ಪ್ರೊ. ಚಂದ್ರಶೇಖರ್ ಕಂಬಾರ ಸೇರಿ ಮೂವರಿಗೆ ಕರ್ನಾಟಕ ವಿವಿಯ ‘ಅರವೇ ಗುರು ಪ್ರಶಸ್ತಿ’
Update: 2025-01-28 17:53 GMT
![ಪ್ರೊ. ಚಂದ್ರಶೇಖರ್ ಕಂಬಾರ ಸೇರಿ ಮೂವರಿಗೆ ಕರ್ನಾಟಕ ವಿವಿಯ ‘ಅರವೇ ಗುರು ಪ್ರಶಸ್ತಿ’ ಪ್ರೊ. ಚಂದ್ರಶೇಖರ್ ಕಂಬಾರ ಸೇರಿ ಮೂವರಿಗೆ ಕರ್ನಾಟಕ ವಿವಿಯ ‘ಅರವೇ ಗುರು ಪ್ರಶಸ್ತಿ’](https://www.varthabharati.in/h-upload/2025/01/28/1500x900_1318679-kambara.webp)
ಪ್ರೊ. ಚಂದ್ರಶೇಖರ್ ಕಂಬಾರ
ಧಾರವಾಡ: ಕರ್ನಾಟಕ ವಿಶ್ವ ವಿದ್ಯಾಲಯ ನೀಡುವ ಅರಿವೇ ಗುರು ಪ್ರಶಸ್ತಿಗೆ ಕಲಾ ಕ್ಷೇತ್ರದಿಂದ ಸಾಹಿತಿ ಪ್ರೊ.ಚಂದ್ರಶೇಖರ್ ಕಂಬಾರ, ಸಮಾಜ ವಿಜ್ಞಾನ ಕೇತ್ರದಿಂದ ಪ್ರೊ.ವಿ.ಜಿ.ತಳವಾರ, ವಿಜ್ಞಾನ ಕ್ಷೇತ್ರದಿಂದ ಪ್ರೊ.ಎಂ.ಎನ್ ಬುಜುರ್ಕೆ ಅವರನ್ನು ಆಯ್ಕೆ ಮಾಡಲಾಗಿದ್ದು, ಪ್ರಶಸ್ತಿಯು ತಲಾ 25 ಸಾವಿರ ರೂ. ನಗದು ಮತ್ತು ಫಲಕವನ್ನು ಒಳಗೊಂಡಿದೆ.
ಜ.29ರ ಬೆಳಗ್ಗೆ 11 ಗಂಟೆಗೆ ಧಾರವಾಡದ ವಿಶ್ವ ವಿದ್ಯಾಲಯ ಸುವರ್ಣ ಮಹೋತ್ಸವ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡಿ.ವಿ. ಪರಮಶಿವಮೂರ್ತಿ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.