ಭಟ್ಕಳ: ದಿ ನ್ಯೂ ಇಂಗ್ಲಿಷ್ ಪಿಯು ಕಾಲೇಜಿಗೆ ಸಮಗ್ರ ವೀರಾಗ್ರಣಿ ಪ್ರಶಸ್ತಿ

Update: 2023-09-11 15:17 GMT

ಭಟ್ಕಳ: ನ್ಯಾಷನಲ್ ಪಿಯು ಕಾಲೇಜಿನಲ್ಲಿ ನಡೆದ ಪಿಯು ವಿದ್ಯಾರ್ಥಿಗಳ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ದಿ ನ್ಯೂಇಂಗ್ಲಿಷ್ ಪಿಯು ಕಾಲೇಜು ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದುಕೊಂಡಿದೆ.

ಬಾಲಕರ ವಿಭಾಗದಲ್ಲಿ ಲೋಹಿತ್ ಮರಾಠಿ ಗುಂಡು ಎಸೆತ, ಚೆಸ್‍ನಲ್ಲಿ ಪ್ರಥಮ, ಚಕ್ರ ಎಸೆತದಲ್ಲಿ ದ್ವಿತೀಯ, ರಾಹುಲ್ ಗೊಂಡ ಗುಂಡು ಎಸೆತದಲ್ಲಿ ತೃತೀಯ, ಧನರಾಜ್ ನಾಗರಾಜ ನಾಯ್ಕ 100ಮೀ ಓಟ. 100ಮೀ ರೀಲೆ ಮತ್ತು ಉದ್ದ ಜಿಗಿತದಲ್ಲಿ ಪ್ರಥಮ, 100ಮೀ ಹರ್ಡಲ್ಸ್ ನಲ್ಲಿ ದ್ವಿತೀಯ, ವಿನಾಯಕ್ ಗೊಂಡ ಗುಡ್ಡಗಾಡು ಓಟದಲ್ಲಿ ಪ್ರಥಮ, 3000ಮೀ ಓಟದಲ್ಲಿ ತೃತೀಯ, ತಿರುಮಲ ಗೊಂಡ 400ಮೀ ಹರ್ಡಲ್ಸ್ ನಲ್ಲಿ ಪ್ರಥಮ, ಗುಡ್ಡಗಾಡು ಓಟ ಪ್ರಥಮ, 1500ಮೀ ಮತ್ತು 3000ಮೀ ಓಟದಲ್ಲಿ ದ್ವಿತೀಯ, ಗುರುರಾಜ್ ನಾಯ್ಕ 100ಮೀ ರೀಲೆ ಪ್ರಥಮ, 400ಮೀ ಓಟದಲ್ಲಿ ದ್ವಿತೀಯ ಕೇಶವ ನಾಯ್ಕ 800ಮೀ ಓಟದಲ್ಲಿ ದ್ವಿತೀಯ, ಮಣಿಕಂಠ ಗೊಂಡ ಗುಡ್ಡಗಾಡು ಓಟದಲ್ಲಿ ಪ್ರಥಮ, 5000ಮೀ ಓಟದಲ್ಲಿ ಪ್ರಥಮ, ದೀಪಕ್ ಎತ್ತರ ಜಿಗಿತದಲ್ಲಿ ಪ್ರಥಮ, 400ಮೀ ಹರ್ಡಲ್ಷ್‍ನಲ್ಲಿ ದ್ವಿತೀಯ, ತಿಲಕ್ ಹೆಬ್ಬಾರ ಕರಾಟೆ 66 ಕೆಜಿ ಪ್ರಥಮ, ಪ್ರತ್ಯಕ್ಷ ನಾಯ್ಕ ಕರಾಟೆ 45ಕೆಜಿ ಪ್ರಥಮ ಸುರೇಶ ಗೊಂಡ 5000ಮೀ ನಡಿಗೆ ದ್ವಿತೀಯ ಸ್ಥಾನವನ್ನು ಪಡೆದು ಕೊಂಡಿರುತ್ತಾರೆ.

ಬಾಲಕರ ವಿಭಾಗದ ಗುಂಪು ಆಟಗಳಾದ ಬಾಲ್ ಬ್ಯಾಡ್ಮಿಂಟನ್, ಖೋ-ಖೋ ಹಾಗೂ ತ್ರೋಬಾಲ್ ಪ್ರಥಮ ಸ್ಥಾನ ಮತ್ತು ಶಟಲ್ ಬ್ಯಾಡ್ಮಿಂಟನ್‍ನಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.

ಬಾಲಕಿಯರ ವಿಭಾಗದಲ್ಲಿ ಅನನ್ಯ ಗುಡ್ಡಗಾಡು ಓಟದಲ್ಲಿ ಪ್ರಥಮ,400ಮೀ ಹರ್ಡಲ್ಸ್ ನಲ್ಲಿ ಪ್ರಥಮ, 3000ಮೀ ಓಟದಲ್ಲಿ ದ್ವಿತೀಯ, ಪವಿತ್ರ ಮಡಿವಾಳ್ ಉದ್ದಜಿಗಿತದಲ್ಲಿ ಪ್ರಥಮ, 100ಮೀ ಓಟದಲ್ಲಿ ದ್ವಿತೀಯ, ತ್ರಿವಿಧಜಿಗಿತದಲ್ಲಿ ದ್ವಿತೀಯ, ಸಿಂಚನಾ ತಿಮ್ಮ ನಾಯ್ಕ ಉದ್ದಜಿಗಿತದಲ್ಲಿ ದ್ವಿತೀಯ, ರೇಷ್ಮಾ ನಾಯ್ಕ ಈಟಿ ಎಸೆತದಲ್ಲಿ ದ್ವಿತೀಯ, ಸಿಂಚನಾ ಮೋಹನ್ ನಾಯ್ಕ ಎತ್ತರ ಜಿಗಿತದಲ್ಲಿ ಪ್ರಥಮ, ಸಿಂಚನಾ ಈಶ್ವರ ನಾಯ್ಕ ಗುಡ್ಡಗಾಡು ಓಟದಲ್ಲಿ ಪ್ರಥಮ, 1500ಮೀ ದ್ವಿತೀಯ, ರಾಧಿಕಾ ಸುಕ್ರ ಗೊಂಡ ಕರಾಟೆ 32 ಕೆಜಿ ಪ್ರಥಮ, ವಿನುತಾ ಮಂಜುನಾಥ ನಾಯ್ಕ ಕರಾಟೆ 36 ಕೆಜಿ ಪ್ರಥಮ, ರಮ್ಯ ಮೊಗೇರ ಕರಾಟೆ 52 ಕೆಜಿ ಪ್ರಥಮ, ಅಮಿತಾ ನಾಯ್ಕ ಯೋಗದಲ್ಲಿ ಪ್ರಥಮ, ಭಾಗ್ಯಶ್ರೀ ಗೊಂಡ 3000ಮೀ ನಡಿಗೆ ಪ್ರಥಮ, ಸಾಧನಾ 3000ಮೀ ನಡಿಗೆ ತೃತೀಯ, ಪೂಜಾ ಎಮ್. ಖಾರ್ವಿ ಚೆಸ್ ನಲ್ಲಿ ಪ್ರಥಮ, ಲತಾ ದೇವಾಡಿಗ ಚಕ್ರಎಸೆತದಲ್ಲಿ ದ್ವಿತೀಯ, ಶ್ರೇಯಾಂಕ ಹ್ಯಾಮರ್‍ಎಸೆತದಲ್ಲಿ ದ್ವಿತೀಯ, ಆಶಿತಾ ವೆಂಕಟೇಶ ನಾಯ್ಕ 800ಮೀ, 1500ಮೀ, 5000ಮೀ ಮತ್ತು ಗುಡ್ಡಗಾಡು ಓಟದಲ್ಲಿ ಪ್ರಥಮ ಸ್ಥಾನವನ್ನುಪಡೆದುಕೊಂಡಿರುತ್ತಾರೆ.

ಬಾಲಕಿಯರ ವಿಭಾಗದ ಗುಂಪು ಆಟಗಳಾದ ಬಾಲ್ ಬ್ಯಾಡ್ಮಿಂಟನ್, ಖೋ-ಖೋ, ತ್ರೋಬಾಲ್ ,ಕಬಡ್ಡಿ ಹಾಗೂ ಶಟಲ್ ಬ್ಯಾಡ್ಮಿಂಟನ್‍ನಲ್ಲಿ ಪ್ರಥಮ ಸ್ಥಾನ ಮತ್ತು ವಾಲಿಬಾಲ್‍ಆಟದಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.

ಆಶಿತಾ ವೆಂಕಟೇಶ ನಾಯ್ಕ 800ಮೀ, 1500ಮೀ, 5000ಮೀ ಮತ್ತು ಗುಡ್ಡಗಾಡು ಓಟದಲ್ಲಿ ಪ್ರಥಮ ಸ್ಥಾನವನ್ನು ಪಡೆದು ವೈಯಕ್ತಿಕ ವೀರಾಗ್ರಣಿ ಪಡೆದುಕೊಂಡಿದ್ದಾರೆ.

ಸಮಗ್ರ ಬಾಲಕರ ವೀರಾಗ್ರಣಿ ಮತ್ತು ಸಮಗ್ರ ಬಾಲಕಿಯರ ವೀರಾಗ್ರಣಿ ಪ್ರಶಸ್ತಿಯೂ ಕೂಡ ಶ್ರೀ ಗುರು ವಿದ್ಯಾಧಿರಾಜ ದಿ ನ್ಯೂ ಇಂಗ್ಲೀಷ್ ಪಿ.ಯು, ಕಾಲೇಜಿನ ವಿದಾರ್ಥಿಗಳು ಪಡೆದು, ಕಾಲೇಜಿಗೆ ಕೀರ್ತಿಯನ್ನು ತಂದಿರುತ್ತಾರೆ. ಕ್ರೀಡೆಯಲ್ಲಿ ಉತ್ತಮ ಸಾಧನೆ ತೋರಿದ ಎಲ್ಲಾ ವಿದ್ಯಾರ್ಥಿಗಳಿಗೆ ಭಟ್ಕಳ ಎಜ್ಯುಕೇಶನ ಟ್ರಸ್ಟಿನ ಅಧ್ಯಕ್ಷರಾದ ಡಾ.ಸುರೇಶ ವಿ. ನಾಯಕ, ಮ್ಯಾನೇಜಿಂಗ್ ಟ್ರಸ್ಟಿಯವರಾದ ಶ್ರೀ ಆರ್, ಜಿ, ಕೊಲ್ಲೆ, ಟ್ರಸ್ಟಿ ಮ್ಯಾನೇಜರ್ ರಾಜೇಶ ನಾಯಕ, ಪ್ರಾಂಶುಪಾಲರಾದ ಡಾ. ವಿರೇಂದ್ರ ವಿ. ಶಾನಬಾಗ ಹಾಗೂ ಬೋಧಕ- ಬೋಧಕೇತರ ಸಿಬ್ಬಂದಿ ಅಭಿನಂದಿಸಿರುತ್ತಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News