ನಕಲಿ ದಾಖಲೆ ಸೃಷ್ಟಿಸಿ ನೋಂದಣಿ ಆಗಿರುವ ಪ್ರಕರಣಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲು ಕಾನೂನು ತಿದ್ದುಪಡಿ: ಸಚಿವ ಕೃಷ್ಣ ಬೈರೇಗೌಡ

Update: 2023-08-08 16:50 GMT

ಮೈಸೂರು,ಆ.8: ನಕಲಿ ದಾಖಲೆ ಸೃಷ್ಟಿಸಿ ನೊಂದಣಿಯಾಗಿರುವ ಪ್ರಕರಣಗಳನ್ನು ಪತ್ತೆ ಹಚ್ಚಿ ಪರಿಹಾರ ಕಂಡುಕೊಳ್ಳಲು ಕಾನೂನು ತಿದ್ದುಪಡಿ ಮಾಡಲಾಗಿದ್ದು ರಾಷ್ಟ್ರಪತಿಗಳ ಅಂಕಿತದ ಬಳಿಕ ಜಾರಿ ಮಾಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. 

ನಗರದ ಹುಣಸೂರು ರಸ್ರೆಯಲ್ಲಿರುವ ಪ್ರಾದೇಶಿಕ ಆಯುಕ್ತರ ಕಚೇರಿಯ ಚಾಮುಂಡೇಶ್ವರಿ ಸಭಾಂಗಣದಲ್ಲಿ ಮಂಗಳವಾರ ಮೈಸೂರು ವಿಭಾಗದ ಅಧಿಕಾರಿಗಳ ಸಭೆ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ರಾಜ್ಯದ ಹಲವು ಕಡೆಗಳಲ್ಲಿ ಬದುಕಿರುವವರನ್ನು ಸಾವಿಗೀಡಾಗಿದ್ದಾರೆ ಎಂದು ಪೌತಿ ಖಾತೆ, ಸರ್ಕಾರಿ ಭೂಮಿಗಳು ಸೇರಿದಂತೆ ಅನೇಕ ನಕಲಿ ದಾಖಲೆಗಳನ್ನು ಸೃಷ್ಟಿಸಿ ನೋಂದಣಿ ಮಾಡಿರುವ ಹಲವಾರು ದೂರುಗಳು ಬಂದಿದೆ. ಇವರು ನ್ಯಾಯಾಲುಗಳಿಗೆ ವರ್ಷಾನುಗಟ್ಟಲೆ ಅಲೆದರೂ ಪರಿಹಾರ ಸಿಗುವುದಿಲ್ಲ. ಹಾಗಾಗಿ ಸೆಕ್ಷನ್ 22 ಎ ಗೆ ತಿದ್ದುಪಡಿ ತಂದು ಜಿಲ್ಲಾ ಮಟ್ಟದ ನೋಂದಣಿ ಅಧಿಕಾರಿಗಳಿಗೆ ಅಂತಹ ನಕಲಿ ನೋಂದಣಿಗಳನ್ನು ಪತ್ತೆ ಹಚ್ಚಿ ವಜಾಗೊಳಿಸುವ ಅಧಿಕಾರವನ್ನು ನೀಡಲು ಕಾನೂನು ತಿದ್ದುಪಡಿ ಮಾಡಲಾಗಿದೆ. ರಾಷ್ಟ್ರಪತಿಗಳ ಅಂಕಿತ ದೊರೆತ ನಂತರ ರಾಜ್ಯದಲ್ಲಿ ಜಾರಿಯಾಗಲಿದೆ. ಇದರಿಂದ ಬಡವರು ನೊಂದವರಿಗೆ ನ್ಯಾಯ ಸಿಗಲಿದೆ ಎಂದು ಹೇಳಿದರು.

ರಾಜ್ಯದಲ್ಲಿ ಹಲವಾರು ಕೆರೆ, ಸರ್ಕಾರಿ ಭೂಮಿಗಳು ಒತ್ತುವರಿಯಾಗಿದ್ದು, ಹವುಗಳನ್ನು ಹಂತ ಹಂತವಾಗಿ ತೆರವುಗಿಳಿಸುವ ಕೆಲಸ ಮಾಡಲಾಗುವುದು. ಪ್ರತಿ ಗ್ರಾಮ ಲೆಕ್ಕಾಧಿಕಾರಿ. ತಿಂಗಳಿಗೆ ಒಮ್ಮೆಯಾದರೂ ಸರ್ಕಾರಿ ಜಾಗಗಳ ಬಳಿಗೆ ತೆರಳಿ ನಮ್ಮ ಜಾಗ ಒತ್ತುವರಿಯಾಗಿದಿಯಾ ಇಲ್ಲವೇ ಎಂಬ ಮಾಹಿತಿಯನ್ನು ಫೋಟೊ ತರಗೆದು ಆಪ್ ಮೂಲಕ ಕಂದಾಯ ಇಲಾಖೆಗೆ ಕಳುಹಿಸಬೇಕು ಎಂಬ ಮಾಹಿತಿ ನೀಡಿದರು.

ಇದೇ ರೀತಿ ಹಲವು ಬದಲಾವಣೆಗಳನ್ನು ಇಲಾಖೆಯಲ್ಲಿ ತರಲು ಚಿಂತಿಸಲಾಗಿದ್ದು. ಜನರ ಆಶಯಗಳಿಗೆ ಅನುಗುಣವಾಗಿ ಕೆಲಸ ಮಾಡಿ ಸರ್ಕಾರದ ವಿಶ್ವಾಸ ಉಳಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News