ಭಟ್ಕಳ: ಗುರುಮಠ ವತಿಯಿಂದ ಪ್ರತಿಭಾ ಪುರಸ್ಕಾರ, ಸನ್ಮಾನ ಕಾರ್ಯಕ್ರಮ

Update: 2024-10-28 16:26 GMT

ಭಟ್ಕಳ: ನಾಮಧಾರಿ ಸಮಾಜದ ಗುರುಮಠ ವತಿಯಿಂದ ನೀಡುವ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮ ವನ್ನು ವಿಶ್ರಾಂತ ಜಿಲ್ಲಾ ನ್ಯಾಯಾಧೀಶರಾದ ರವಿ.ಎಂ. ನಾಯ್ಕ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು,  ನಮ್ಮ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳು ಕಳೆದ 10 ವರ್ಷಗಳ ಹಿಂದೆ ಬೆರಳಣಿ ಕೆಯಷ್ಟಿದ್ದು ಇಂದು ನೂರಾರು ಪ್ರತಿಭಾವಂತರು ನಮ್ಮ ಸಮಾಜದ ಕಾರ್ಯಕ್ರಮದಲ್ಲಿ ಪುರಸ್ಕಾರವನ್ನು ಪಡೆಯುತ್ತಿದ್ದಾರೆ. ಇದು ಸಮಾಜಕ್ಕೆ ಹೆಮ್ಮೆಯ ವಿಷಯವಾಗಿದೆ. ಸಮಾಜದ ವ್ಯಕ್ತಿಗಳು ಒಂದೆ ರಂಗಗಳಲ್ಲಿ ತೊಡಗದೇ ಎಲ್ಲ ರಂಗಗಳಲ್ಲಿ ತಮ್ಮ ಕಾರ್ಯ ನಿರ್ವಹಿಸುವಂತಾಗಬೇಕು ಎಂದರಲ್ಲದೇ ವಿದ್ಯಾರ್ಥಿ ಜೀವನದಲ್ಲಿ ಯವುದೇ ದುಷ್ಟ ಚಟುವಟಿಕೆಗಳಲ್ಲಿ ಹಾಗೂ ಕಾನೂನು ಬಾಹೀರ ಚಟುವಟಿಕೆಗಳಲ್ಲಿ ತೊಡಗದೆ ತಮ್ಮ ವಿದ್ಯಾರ್ಥಿ ಜೀವನವನ್ನು ಆದರ್ಶಮಯವಾಗಿ ಸಾಗಿಸಿ ಸಮಾಜದಕ್ಕೆ ಉತ್ತಮ ಪ್ರಜೆಯಾಗಿ, ರೂಪುಗೊಳ್ಳಬೇಕು. ಮೆಟ್ರಿಕ್ ನಂತರದ ಸಮಯದಲ್ಲಿ ವಿದ್ಯಾರ್ಥಿಗಳು ಹಾದಿ ತಪ್ಪು ವಂತಹ ಸಮಯವಾಗಿದ್ದು ಈ ಸಂದರ್ಭದಲ್ಲಿ ನಾವು ಯಾರ ಕೈಯಲ್ಲಿ ಆಯುಧವಾಗಬಾರದು ಎಂದು ಕಿವಿ ಮಾತ ಹೇಳಿದ ಅವರು ಪಾಲಕರು ಸಹ ತಮ್ಮ ಮಕ್ಕಳನ್ನು ಸರಿಯಾದ ದಾರಿಯಲ್ಲಿ ತೆಗೆದುಕೊಂಡು ಹೋಗುವ ಜವಾಬ್ದಾರಿ ಹೊಂದಿರು ತ್ತಾರೆ. ಸಮಾಜದಲ್ಲಿ ಉನ್ನತ ಹುದ್ದೆಯಲ್ಲಿರುವುವರು ಸಮಾಜದ ಅಬಿವೃದ್ದಿಗೆ ತಮ್ಮ ಸಹಕಾರ ನೀಡುವಂತಾಗಬೇಕು ಎಂದರು

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ತಿತರಿದ್ದ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಮಂಜುನಾಥ ನಾಯ್ಕ ಮಾತನಾಡಿ ಸಮಾಜದ ಪ್ರತಿಭಾವಂತ ವಿದ್ಯಾರ್ಥೀಗಳನ್ನು ಹುಡುಕಿ ಈ ವೇದಿಕೆಯಲ್ಲಿ ಪುರಸ್ಕಾರ ನೀಡುವುದು ಸಂತೋಷದಾಯಕ ಕಾರ್ಯವಾಗಿದೆ. ಜನ ಎಲೆ ಮರೆ ಕಾಯಿಯಂತೆ ಇದ್ದವರನ್ನು ಈ ವೇದಿಕೆಯ ಮೇಲೆ ತರುವ ಪ್ರಯತ್ನಕ್ಕೆ ಸಮಾಜದ ಹಿರಿಯರು ಪ್ರಯತ್ನಿಸಿರುವುದು ವಿದ್ಯಾರ್ಥಿಗಷ್ಟೇ ಅಲ್ಲದೆ ಅವರ ಪಾಲಕರಿಗೂ ಹೆಮ್ಮೆಯ ವಿಚಾರ ವಾಗಿದೆ. ಈ ಕಾರ್ಯದ ಹಿಂದೆ ಅನೇಕರ ಶ್ರಮವಿದೆ ಎಂದ ಅವರು ಇಂತಹ ಕಾರ್ಯದಿಂದ ಸಮಾಜಕ್ಕೆ ಸ್ಪೂರ್ತಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗುರುಮಠದ ಗೌರವಾಧ್ಯಕ್ಷರಾದ ಕೃಷ್ಣ ನಾಯ್ಕ ಮಾತನಾಡಿ ಇಂದಿನ ತಾಂತ್ರಿಕ ಯುಗದಲ್ಲಿ ಯುವಕರು ಸಮಾಜವ್ನು ನಮ್ಮ ಸಂಸ್ಕ್ರತಿಯ್ನು , ನಮ್ಮ ಧರ್ಮವನ್ನು ಮರೆಯುವ ಹಂತಕ್ಕೆ ಹೋಗುವ ಮೊದಲು ಪಾಲಕರು ಅವರಿಗೆ ಚಿಕ್ಕಂದಿನಿಂದಲೆ ಇದರ ಬಗ್ಗೆ ತಿಳಿ ಹೇಳುವ ಕೆಲಸ ಮಾಡಬೇಕಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಾಮದಾರಿ ಸಮಾಜದ ಗುರುಮಠದ ಅಧ್ಯಕ್ಷ ಅರುಣ್ ನಾಯ್ಕ ಮಾತನಾಡಿ ಪಾಲ ಕರು ತಮ್ಮ ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕೆಂದು ಕಷ್ಟಪಟ್ಟು ತಮ್ಮ ಸಮಯವನ್ನು ಹಾಳುಮಾಡಿಕೊಂಡು ಮಕ್ಕಳ ಶ್ರೇಯಸ್ಸಿಗೆ ದುಡಿಯುತ್ತಾರೆ. ಮಕ್ಕಳು ಸಹ ತಾವು ಯಶಸ್ಸು ಪಡೆದ ನಂತರ ಪಾಲಕರಿಗೆ ಗೌರವ ಕೊಡುವ ಕೆಲಸ ಮಾಡಬೇಕು ಎಂದರು.

ವೇದಿಕೆಯಲ್ಲಿ ಎಸ್.ಎಸ್.ಎಲ್.ಸಿ., ಪಿ.ಯು.ಸಿ. ಹಾಗೂ ಪದವಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕಲೆ ಸಾಹಿತ್ಯ ಹಾಗೂ ಕ್ರೀಡೆಯಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ಸಮಾಜದ ಪ್ರತಿಭೆಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ವಿಶ್ರಾಂತ ಜಿಲ್ಲಾ ನ್ಯಾಯಾಧೀಶರಾದ ರವಿ ಎಂ.ನಾಯ್ಕ ನಾಯ್ಕ ಹಾಗೂ ಉಪನ್ಯಾಸಕ ಮಂಜುನಾತ ನಾಯ್ಕ ಇವರನ್ನು ಸಮಾಜದ ಪರವಾಗಿ ಗೌರವಿಸಲಾಯಿತು.

ಮಂಜುನಾತ ನಾಯ್ಕ ಪ್ರಾರ್ಥನೆ ಹಾಡಿದರು. ಗುರುಮಠದ ಕಾರ್ಯದರ್ಶಿ ಡಿ.ಎಲ್.ನಾಯ್ಕ ಪ್ರಾಸ್ತಾವಿಕ ವಾಗಿ ಮಾತನಾಡಿದರು. ವೇದಿಕೆಯಲ್ಲಿ ಸಮಾಜದ ಉಪಾದ್ಯಕ್ಷರಾದ ಎಂ.ಕೆ.ನಾಯ್ಕ, ಉಪಸ್ಥಿತರಿದ್ದರು. ಶಿಕ್ಷಕರಾದ ಗಂಗಾಧರ ನಾಯ್ಕ ಹಾಗೂ ನಾರಾಯಣ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಹಿರಿಯರಾದ ಡಿ.ಬಿ. ನಾಯ್ಕ, ಶಾಂತಾರಾಮ ನಾಯ್ಕ, ಗುರುಮಠ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು,  ಮತ್ತಿತರರು ಉಪಸ್ಥಿತರಿದ್ದರು.






 


 


Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News