ಭಟ್ಕಳ: ಯುವಕನಿಂದ ಕಿರುಕುಳ ಆರೋಪ; ಯುವತಿ ಆತ್ಮಹತ್ಯೆ

Update: 2023-10-25 22:34 IST
ಭಟ್ಕಳ: ಯುವಕನಿಂದ ಕಿರುಕುಳ ಆರೋಪ; ಯುವತಿ ಆತ್ಮಹತ್ಯೆ
  • whatsapp icon

ಭಟ್ಕಳ: ಇನ್ಸ್ಟಾಗ್ರಾಮ್ ನಲ್ಲಿ ಯುವಕನ ಕಿರುಕುಳಕ್ಕೆ ಬೇಸತ್ತು ಯುವತಿಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಮಕ್ಕಿ, ಹಾಡವಳ್ಳಿಯಲ್ಲಿ ನಡೆದಿದೆ.

ಮೃತ ಯುವತಿಯನ್ನು ನೇತ್ರಾ ಮುತ್ತಯ್ಯ ಗೋವಾಳಿ ಎಂದು ಗುರುತಿಸಲಾಗಿದೆ. ಈಕೆ ಭಟ್ಕಳ ನಗರದಲ್ಲಿ ಖಾಸಗಿ ಕಚೇರಿ ಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಳು ಎನ್ನಲಾಗಿದೆ.

ಈಕೆಗೆ ಕಿರುಕುಳ ನೀಡಿದ ಆರೋಪಿ ಮುಂಡಳ್ಳಿ ನಿವಾಸಿ ಗೋವರ್ಧನ ಮೊಗೇರ ಎಂಬಾತ ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯ ವಾಗಿ ನಂತರ ಗೆಳೆತನ ಮಾಡಿಕೊಂಡು, ತಾನು ಖರ್ಚು ಮಾಡಿದ ಹಣ ಕೊಡುವಂತೆ ಹೇಳಿ ಕರೆ ಮಾಡಿ ಹೆದರಿಸಿ ಚಿತ್ರ ಹಿಂಸೆ ನೀಡಿ, ನಿನ್ನ ಅಶ್ಲೀಲ ಫೋಟೋಗಳನ್ನು ತಾನು ಫೇಸ್ ಬುಕ್ ನಲ್ಲಿ ಹಾಕಿ ನಿನ್ನ ಮಾನ ಮರ್ಯಾದೆ ತೆಗೆದು ನಿನಗೆ ಸಾಯಿಸುತ್ತೇನೆ ಇಲ್ಲದಿದ್ದರೆ ಮರ್ಯಾದೆಗೆ ನೀನೆ ಸಾಯಬೇಕು ಎಂದು ಹೇಳಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದನ್ನೇ ಮನಸ್ಸಿಗೆ ಹಚ್ಚಿಕೊಂಡು ಯುವತಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ದೂರಲಾಗಿದೆ.

ತನ್ನ ಮಗಳ ಸಾವಿಗೆ ಗೋವರ್ಧನ ಮೊಗೇರ ಈತನ ಕಿರುಕುಳವೇ ಕಾರಣ ಎಂದು ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಮೃತ ಯುವತಿಯ ತಂದೆ ಮುತ್ತಯ್ಯ ಗೋವಾಳಿ ದೂರು ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News