ಜೇಣುನೋಣ ದಾಳಿ: ಕೃಷಿಕೂಲಿ ಕಾರ್ಮಿಕ ಮೃತ್ಯು
Update: 2024-12-24 16:00 GMT
ಹೆಬ್ರಿ, ಡಿ.24: ಜೇಣುನೋಣ ಏಕಾಏಕಿ ದಾಳಿ ನಡೆಸಿದ ಪರಿಣಾಮ ಕೃಷಿ ಕೂಲಿ ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ನಾಲ್ಕೂರು ಎಂಬಲ್ಲಿ ನಡೆದಿದೆ.
ಮೃತರನ್ನು ನಾಲ್ಕೂರು ನಿವಾಸಿ ಕೃಷ್ಣ(53) ಎಂದು ಗುರುತಿಸಲಾಗಿದೆ. ಇವರು ಡಿ.19ರಂದು ಗದ್ದೆಯ ಬಳಿ ಸೊಪ್ಪು ಸವರುತ್ತಿರುವಾಗ ಜೇಣು ನೊಣಗಳು ಏಕಾಎಕಿ ದಾಳಿ ಮಾಡಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಅವರು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಫಲಕಾರಿಯಾಗದೆ ಡಿ.23ರಂದು ಬೆಳಗ್ಗೆ ಮೃತಪಟ್ಟರೆಂದು ತಿಳಿದುಬಂದಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.