ವಿಶ್ವಕರ್ಮ ಒಕ್ಕೂಟ: ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

Update: 2024-10-05 13:53 GMT

ಉಡುಪಿ, ಅ.5: ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ವಿಶ್ವಕರ್ಮ ಸಮಾಜದ ಅರ್ಹ ಬಡ ಪ್ರತಿಭಾವಂತ ವಿದ್ಯಾರ್ಥಿ ಗಳಿಂದ ಶೈಕ್ಷಣಿಕ ದತ್ತಿನಿಧಿ /ವಿದ್ಯಾರ್ಥಿ ವೇತನಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಎಸೆಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಶೇ.95ಕ್ಕಿಂತ ಅಧಿಕ, ಪದವಿ ಪರೀಕ್ಷೆಯಲ್ಲಿ ಶೇ.80ಕ್ಕಿಂತ ಹೆಚ್ಚು, ಇಂಜಿನಿಯ ರಿಂಗ್, ಆರ್ಕಿಟೆಕ್ಚರ್, ಡಿಪ್ಲೋಮಾ, ಎಂಬಿಬಿಎಸ್, ಬಿಎಎಂಎಸ್ ಅಲ್ಲದೇ ಸ್ನಾತಕೋತ್ತರ ಪದವಿ (ಎಂಎ, ಎಂಕಾಂ, ಎಂಎಸ್ಸಿ), ವೃತ್ತಿ ಶಿಕ್ಷಣಗಳಾದ ಬಿಎಡ್, ಡಿಎಡ್, ಬಿಸಿಎ, ಬಿಎಸ್‌ಡಬ್ಲ್ಯೂ, ಎಲ್‌ಎಲ್‌ಬಿ, ಐಟಿಐ, ಬಿಎಪ್‌ಎ (ಲಲಿತಕಲೆ) ಹಾಗೂ ವೈದಿಕ ಶಿಕ್ಷಣ ಪರೀಕ್ಷೆ ಗಳಲ್ಲಿ ಶೇ.75ಕ್ಕಿಂತ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳು ಅಂತಿಮ ಪರೀಕ್ಷೆಯ ಅಂಕ ಪಟ್ಟಿಯ ಪ್ರತಿಯೊಂದಿಗೆ ಅರ್ಜಿಗಳನ್ನು ಸಲ್ಲಿಸಬಹುದು.

ಇದರೊಂದಿಗೆ ಗುರು- ಶಿಷ್ಯ ಪರಂಪರೆಯಲ್ಲಿ ಪಂಚಕಸುಬುಗಳನ್ನು, ವೈದಿಕ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ನಿಗದಿತ ನಮೂನೆಯಲ್ಲಿ ಬರೆದು ಸ್ಥಳೀಯ ವಿಶ್ವಕರ್ಮ ಸಮಾಜದ ಸಂಘ ಸಂಸ್ಥೆಗಳ ಶಿಫಾರಸು ಪತ್ರದೊಂದಿಗೆ ಅ.31ರೊಳಗೆ ಮಧು ಆಚಾರ್ಯ, ಅಧ್ಯಕ್ಷರು, ವಿಶ್ವಕರ್ಮ ಒಕ್ಕೂಟ, ಅಂಬಿಕಾ ಟ್ರಾವೆಲ್ಸ್, ಬಪ್ಪನಾಡು, ರಾಷ್ಟ್ರೀಯ ಹೆದ್ದಾರಿ 66ರ ಬಳಿ, ಮೂಲ್ಕಿ, ದ.ಕ.ಜಿಲ್ಲೆ-574154 ಈ ವಿಳಾಸಕ್ಕೆ ಕಳುಹಿಸಬಹುದು.

ಹೆಚ್ಚಿನ ಮಾಹಿತಿಗಳಿಗಾಗಿ ಒಕ್ಕೂಟದ ಅಧ್ಯಕ್ಷರು (7259005555) ಅಥವಾ ಪ್ರಧಾನ ಕಾರ್ಯದರ್ಶಿ (9353763251) ಇವರನ್ನು ಸಂಪರ್ಕಿಸ ಬಹುದು ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News