ಮಡಿಕೇರಿ | ಮರದಿಂದ ಬಿದ್ದು ಕಾರ್ಮಿಕ ಮೃತ್ಯು
Update: 2025-03-25 18:40 IST

ಮಡಿಕೇರಿ : ಮರದಿಂದ ಬಿದ್ದು ಅಸ್ಸಾಂ ಮೂಲದ ಕಾರ್ಮಿಕ ಸಾವನಪ್ಪಿರುವ ಘಟನೆ ನಾಪೋಕ್ಲು ಸಮೀಪದ ನೆಲಜಿ ಗ್ರಾಮದಲ್ಲಿ ನಡೆದಿದೆ.
ಮೃತ ಕಾರ್ಮಿಕನ್ನು ವಾಜಿದ್ ಅಲಿ(28) ಎಂದು ಗುರುತಿಸಲಾಗಿದೆ.
ಎಮ್ಮೆಮಾಡು ಕೂರುಳಿ ಗ್ರಾಮದಲ್ಲಿ ವಾಸವಾಗಿದ್ದ ವಾಜಿದ್ ನೆಲಜಿ ಗ್ರಾಮದ ತೋಟವೊಂದರಲ್ಲಿ ಮರಕ್ಕೆ ಹತ್ತುತ್ತಿದ್ದಾಗ ಕೆಳಗೆ ಬಿದ್ದಿದ್ದಾರೆ. ತಕ್ಷಣ ತೋಟದ ಮಾಲೀಕರು ಹಾಗೂ ಸಹೋದ್ಯೋಗಿಗಳು ನಾಪೊಕ್ಲು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆ ತಂದರಾದರು ಅಷ್ಟರಲ್ಲೆ ವಾಜಿದ್ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.
ನಾಪೊಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.