ದ.ಕ. ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ನೆಚ್ಚರಿಕೆ

Update: 2023-07-02 12:44 GMT

ಮಂಗಳೂರು, ಜು.2: ದ.ಕ.ಜಿಲ್ಲೆಯಲ್ಲಿ ಮುಂದಿನ 1 ವಾರಗಳ ಕಾಲ ಗಾಳಿ, ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಕೆಲವು ದಿನಗಳಿಂದ ಜಿಲ್ಲೆಯಲ್ಲಿ ದುರ್ಬಲಗೊಂಡಿದ್ದ ಮುಂಗಾರು ಸೋಮವಾರದಿಂದ ಬಿರುಸು ಪಡೆಯಲಿದೆ. ಬಿರುಗಾಳಿಯ ವೇಗವು ಗಂಟೆಗೆ 40-50 ಕಿ.ಮೀ ಇರುವ ಸಾಧ್ಯತೆ ಇದೆ ಎನ್ನಲಾಗಿದೆ.

ಜಿಲ್ಲೆಯ ಬಹುತೇಕ ಕಡೆ ರವಿವಾರ ಕೆಲಕಾಲ ಮಳೆಯಾಗಿದೆ. ಮುಂಡಾಜೆ, ಕಲ್ಲೇರಿ, ವಾಮದ ಪದವು ಮತ್ತಿತರ ಕಡೆಗಳಲ್ಲಿ ಗಾಳಿ ಸಹಿತ ಮಳೆಯಾಗಿದೆ. ಬೆಳ್ತಂಗಡಿ, ವೇಣೂರು ಸುತ್ತಮುತ್ತ ಗುಡುಗು ಸಹಿತ ಪ್ರಬಲ ಗಾಳಿ ಬೀಸಿದೆ.

ಕರಾವಳಿಯಲ್ಲಿ ಸರಾಸರಿ 30.6 ಡಿಗ್ರಿ ಗರಿಷ್ಠ, 23.5 ಕನಿಷ್ಟ ಉಷ್ಣಾಂಶ ದಾಖಲಾಗಿದೆ. ಶನಿವಾರ ಬೆಳಗ್ಗೆ 8ರಿಂದ ರವಿವಾರ ಬೆಳಗ್ಗೆ 8ರವರೆಗೆ ಬೆಳ್ತಂಗಡಿ 17.5 ಮಿಮಿ, ಬಂಟ್ವಾಳ 12.5 ಮಿಮಿ, ಪುತ್ತೂರು 8.4 ಮಿಮಿ, ಸುಳ್ಯ 8.3 ಮಿಮಿ, ಮೂಡುಬಿದಿರೆ 27.1 ಮಿಮಿ, ಕಡಬ 17.5 ಮಿಮಿ ಮಳೆಯಾಗಿದೆ.

ಪಶ್ಚಿಮ ಕರಾವಳಿಯಲ್ಲಿ ಗಾಳಿಯ ಬೀಸುವಿಕೆ ಹೆಚ್ಚಾಗಿದ್ದು, ಸೋಮೇಶ್ವರ, ಉಳ್ಳಾಲ, ಪಣಂಬೂರು, ತಣ್ಣೀರುಬಾವಿ ತೀರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ದ.ಕ.ಜಿಲ್ಲಾದ್ಯಂತ ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಮುನ್ನೆಚ್ಚರಿಕಾ ಕ್ರಮವಾಗಿ ಕರಾವಳಿಯಲ್ಲಿ ಆಳ ಮೀನುಗಾರಿಕೆಗೆ ನಿರ್ಬಂಧ ವಿಧಿಸಲಾಗಿದೆ ಎಂದು ಹವಾಮಾನ ತಜ್ಞ ಸುನೀಲ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News