ಲಕ್ನೊ ವಿರುದ್ಧ ಗೆಲುವಿನ ನಂತರ ರಹಸ್ಯ ಟ್ವೀಟ್ ಪೋಸ್ಟ್ ಮಾಡಿದ ಕೆ.ಎಲ್.ರಾಹುಲ್

ಹೊಸದಿಲ್ಲಿ: ಕೆ.ಎಲ್.ರಾಹುಲ್ ಆಕರ್ಷಕ ಅರ್ಧಶತಕ ಗಳಿಸುವ ಮೂಲಕ ಲಕ್ನೊ ಸೂಪರ್ ಜಯಂಟ್ಸ್ ವಿರುದ್ಧ ಮಂಗಳವಾರ ನಡೆದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 8 ವಿಕೆಟ್ಗಳ ಭರ್ಜರಿ ಜಯ ತಂದುಕೊಟ್ಟಿದ್ದಾರೆ.
42 ಎಸೆತಗಳಲ್ಲಿ 3 ಬೌಂಡರಿ ಹಾಗೂ 3 ಸಿಕ್ಸರ್ ಗಳ ಸಹಿತ ಔಟಾಗದೆ 57 ರನ್ ಗಳಿಸಿರುವ ರಾಹುಲ್ ಐಪಿಎಲ್ ಟೂರ್ನಿಯಲ್ಲಿ 5,000 ರನ್ ಮೈಲಿಗಲ್ಲು ತಲುಪಿದ್ದಾರೆ. ಡೆಲ್ಲಿ ತಂಡವು 160 ರನ್ ಗುರಿಯನ್ನು 17.5 ಓವರ್ ಗಳಲ್ಲಿ ಚೇಸ್ ಮಾಡಿದೆ. 6ನೇ ಗೆಲುವು ದಾಖಲಿಸಿ 12 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಗುಜರಾತ್ ಟೈಟಾನ್ಸ್ ನೊಂದಿಗೆ ಸಮಬಲ ಸಾಧಿಸಿದೆ.
ತಾನು ಈ ಹಿಂದೆ ಪ್ರತಿನಿಧಿಸಿರುವ ಲಕ್ನೊ ತಂಡದ ವಿರುದ್ಧ್ದ ಗೆದ್ದ ನಂತರ ಕೆ.ಎಲ್.ರಾಹುಲ್ ಸಾಮಾಜಿಕ ಮಾಧ್ಯಮದಲ್ಲಿ ಒಂದು ರಹಸ್ಯಮಯ, ಅರ್ಥಪೂರ್ವ ಸಂದೇಶವನ್ನು ಹಂಚಿಕೊಂಡರು.
Always good to be back in Lucknow. pic.twitter.com/NOC3Hg17oO
— K L Rahul (@klrahul) April 22, 2025
‘ಲಕ್ನೊಗೆ ಹಿಂತಿರುವುದು ಯಾವಾಗಲೂ ಒಳ್ಳೆಯದೆನಿಸುತ್ತದೆ’ ಎಂದು ಕೆ.ಎಲ್.ರಾಹುಲ್ ಟ್ವೀಟ್ ನಲ್ಲಿ ಬರೆದಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ‘ಎಕ್ಸ್ʼ ಬಳಕೆದಾರೊಬ್ಬರು, ‘ನಕ್ಕುಬಿಡಿ, ನೀವೀಗ ಲಕ್ನೊದಲ್ಲೇ ಇದ್ದೀರಿ’ ಎಂದು ಬರೆದಿದ್ದಾರೆ.
‘ಲಕ್ನೊ ನಿಮ್ಮನ್ನು ಯಾವಾಗಲೂ ನೆನಪಿಸುತ್ತದೆ, ಕೆ.ಎಲ್.ರಾಹುಲ್ ನೀವು ಚಾಂಪಿಯನ್, ಗೊಯೆಂಕಾ(ಲಕ್ನೊ ತಂಡದ ಮಾಲಕ)ಅವರ ಎದುರೇ ಪಂದ್ಯವನ್ನು ಮುಗಿಸಿದ್ದೀರಿ’’ ಎಂದು ‘ಎಕ್ಸ್’ ಬಳಕೆದಾರರು ರಾಹುಲ್ ಟ್ವೀಟ್ಗೆ ಪ್ರತಿಕ್ರಿಯಿಸಿದ್ದಾರೆ.