ಆರಂಭಿಕ ಓವರ್‌ನಲ್ಲಿ 11 ಎಸೆತಗಳ ಬೌಲಿಂಗ್ ಮಾಡಿದ ಶಮಿ!

Update: 2025-02-23 21:40 IST
Mohammed Shami

ಮುಹಮ್ಮದ್ ಶಮಿ |  PC : PTI 

  • whatsapp icon

ಹೊಸದಿಲ್ಲಿ: ಹಿರಿಯ ವೇಗದ ಬೌಲರ್ ಮುಹಮ್ಮದ್ ಶಮಿ ಆರಂಭಿಕ ಓವರ್‌ನಲ್ಲಿ 11 ಎಸೆತಗಳ ಬೌಲಿಂಗ್ ಮಾಡಿದ ಹಿನ್ನೆಲೆಯಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ರೋಹಿತ್ ಬಳಗವು ಕಳಪೆ ಆರಂಭ ಪಡೆಯಿತು. ದೀರ್ಘ ಓವರ್ ಎಸೆದ ಶಮಿ ಅವರು ಪಂದ್ಯಾವಳಿಯ ಇತಿಹಾಸದಲ್ಲಿ ಅನಪೇಕ್ಷಿತ ದಾಖಲೆ ನಿರ್ಮಿಸಿದರು.

ಹೊಸ ಚೆಂಡಿನೊಂದಿಗೆ ದಾಳಿ ಆರಂಭಿಸಿದ ಶಮಿ ತನ್ನ ಮೊದಲ ಓವರ್‌ನಲ್ಲಿ 5 ವೈಡ್‌ಗಳನ್ನು ಎಸೆದರು. ತನ್ನ ಸ್ವಿಂಗ್ ಮೇಲೆ ಹಿಡಿತ ಸಾಧಿಸಲು ಹಾಗೂ ಲೈನ್ ಕಾಯ್ದುಕೊಳ್ಳಲು ಪರದಾಡಿದರು. 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಪಾಕಿಸ್ತಾನದ ವಿರುದ್ಧ 9 ಎಸೆತಗಳ ಓವರ್ ಎಸೆದಿದ್ದ ಜಸ್‌ಪ್ರಿತ್ ಬುಮ್ರಾರ ದಾಖಲೆಯನ್ನು ಶಮಿ ಮುರಿದರು.

ಝಹೀರ್ ಖಾನ್ ಹಾಗೂ ಇರ್ಫಾನ್ ಪಠಾಣ್ ನಂತರ ಶಮಿ ಅವರು ಏಕದಿನ ಕ್ರಿಕೆಟ್‌ನಲ್ಲಿ 11 ಎಸೆತಗಳ ಓವರ್ ಎಸೆದ ಭಾರತದ 3ನೇ ಬೌಲರ್ ಎನಿಸಿಕೊಂಡರು.

ಶಮಿ ಮೊದಲ ಓವರ್‌ನಲ್ಲಿ ಐದು ವೈಡ್‌ಗಳನ್ನು ಎಸೆದಿದ್ದು, ಇದು ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಆರಂಭಿಕ ಓವರ್‌ನಲ್ಲಿ ಬೌಲರ್‌ವೊಬ್ಬನ ಕಳಪೆ ಪ್ರದರ್ಶನವಾಗಿದೆ. ಝಿಂಬಾಬ್ವೆಯ ಟಿನಾಶೆ ಪನ್ಯಂಗರ ಒಂದೇ ಓವರ್‌ನಲ್ಲಿ 7 ವೈಡ್‌ಗಳನ್ನು ಎಸೆದಿದ್ದರು.

ಅನುಭವಿ ವೇಗಿ ಶಮಿ ಇಂದಿನ ಪಂದ್ಯದಲ್ಲಿ ತನ್ನ ಶ್ರೇಷ್ಠ ಪ್ರದರ್ಶನ ನೀಡಿಲ್ಲ, ತನ್ನ 3ನೇ ಓವರ್‌ನಲ್ಲಿ ಟೀಮ್ ಫಿಸಿಯೋರಿಂದ ಚಿಕಿತ್ಸೆ ಪಡೆದರು. ಸ್ವಲ್ಪ ಹೊತ್ತು ಮೈದಾನದಿಂದ ಹೊರ ನಡೆದರು.

ಶಮಿ ಹಾಗೂ ಹರ್ಷಿತ್ ರಾಣಾ ತಮ್ಮ ಮೊದಲ ಸ್ಪೆಲ್‌ನಲ್ಲಿ ವಿಕೆಟ್ ಪಡೆಯಲಿಲ್ಲ. ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ 9ನೇ ಓವರ್‌ನಲ್ಲಿ ಬಾಬರ್ ಆಝಮ್ ವಿಕೆಟನ್ನು ಪಡೆದು ಭಾರತ ತಂಡಕ್ಕೆಮೊದಲ ಮೇಲುಗೈ ಒದಗಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News