ವುಮೆನ್ ಇಂಡಿಯಾ ಮೂಮೆಂಟ್ ರಾಷ್ಟ್ರೀಯ ಜಾಗೃತಿ ಅಭಿಯಾನ

Update: 2023-07-11 15:25 GMT

ಉಡುಪಿ : ವಿಮೆನ್ ಇಂಡಿಯಾ ಮೂವ್ಮೆಂಟ್ ವತಿಯಿಂದ ಅನ್ಯಾಯದ ವಿರುದ್ಧ ಒಂದಾಗಿ ಸೆಟೆದು ನಿಲ್ಲಿರಿ ಎಂಬ ಘೋಷಣೆಯೊಂದಿಗೆ ರಾಷ್ಟ್ರೀಯ ಅಭಿಯಾನದ ಪ್ರಯುಕ್ತ ಕರ್ನಾಟಕ ರಾಜ್ಯಾದ್ಯಂತ ಸೆಮಿನಾರ್, ವೆಬಿನಾರ್, ಬಿತ್ತಿ ಪತ್ರ ಹಂಚಿಕೆ, ಕುಟುಂಬ ಸಮ್ಮಿಲನ, ಪೋಸ್ಟರ್ ಕ್ಯಾಂಪೇನ್ ಸಹಿತ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮೂಮೆಂಟ್ ಉಡುಪಿ ಜಿಲ್ಲಾಧ್ಯಕ್ಷೆ ನಾಝಿಯ ನಸ್ರುಲ್ಲಾ ತಿಳಿಸಿದ್ದಾರೆ.

ಭಾರತದಲ್ಲಿ ಮಹಿಳೆಯರ ಪರಿಸ್ಥಿತಿಯು ತೀರಾ ಶೋಚನೀಯವಾಗಿದೆ. ಇಂದು ಮಹಿಳೆಯರು ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಕ್ಷೇತ್ರದಲ್ಲೂ ಮುಂದುವರಿಯುತ್ತಿದ್ದರೂ ಈ ಎಲ್ಲಾ ಕ್ಷೇತ್ರದಲ್ಲಿ ಆಕೆಯು ನಿರಂತರವಾಗಿ ದೌರ್ಜನ್ಯ ಕ್ಕೊಳಗಾಗುತ್ತಿದ್ದಾಳೆ. ಸರಕಾರದ ಜನವಿರೋಧಿ ಆಡಳಿತದಿಂದಾಗಿ ದೇಶದ ಕಾನೂನು ಸುವ್ಯವಸ್ಥೆ, ಕಾನೂನು ದುರುಪಯೋಗದ ನೇರ ಪರಿಣಾಮವನ್ನು ಅನುಭವಿಸುತ್ತಿರುವುದು ಈ ದೇಶದ ಮಹಿಳಾ ವರ್ಗವಾಗಿದೆ ಎಂಬುದು ವಿಷಾದನೀಯ. ಇದರ ವಿರುದ್ಧ ಜಾತಿ ಮತ ಭೇದವನ್ನು ಬಿಟ್ಟು ಮಹಿಳೆಯರ ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಸಬಲೀಕರಣಕ್ಕಾಗಿ ಶ್ರಮಿಸುವ ಜೊತೆಗೆ ರಕ್ಷಣೆಯ ಖಾತ್ರಿಗಾಗಿ ಹೆಗಲಿಗೆ ಹೆಗಲು ಕೊಟ್ಟು ಒಗ್ಗಟ್ಟಾಗಿ ಹೋರಾಟವನ್ನು ಮಾಡ ಬೇಕಾಗಿದೆ. ಈ ನಿಟ್ಟಿನಲ್ಲಿ ವುಮೆನ್ ಇಂಡಿಯಾ ಮೂವ್ಮೆಂಟ್ ಅನ್ಯಾಯದ ವಿರುದ್ಧ ಒಂದಾಗಿ ಸೆಟೆದು ನಿಲ್ಲಿರಿ ಎಂಬ ಘೋಷಣೆಯೊಂದಿಗೆ ದೇಶದಾದ್ಯಂತ ರಾಷ್ಟ್ರೀಯ ಅಭಿಯಾನವನ್ನು ಹಮ್ಮಿಕೊಂಡಿ ದ್ದೇವೆ ಎಂದು ಅವರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಉಡುಪಿ ಪ್ರಧಾನ ಕಾರ್ಯದರ್ಶಿ ರಹೀಮ ಕಾಪು, ಜೊತೆ ಕಾರ್ಯದರ್ಶಿ ಹಾಜಿರ ಉಚ್ಚಿಲ, ಸಮಿತಿ ಸದಸ್ಯರು, ಅಸೆಂಬ್ಲಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News