ಎಂಡಿಎಂಎ, ಗಾಂಜಾ ಸಾಗಾಟ : ಐವರು ಆರೋಪಿಗಳ ಬಂಧನ
ಮಡಿಕೇರಿ ನ.18: ಮಾದಕ ವಸ್ತು ಎಂಡಿಎಂಎ ಮತ್ತು ಗಾಂಜಾ ಸಾಗಾಟ ಸಾಗಾಟ ಮಾಡುತ್ತಿದ್ದ ಆರೋಪದಡಿ ಕೇರಳದ ಮೂವರು ಸೇರಿ ಒಟ್ಟು ಐವರನ್ನು ಕೊಡಗು ಪೊಲೀಸರು ಬಂಧಿಸಿದ್ದಾರೆ.
ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ತಿರುವಂಗಾಡು ಗ್ರಾಮದ ಸುಜೇಶ್ ಎಂ.ಕೆ.(44), ವಿರಾಜಪೇಟೆಯ ಮರೂರು ಗ್ರಾಮದ ಜಬ್ಬಾರ್.ಯು.ವೈ.(38), ಮುಹಮ್ಮದ್ ಕುಂಞಿ(48) ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಪಿಣರಾಯಿಯ ಜಂಶೀರ್(37) ಹಾಗೂ ತಲಚೇರಿ ಜಿಲ್ಲೆಯ ಎರನ್ನೋಳಿ ಗ್ರಾಮದ ಶಮ್ಯಾಸ್ ಸಿ.ವಿ (32) ಬಂಧಿತ ಆರೋಪಿಗಳು.
ಬಂಧಿತರ ಬಳಿಯಿಂದ 84 ಎಂಡಿಎಂಎ, 7 ಗ್ರಾಂ ಗಾಂಜಾ, ಒಂದು ಕಾರು, ಡಿಜಿಟಲ್ ತೂಕದ ಯಂತ್ರ ಮತ್ತು ಮಾದಕ ವಸ್ತು ಸೇವನೆಗೆ ಬಳಸುವ ಉಪಕರಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿರಾಜಪೇಟೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಆರ್ಜಿ ಗ್ರಾಮದ ಕಿರುಮಕ್ಕಿ-ಕಂಡಿಮಕ್ಕಿ ಜಂಕ್ಷನ್ನಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ವಿರಾಜಪೇಟೆ ಉಪವಿಭಾಗದ ಡಿವೈಎಸ್ಪಿ ಮೋಹನ್ ಕುಮಾರ್, ವೃತ್ತ ನಿರೀಕ್ಷಕ ಅನೂಪ್ ಮಾದಪ್ಪಪಿ., ಪಿಎಸ್ಸೈ ಪ್ರಮೋದ್ ಹಾಗೂ ಸಿಬ್ಬಂದಿ ತಂಡ ಕಾರ್ಯಾಚರಣೆ ನಡೆಸಿತು. ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯದಕ್ಷತೆ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಶ್ಲಾಘಿಸಿದ್ದಾರೆ.