ಸಮರ್ಥ ಆಡಳಿತ ಕೊಡುವವರು ಸಿಎಂ ಆಗಬೇಕು; ಸಿದ್ದರಾಮಯ್ಯಗೆ ಜನರು ಪ್ರೀತಿಯಿಂದ ಆಶೀರ್ವಾದ ಮಾಡಿದ್ದಾರೆ: ಬಿಜೆಪಿ ಶಾಸಕ ಯತ್ನಾಳ್‌

Update: 2023-10-04 10:06 IST
ಸಮರ್ಥ ಆಡಳಿತ ಕೊಡುವವರು ಸಿಎಂ ಆಗಬೇಕು; ಸಿದ್ದರಾಮಯ್ಯಗೆ ಜನರು ಪ್ರೀತಿಯಿಂದ ಆಶೀರ್ವಾದ ಮಾಡಿದ್ದಾರೆ: ಬಿಜೆಪಿ ಶಾಸಕ ಯತ್ನಾಳ್‌
  • whatsapp icon

ಯಾದಗಿರಿ: ʼʼ135 ಶಾಸಕರ ಬೆಂಬಲವನ್ನು ಕರ್ನಾಟಕದ ಜನ ಸಿದ್ದರಾಮಯ್ಯನವರಿಗೆ ಪ್ರೀತಿಯಿಂದ ನೀಡಿ, ಆಶೀರ್ವಾದ ಮಾಡಿದ್ದಾರೆʼʼ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿದ್ದಾರೆ.

ಮಂಗಳವಾರ ಶಹಾಪುರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼʼಜಾತಿ ಜನಾಂಗದ ಮೇಲೆ ಯಾರೂ ಮುಖ್ಯಮಂತ್ರಿ ಆಗಲ್ಲ. ಯಾರು ಸಮರ್ಥ ಆಡಳಿತ ಕೊಡ್ತಾರೋ ಅವರು ಸಿಎಂ ಆಗಬೇಕು. ಆದರೆ ಕಾಂಗ್ರೆಸ್‍ನವರೇ ಸಿದ್ದರಾಮಯ್ಯನವರನ್ನು ಸಿಎಂ ಕುರ್ಚಿಯಿಂದ ಇಳಿಸಲು ಕುತಂತ್ರ ಮಾಡುತ್ತಿದ್ದಾರೆʼʼ ಎಂದು ದೂರಿದರು.

ʼʼಸಿದ್ದರಾಮಯ್ಯನವರೇ, ಯಾವ ಡಿ.ಕೆ ಶಿವಕುಮಾರ್ , ಶಾಮನೂರುಗೂ ಹೆದರಬೇಡಿʼʼ ಎಂದು ಯತ್ನಾಳ್ ಸಲಹೆ ನೀಡಿದರು. 

ʼʼಸಿದ್ದರಾಮಯ್ಯನವರಿಗೆ ಆಡಳಿತ ಮಾಡಲು ಕಾಂಗ್ರೆಸ್‍ನವರು ಬಿಡುತ್ತಿಲ್ಲ. ಒಬ್ಬೊಬ್ಬ ಶಾಸಕರು ತಮ್ಮ ಅಸಮಾಧಾನವನ್ನು ಹೊರ ಹಾಕುತ್ತಿದ್ದಾರೆ. ಹೀಗಾಗಿ ಆಡಳಿತ ಮಾಡಲಿಕ್ಕೆ ಆಗುತ್ತಿಲ್ಲ, ಇದರಿಂದ ತಮ್ಮದೇ ಹಾದಿಯಲ್ಲಿ ಸಿದ್ದರಾಮಯ್ಯನವರು ಹೋಗುತ್ತಿದ್ದಾರೆʼʼ ಎಂದು ಹೇಳಿದರು.

ʼʼಅದಕ್ಕೆ ಒಳ್ಳೆಯ ಆಡಳಿತ ಕೊಟ್ಟು ಧೈರ್ಯವಾಗಿ ನಿರ್ಣಯ ತೆಗೆದುಕೊಳ್ಳಿ ಎಂದು ಸಿದ್ದರಾಮಯ್ಯನವರಿಗೆ ನಾನು ಈ ಹಿಂದೆ ಹೇಳಿದ್ದೆʼʼ ಎಂದು‌ ಯತ್ನಾಳ್ ತಿಳಿಸಿದರು. 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News