ನಿಟ್ಟೆ: ಬಾವಿಗೆ ಬಿದ್ದ ಚಿರತೆ ಮರಿಯ ರಕ್ಷಣೆ

Update: 2024-11-25 11:30 GMT

ಕಾರ್ಕಳ, ನ.25: ಆಹಾರ ಅರಸಿಕೊಂಡು ಬಂದು ನಿಟ್ಟೆ ಗ್ರಾಮದ ಅರಂತ ಬೆಟ್ಟು ದರ್ಕಾಸ್ ಬಳಿಯ ಮನೆಯೊಂದರ ಬಾವಿಗೆ ಬಿದ್ದ ಚಿರತೆ ಮರಿಯನ್ನು ಅರಣ್ಯ ಇಲಾಖೆ ರಕ್ಷಿಸಿದೆ.

ಶನಿವಾರ ರಾತ್ರಿ ಮನೆಯ ಬಳಿಯ ಕೋಯನ್ನು ಹಿಡಿದು ತಿನ್ನಲು ಓಡುವ ಭರದಲ್ಲಿ ಚಿರತೆ ತೆರೆದ ಬಾವಿಗೆ ಬಿದ್ದಿದೆ. ಮುಂಜಾನೆ ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಸ್ಥಳೀಯರ ಸಹಕಾರದೊಂದಿಗೆ ಬೋನು ಮತ್ತು ಬಲೆಯನ್ನು ಇರಿಸಿ ಚಿರತೆಯನ್ನು ಬಾವಿಯಿಂದ ಸುರಕ್ಷಿತವಾಗಿ ಮೇಲಕ್ಕೆತ್ತಲಾಯಿತು. ಒಂದು ವರ್ಷದ ಮರಿ ಚಿರತೆ ಇದಾಗಿದ್ದು, ತಾಲೂಕು ಪಶುವೈದ್ಯಾಧಿಕಾರಿ ವಾಸುದೇವ್ ಅವರು ಚಿರತೆ ಆರೋಗ್ಯ ತಪಾಸಣೆ ನಡೆಸಿದರು.

ಈ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ಎಸಿಎಫ್‌ಪಿ. ಶ್ರೀಧರ್, ಆರ್‌ಎಫ್‌ಒ ಪ್ರಭಾಕರ್ ಕುಲಾಲ್, ಡಿಆರ್‌ಎಫ್‌ಒ ಹುಕ್ರಪ್ಪಗೌಡ, ಸಿಬಂದಿ, ಸ್ಥಳೀಯರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News