ವಿವಿಧ ನಾಗರಿಕ ಸೇವಾ ಸೌಲಭ್ಯವನ್ನು ಆನ್ಲೈನ್ ಮೂಲಕ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಮುಖ್ಯವಾಗಿ ಗ್ರಾಪಂಯಿಂದ ಲಭ್ಯವಾಗುವ ವಿವಿಧ ಪರವಾನಿಗೆಗಳು, ನಿರಾಪೇಕ್ಷಣಾ ಪತ್ರಗಳು, ಜನನ ಮರಣ ಪ್ರಮಾಣ ಪತ್ರಗಳು, ಕಂದಾಯ ಇಲಾಖೆಯ ಸೇವೆಯಾದ ಪಹಣಿ ಪತ್ರಿಕೆ ಮತ್ತು ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಗೃಹಜ್ಯೋತಿ, ಅನ್ನಭಾಗ್ಯ ಹಾಗೂ ಗೃಹಲಕ್ಷ್ಮೀಗೆ ನೋಂದಣಿಯೂ ಸೇರಿದಂತೆ ವಿವಿಧ ಸೇವಾ ಸೌಲಭ್ಯವನ್ನು ಈ ಸೇವಾ ಕೇಂದ್ರಗಳಲ್ಲಿ ಪಡೆಯಬಹುದಾಗಿದೆ.
ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಗ್ರಾಮ ಪಂಚಾಯತ್ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಜಿಪಂನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಳ ಕಚೇರಿ ಪ್ರಕಟಣೆ ತಿಳಿಸಿದೆ.