ಮಂಡ್ಯ | ಪರೀಕ್ಷಾ ನಿಯಮ ಉಲ್ಲಂಘನೆ : ಕಾರ್ಮೆಲ್ ಕಾಲೇಜಿಗೆ ನೊಟೀಸ್

Update: 2024-11-14 14:08 GMT

ಸಾಂದರ್ಭಿಕ ಚಿತ್ರ

ಮಂಡ್ಯ : ಅರ್ಧವಾರ್ಷಿಕ ಪರೀಕ್ಷೆಯ ನಿಯಮ ಉಲ್ಲಂಘಿಸಿ, ನಿಗದಿತ ದಿನಾಂಕದ ಮೊದಲೇ ಪರೀಕ್ಷೆ ನಡೆಸಿದ ನಗರದ ಕಾರ್ಮೆಲ್ ಪಿಯು ಕಾಲೇಜಿನ ಆಡಳಿತ ಮಂಡಳಿಗೆ ನೊಟೀಸ್ ಜಾರಿ ಮಾಡಲಾಗಿದೆ.

ಪ್ರಥಮ ಮತ್ತು ದ್ವಿತೀಯ ಪಿಯುಸಿಯ ಮಧ್ಯವಾರ್ಷಿಕ ಪರೀಕ್ಷೆ ನಡೆಯುತ್ತಿದ್ದು, ಇಂದು(ನ.14) ನಡೆಯಬೇಕಿದ್ದ ಜೀವಶಾಸ್ತ್ರ ವಿಷಯದ ಪರೀಕ್ಷೆಯನ್ನು ಕಾರ್ಮೆಲ್ ಕಾಲೇಜಿನಲ್ಲಿ ಹಿಂದಿನ ದಿನವೇ ನಡೆಸಲಾಗಿದೆ. ಹಾಗೆಯೇ ಸಂಖ್ಯಾಶಾಸ್ತ್ರ ವಿಷಯದ ಪರೀಕ್ಷೆಯನ್ನೂ ನಿಗದಿತ ದಿನಕ್ಕೆ ಮುಂಚಿತವಾಗಿಯೇ ನಡೆಸಿರುವುದು ಬೆಳಕಿಗೆ ಬಂದಿದೆ ಎಂದು ಪಿಯು ಉಪನಿರ್ದೇಶಕ ಚಲುವಯ್ಯ ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ಜೀವಶಾಸ್ತ್ರ ವಿಷಯದ ಪರೀಕ್ಷೆಯನ್ನು ನ.19ಕ್ಕೆ ಮುಂದೂಡಲಾಗಿದೆ. ಸಂಖ್ಯಾಶಾಸ್ತ್ರದ ಪರೀಕ್ಷೆಯು ನಿಗದಿಯಂತೆ ನ.15ರಂದು ನಡೆಯಲಿದೆ. ಆದರೆ, ಪ್ರಶ್ನೆ ಪತ್ರಿಕೆ ಬದಲಾಗಲಿದೆ. ಜೀವಶಾಸ್ತ್ರ ವಿಷಯದ ಪ್ರಶ್ನೆ ಪತ್ರಿಕೆಯೂ ಬದಲಾಗಲಿದೆ. ಕಾರ್ಮೆಲ್ ಶಿಕ್ಷಣ ಸಂಸ್ಥೆಗೆ ನೊಟೀಸ್ ನೀಡಲಾಗಿದೆ ಮತ್ತು ಶಿಕ್ಷಣ ಸಂಸ್ಥೆ ಮಾನ್ಯತೆ ರದ್ದು ಮಾಡುವಂತೆ ಪಿಯು ಇಲಾಖೆ ನಿರ್ದೇಶಕರಿಗೆ ವರದಿ ನೀಡಲಾಗಿದೆ ಎಂದು ಚಲುವಯ್ಯ ಹೇಳಿದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News