ಉಡುಪಿ ಬಿಷಪ್ ಕ್ರಿಸ್ಮಸ್ ಸಂದೇಶ

Update: 2024-12-24 16:33 GMT

ಉಡುಪಿ: ದೇವರು ಮಾನವರಾಗಿ ಈ ಧರೆಯಲ್ಲಿ ಜನಿಸಿದ ಹಬ್ಬ ಕ್ರಿಸ್ಮಸ್. ದೇವರು ನಮ್ಮೊಡನೆ ಇದ್ದಾರೆಂಬ ಭಾವನೆ ಯಿಂದ ಈ ಕ್ರಿಸ್ತ ಜಯಂತಿಯನ್ನು ನಾವು ಸರ್ವರೊಂದಿಗೆ ಸಂತೋಷ, ಸಂಭ್ರಮದಿಂದ ಜಗತ್ತಿನಾದ್ಯಂತ ಆಚರಿಸುತ್ತೇವೆ.

ಯೇಸುಕ್ರಿಸ್ತರ 2025ನೇ ಜನನದ ಜುಬಿಲಿ ವರ್ಷವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ, ಎಂದಿಗಿಂತಲೂ ಹೆಚ್ಚಾಗಿ ಪ್ರಪಂಚದಲ್ಲಿ ದ್ವೇಷ, ಹಿಂಸಾಚಾರ, ಯುದ್ಧ, ಪ್ರಕೃತಿ ವಿಕೋಪ, ವಿಭಜನೆಗಳನ್ನು ಅನುಭಸುತ್ತಿದ್ದೇವೆ. ಯೇಸು ಜನಿಸಿದ ದನದ ಕೊಟ್ಟಿಗೆಯಲ್ಲಿ ಸ್ವರ್ಗದ ದೂತರು ಸಾರಿದ ಶಾಂತಿ, ಸೋದರತ್ವ, ಸಂಧಾನ, ಪ್ರೀತಿ ಮತ್ತು ಕ್ಷಮೆ ನಮ್ಮ ಸಮಾಜಕ್ಕೆ ಅಗತ್ಯವಾಗಿ ಬೇಕಿದೆ.

ಈ ಕ್ರಿಸ್ಮಸ್‌ನಂದು ನಾವು ಅನುಭವಿಸಿದ ಪ್ರಭು ಯೇಸುವಿನ ದೈವೀ ಗುಣಗಳನ್ನು ಎಲ್ಲರಿಗೂ ಹಂಚೋಣ. ವಿವಿಧ ಕಷ್ಟಗಳಿಗೆ ಸಿಲುಕಿ ಸಹಾಯಹಸ್ತ ಬೇಡುವವರ ಕಡೆಗೆ ಕೈಚಾಚಿ ಅವರ ಬಾಳಿಗೆ, ಭರವಸೆಯ ಕಿರಣವಾಗೋಣ. ಕ್ರಿಸ್ತರ ಬೆಳಕು ನಮ್ಮ ಹೃದಯಗಳಲ್ಲಿ ಇರುವ ಅಂಧಕಾರವನ್ನು ಹೋಗಲಾಡಿಸಿ, ನಮ್ಮನ್ನು ಶಾಂತಿಯ ಸಾಧನವನ್ನಾಗಿ ಮಾಡಲಿ. ಶಾಂತಿ, ಪ್ರೀತಿ ಮತ್ತು ಸೌಹಾರ್ದತೆಯ ನೆಲೆಗಳಲ್ಲಿ ಹೊಸ ಸಮಾಜವನ್ನು ರ್ನಿುಸೋಣ.

ಎಲ್ಲರಿಗೂ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಶುಭಾಶಯಗಳು.

- ಜೆರಾಲ್ಡ್ ಲೋಬೊ, ಧರ್ಮಾಧ್ಯಕ್ಷರು, ಉಡುಪಿ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News