ನಿವೃತ್ತ ಉಪತಹಶೀಲ್ದಾರ್ ಕೆ.ಸಿ.ಸುಧಾಕರ್ ನಿಧನ
Update: 2025-01-13 16:33 GMT
ಶಿರ್ವ, ಜ.13: ಬಂಟಕಲ್ಲು ಅರಸೀಕಟ್ಟೆ ನಿವಾಸಿ ನಿವೃತ್ತ ತಹಶೀಲ್ದಾರ್ ದಿವಂಗತ ಕೆ.ಚೆನ್ನಪ್ಪಅವರ ಪುತ್ರ, ನಿವೃತ್ತ ಉಪತಹಶೀಲ್ದಾರ್ ಕೆ.ಸಿ.ಸುಧಾಕರ್ (77) ಶನಿವಾರ ಅಲ್ಪಕಾಲದ ಅಸೌಖ್ಯದಿಂದ ಆಸ್ಪತ್ರೆಯಲ್ಲಿ ನಿಧನರಾದರು.
ಇವರು ಕಂದಾಯ ಇಲಾಖೆಯಲ್ಲಿ ಕಂದಾಯ ನಿರೀಕ್ಷಕರಾಗಿ ಸೇವೆಯನ್ನು ಪ್ರಾರಂಭಿಸಿ ಭಡ್ತಿ ಹೊಂದಿ ಉಪತಹಶೀಲ್ದಾರ್ ಆಗಿ ಕುಂದಾಪುರ, ಉಡುಪಿ, ಮಂಗಳೂರು, ಮೂಡುಬಿದ್ರಿ, ಬಂಟ್ವಾಳದಲ್ಲಿ ಸೇವೆ ಸಲ್ಲಿಸಿದ್ದರು. ಇವರು ಪತ್ನಿ, ನಿವೃತ್ತ ಮುಖ್ಯ ಶಿಕ್ಷಕಿ ಕೆ.ರಾಜೀವಿ, ಇಬ್ಬರು ಪುತ್ರಿಯರು, ಅಳಿಯ, ಮೊಮ್ಮಗ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.