ಉಡ್ನಾ ಜಂಕ್ಷನ್-ಮಂಗಳೂರು ಜಂಕ್ಷನ್ ನಡುವೆ ಸಾಪ್ತಾಹಿಕ ರೈಲು ಸಂಚಾರ
ಉಡುಪಿ, ಜೂ.28: ಜನರ ಬೇಡಿಕೆಯಂತೆ ಕೊಂಕಣ ರೈಲ್ವೆ, ಪಶ್ಚಿಮ ರೈಲ್ವೆಯ ಸಹಯೋಗದೊಂದಿಗೆ ಜೂ.28ರಿಂದ ಆ.31ರ ನಡುವೆ ಉಡ್ನಾ ಜಂಕ್ಷನ್ ಹಾಗೂ ಮಂಗಳೂರು ಜಂಕ್ಷನ್ ಮಧ್ಯೆ ಸಾಪ್ತಾಹಿಕ ರೈಲನ್ನು ಓಡಿಸಲು ನಿರ್ಧರಿಸಿದೆ.
ರೈಲು ನಂ.09057 ಉಡ್ನಾ ಜಂಕ್ಷನ್-ಮಂಗಳೂರು ಜಂಕ್ಷನ್ ಸಾಪ್ತಾಹಿಕ ವಿಶೇಷ ರೈಲು ಜೂ.28ರಿಂದ ಆ.30ರ ನಡುವೆ ಪ್ರತಿ ಬುಧವಾರ ಉಡ್ನಾ ಜಂಕ್ಷನ್‌ನಿಂದ ಹೊರಡಲಿದ್ದು, ಮರುದಿನ ಸಂಜೆ 6:30ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ.
ಅದೇ ರೀತಿ ರೈಲು ನಂ.09058 ಮಂಗಳೂರು ಜಂಕ್ಷನ್- ಉಡ್ನಾ ಜಂಕ್ಷನ್ ರೈಲು ಜೂ.29ರಿಂದ ಆ.31ರ ನಡುವೆ ಪ್ರತಿ ಗುರುವಾರ ರಾತ್ರಿ 8:45ಕ್ಕೆ ಮಂಗಳೂರು ಜಂಕ್ಷನ್‌ನಿಂದ ಹೊರಡಲಿದ್ದು, ಮರುದಿನ ರಾತ್ರಿ 8:00 ಗಂಟೆಗೆ ಉಡ್ನಾ ಜಂಕ್ಷನ್ ತಲುಪಲಿದೆ.
ಒಟ್ಟು 22 ಕೋಚ್‌ಗಳನ್ನು ಹೊಂದಿರುವ ಈ ರೈಲು ವಲ್ಸಾಡ್, ವಾಪಿ, ಪಾಲ್ಗಾರ್, ವಾಸೈ ರೋಡ್, ಬಿವಂಡಿ ರೋಡ್, ಪನ್ವೇಲ್, ರೋಹಾ, ಖೇಡ್, ಚಿಫ್ಳುಣ್, ಸಂಗಮೇಶ್ವರ ರೋಡ್, ರತ್ನಗಿರಿ, ರಾಜಪುರ ರೋಡ್, ವೈಭವವಾಡಿ ರೋಡ್, ಕಂಕವಾಲಿ, ಸಿಂಧುದುರ್ಗ, ಕುಡಾಲ, ಸಾವಂತವಾಡಿ ರೋಡ್, ಥೀವಿಂ, ಕರ್ಮಾಲಿ, ಮಡಗಾಂವ್ ಜಂಕ್ಷನ್, ಕಣಕೋನಾ, ಕಾರವಾರ, ಅಂಕೋಲ, ಗೋಕರ್ಣ ರೋಡ್, ಕುಮಟ, ಮುರ್ಡೇಶ್ವರ, ಭಟ್ಕಳ, ಮೂಕಾಂಬಿಕಾ ರೋಡ್ ಬೈಂದೂರು, ಕುಂದಾಪುರ, ಉಡುಪಿ, ಮೂಲ್ಕಿ, ಸುರತ್ಕಲ್‌ಗಳಲ್ಲಿ ನಿಲುಗಡೆಯನ್ನು ಹೊಂದಿರುತ್ತದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.