ಉಳ್ಳಾಲ: ಕೊಳೆತ ಕಸ ರಸ್ತೆಗೆಸೆದು ಸ್ಥಳೀಯರು, ವಿವಿಧ ಸಂಘಟನೆಗಳಿಂದ ಪ್ರತಿಭಟನೆ
ಉಳ್ಳಾಲ: ಕೊಳೆತ ಕಸ ಹಾಗೂ ಇತರ ವಸ್ತುಗಳನ್ನು ಸಮುದ್ರ ಬದಿಯ ಜಾಗದಲ್ಲಿ ರಾಶಿ ಹಾಕಿದ ಪರಿಣಾಮ ದುರ್ವಾಸನೆ ಬೀರುತ್ತಿದ್ದು, ಇದರಿಂದ ಆಕ್ರೋಶಿತ ಗೊಂಡ ಸ್ಥಳೀಯರು ಮತ್ತು ವಿವಿಧ ಸಂಘಟಕರು ಮಂಗಳವಾರ ಪ್ರತಿಭಟನೆ ನಡೆಸಿದರು.
ನಾಗರಿಕ ಹಿತರಕ್ಷಣಾ ಸಮಿತಿ, ನದಿ ಪರಿಸರ ಸಂರಕ್ಷಣಾ ಸಮಿತಿ ಮತ್ತು ಸುಸ್ತಿರ ಉಳ್ಳಾಲ ದ ಕನಸುಗಾರರು ಸಂಘಟನೆ ಸಹಿತ ಆಕ್ರೋಶಿತ ರು ರಾಶಿ ಹಾಕಿದ್ದ ಕೊಳೆತ ತ್ಯಾಜ್ಯ ವನ್ನು ರಸ್ತೆಗೆಸೆದು ಆಕ್ರೋಶ ವ್ಯಕ್ತಪಡಿಸಿದರಲ್ಲದೆ ಇದನ್ನು ಜನವಸತಿ ಇಲ್ಲದ ಪ್ರದೇಶಗಳಿಗೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸುಸ್ತಿರ ಉಳ್ಳಾಲ ದ ಕನಸುಗಾರರು ಸಂಘಟನೆಯ ಸಂಚಾಲಕ ಕಿಶೋರ್ ಅತ್ತಾವರ ಅವರು,ಪಚ್ಚನಾಡಿಗೆ ಒಣ ಕಸ ಮತ್ತು ಹಸಿ ಕಸವನ್ನು ವಿಂಗಡಿಸಿ ನೀಡಬೇಕು.ಆದರೆ ಡಯಪಿಯರ್ಸ್,ಪ್ಯಾಂಪರ್ಸ್, ಬಾಟಲ್ , ಪ್ಲಾಸ್ಟಿಕ್ ವಿಲೇವಾರಿ ಆಗುವುದಿಲ್ಲ. ಅದನ್ನು ಇಲ್ಲಿ ರಾಶಿ ಹಾಕಲಾಗುತ್ತಿದೆ. ಜೊತೆಗೆ ಕಸ ಸಂಗ್ರಹ ಕ್ಕೆ ವಾಹನಗಳು ಹೋಗದ ಕಡೆಗಳಲ್ಲಿ ವಾಸವಿರುವ ಜನರು ಕಸವನ್ನು ತಂದು ಇಲ್ಲಿ ಹಾಕುತ್ತಾರೆ. ಇದರ ವಿರುದ್ಧ ಯಾವುದೇ ಕ್ರಮ ಸಂಬಂಧ ಪಟ್ಟ ಇಲಾಖೆ ಕೈಗೊಳ್ಳುವುದಿಲ್ಲ. ಇದರಿಂದ ಈ ಕೊಳೆತ ತ್ಯಾಜ್ಯದ ನೀರು ಬಾವಿಗೆ ಸೇರಿ ಸುತ್ತಲಿನ ಬಾವಿ ನೀರು ಹಾಳಾಗಿದೆ ಎಂದು ಆರೋಪಿಸಿದರು.
ನದಿ ಪರಿಸರ ಸಂರಕ್ಷಣಾ ಸಮಿತಿ ಸದಸ್ಯ ರಿಯಾಝ್ ಮಂಗಳೂರು ಮಾತನಾಡಿ, ಕೊಳೆತ ತ್ಯಾಜ್ಯ ರಾಶಿ ಯಿಂದ ನಗರ ಸಭೆ ಕೊಳೆತು ಹೋಗಿದೆ.ಸುತ್ತಲಿನ ಬಾವಿ ನೀರಿನ ಬಣ್ಣ ಬದಲಾಗಿ ಕುಡಿಯಲು ಯೋಗ್ಯವಲ್ಲ ದ ಸ್ಥಿತಿಯಲ್ಲಿ ಇದೆ. ಈ ಬಗ್ಗೆ ಸಂಬಂಧಪಟ್ಟ ವರ ಗಮನ ಸೆಳೆದರೂ ಪ್ರಯೋಜನ ಆಗಿಲ್ಲ.ನಗರ ಸಭೆಗೆ ಸೂಕ್ತ ಡಂಪಿಂಗ್ ಯಾರ್ಡ್ ಇಲ್ಲದ ಕಾರಣ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅವ್ಯವಸ್ಥೆಯ ಬಗ್ಗೆ ಕ್ರಮ ಕೈಗೊಳ್ಳಲು ಜನಪ್ರತಿನಿಧಿಗಳು, ನಗರ ಸಭೆ ಎಲ್ಲಿ ಹೋಗಿದೆ ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ನಾಗರಿಕ ಹಿತರಕ್ಷಣಾ ಸಮಿತಿ ಹಮೀದ್ ಉಳ್ಳಾಲ, ಹೋರಾಟ ಗಾರ ಮಂಜುನಾಥ ಉಳ್ಳಾಲ, ಸ್ಥಳೀಯ ನಾಗರಿಕರು, ಮಹಿಳೆಯರು ಪ್ರತಿಭಟನೆ ಯಲ್ಲಿ ಭಾಗವಹಿಸಿ ಆಕ್ರೋಶ ವ್ಯಕ್ತಪಡಿಸಿದರು.