ಇಂದು ರಾಜ್ಯಕ್ಕೆ ರಾಷ್ಟ್ರಪತಿ ಭೇಟಿ: ಬುಡಕಟ್ಟು ಜನರ ಶ್ರೇಯೋಭಿವೃದ್ಧಿಗಾಗಿ ಸಂವಾದ

Update: 2023-07-03 05:08 GMT

ಬೆಂಗಳೂರು: ರಾಷ್ಟ್ರಪತಿ ದ್ರೌಪದಿ ಮುರ್ಮು ಇಂದು (ಜು.3) ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ರಾಜ್ಯದಲ್ಲಿ ವಿಶೇಷವಾಗಿ ಬುಡಕಟ್ಟು ಸಮುದಾಯದ ಅಭಿವೃದ್ಧಿಗಾಗಿ ಮೈಸೂರು, ಚಾಮರಾಜನಗರ, ಕೊಡಗು, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿರುವ ಬುಡಕಟ್ಟು ಸಮುದಾಯಗಳ ಜನರೊಂದಿಗೆ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ, ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಬಿ.ನಾಗೇಂದ್ರ ತಿಳಿಸಿದ್ದಾರೆ.

ಬೆಂಗಳೂರಿನ ರಾಜಭವನದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಸಂಜೆ 7ರಿಂದ 7:30ರ ವರೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೊಂದಿಗೆ ಬುಡಕಟ್ಟು ಜನಾಂಗದ ಪ್ರತಿನಿಧಿಗಳು ಸಂವಾದ ನಡೆಸಲಿದ್ದು, ಈ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್ ಉಪಸ್ಥಿತರಿರಲಿದ್ದಾರೆ. ಇದೊಂದು ವಿಶಿಷ್ಟ ಕಾರ್ಯಕ್ರಮವಾಗಿದ್ದು, ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಿಂದ ಜೇನು ಕುರುಬ, ಕೊರಗ ಸಮಾಜದ ಕೆಲವರನ್ನು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಯ್ಕೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ರಾಜ್ಯದಲ್ಲಿ 2011ರ ಜನಗಣತಿಯ ಪ್ರಕಾರ ನೈಜ ದುರ್ಬಲ ಸಮುದಾಯಗಳಾದ ಜೇನು ಕುರುಬ, ಕೊರಗ ಸಮುದಾಯದ ಒಟ್ಟು 50,870 ಜನರಿದ್ದಾರೆ. ಇವರ ಶ್ರೇಯೋಭಿವೃದ್ಧಿಗಾಗಿ ಕೇಂದ್ರ ಪುರಸ್ಕøತ ಯೋಜನೆಗಳೊಂದಿಗೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯು ಬಹಳ ಯೋಜನೆಗಳನ್ನು ರೂಪಿಸಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ಈ ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲು ಗುಂಡ್ಲುಪೇಟೆಯ ದೇಶಿಪುರ ಕಾಲನಿಯ ಸಿದ್ದಮ್ಮ, ಪುಟ್ಟಮ್ಮ, ಮದ್ದೂರು ಕಾಲನಿಯ ಗೋವಿಂದ ಈ ಮೂವರು ಜೇನು ಕುರುಬರನ್ನು ಆಯ್ಕೆ ಮಾಡಲಾಗಿದೆ. ಮೈಸೂರಿನ ಎಚ್.ಡಿ.ಕೋಟೆಯ ಬಸಮ್ಮ, ರಾಜೇಶ್, ಅಯ್ಯಪ್ಪ, ಭೈರಾ, ಸಿ.ಭಾಸ್ಕರ, ಪುಟ್ಟಬಸವಯ್ಯ, ಹುಣಸೂರಿನ ಜೆ.ಪಿ.ಪಾರ್ವತಿ, ಸುಮಾ, ರಾಜಪ್ಪ, ಸಚಿನ್, ಪಿರಿಯಾಪಟ್ಟಣದ ಜಯಮ್ಮ, ಗೌರಿ, ಲಕ್ಷ್ಮಿ, ಜಾನಕಮ್ಮ, ಬಸವಣ್ಣ, ಬಸಪ್ಪ, ಸರಗೂರಿನ ವಿಜಯ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ನಾಗೇಂದ್ರ ಹೇಳಿದ್ದಾರೆ.

ಕೊಡಗು ಜಿಲ್ಲೆಯ ಸೋಮವಾರಪೇಟೆಯ ಜೆ.ಕೆ.ಮುತ್ತಮ್ಮ, ಬಿ.ಕೆ.ಧರ್ಮಪ್ಪ, ಉಡುಪಿ ಜಿಲ್ಲೆಯ ನಳಿನಿ, ಡಾ.ಸಬಿತಾ, ಸುಶೀಲಾ, ಪ್ರಕೃತಿ, ಶಕೀಲಾ, ಸುನಂದಾ, ಕುಡ್ಪಾ, ಬಾಬು, ರಮೇಶ್, ಕೊಗ್ಗ, ಅಕ್ಷಯ್, ಕುಮಾರ್, ಸಂಜೀವ ಕೊರಗ, ಕೆ.ಪುತ್ರಯ ಅವರನ್ನು ಆಯ್ಕೆ ಮಾಡಲಾಗಿದೆ. ಇನ್ನು ದಕ್ಷಿಣ ಕನ್ನಡ ಜಿಲ್ಲೆಯ ರತ್ನ, ಚಂದ್ರವತಿ, ಶಶಿಕಲಾ, ರಾಧಾ, ಎಂ.ಸುಂದರ್, ಬಾಬು, ಮಥಾಡಿ, ಶ್ಯಾಮ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಸಂವಾದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿಯವರೊಂದಿಗೆ ಪಿವಿಟಿಜಿ ಸಮುದಾಯದವರಿಗೆ ನೀಡಲಾಗಿರುವ ಪೌಷ್ಟಿಕ ಆಹಾರ ಯೋಜನೆ, ವಸತಿ, ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಶಿಕ್ಷಣ, ವೈದ್ಯಕೀಯ ವೆಚ್ಚಗಳ ಮರುಪಾವತಿ, ನಿರುದ್ಯೋಗಿಗಳಿಗೆ ಜೀವನ ನಿರ್ವಹಣ ಭತ್ತೆ, ಅನುವಂಶೀಯ ಕಾಯಿಲೆಗಳು, ಅವರ ಜೀವನೋಪಾಯದ ಯೋಜನೆ, ಬುಡಕಟ್ಟು ಜನರ ದಿನನಿತ್ಯದ ಸಮಸ್ಯೆಗಳ ಕುರಿತು ಸಮಾಲೋಚನೆ ನಡೆಸಲಿದ್ದಾರೆ ನಾಗೇಂದ್ರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News