ಇಂದಿನಿಂದ ಕೊಡಚಾದ್ರಿಗೆ ಪ್ರವೇಶ ನಿಷೇಧ: ವನ್ಯಜೀವಿ ವಿಭಾಗ ಆದೇಶ

Update: 2023-07-30 07:30 GMT

ಕೊಡಚಾದ್ರಿ ಗಿರಿ (Photo credit: karnatakatourism)

ಶಿವಮೊಗ್ಗ, ಜು.30: ರಾಜ್ಯದ ಪ್ರಸಿದ್ಧ ಪ್ರವಾಸಿ ಕೇಂದ್ರ ಹಾಗೂ ಭಕ್ತರ ಶ್ರದ್ಧಾಕೇಂದ್ರವಾದ ಕೊಡಚಾದ್ರಿ ಗಿರಿಗೆ ಜು.30ರಿಂದ ಮುಂದಿನ ಆದೇಶ ದವರೆಗೆ ವಾಹನದಲ್ಲಿ ತೆರಳುವುದು ಹಾಗೂ ಚಾರಣ ಮಾಡುವುದನ್ನು ಸಂಪೂರ್ಣ ನಿಷೇಧಿಸಿ ವನ್ಯಜೀವಿ ವಿಭಾಗ ಆದೇಶ ಹೊರಡಿಸಿದೆ.

ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆ ತೀವ್ರಗೊಂಡಿದ್ದು, ವಿಪರೀತ ಮಳೆಯಲ್ಲಿ ಮಲೆನಾಡು ವ್ಯಾಪ್ತಿಯ ಪ್ರವಾಸ ತೀರಾ ಅಸುರಕ್ಷತೆಯಿಂದ ಕೂಡಿದ್ದು, ಸುರಕ್ಷತೆ ಯಿಂದ ದೃಷ್ಟಿಯಿಂದ ಕಟ್ಟಿನಹೊಳೆ ಮೂಲಕ ಕೊಡಚಾದ್ರಿಗೆ ತೆರಳುವ ಜೀಪ್ ಮುಂತಾದ ವಾಹನಗಳು ಹಾಗೂ ವಿವಿಧ ಮಾರ್ಗದ ಮೂಲಕ ಚಾರಣದಲ್ಲಿ ಕೊಡಚಾದ್ರಿಗೆ ತೆರಳುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ.

ಇದರಿಂದ ನಿಟ್ಟೂರು, ಸಂಪೆಕಟ್ಟೆ ಕಟ್ಟಿನಹೊಳೆಯಿಂದ ಕೊಡ ಚಾದ್ರಿಗೆ ಜೀಪ್ನಲ್ಲಿ ಪ್ರವಾಸಿಗರನ್ನು ಕರೆದು ಕೊಂಡು ಹೋಗುವ ಸುಮಾರು 150 ಜೀಪ್ ಮಾಲಕರು, ಚಾಲಕರ ಜೀವನ ನಿರ್ವಹಣೆಗೆ ಪೆಟ್ಟು ಬಿದ್ದಂತಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News