ಬ್ಯಾರಿ ಭಾಷಾ ದಿನಾಚರಣೆ: ಅ.3ರಂದು ಜಿಲ್ಲಾ ಮಟ್ಟದ ದಫ್ ಸ್ಪರ್ಧೆ

Update: 2024-09-21 10:24 GMT

ಮಂಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ, ಜಿಲ್ಲಾ ಬ್ಯಾರಿಗಳ ಒಕ್ಕೂಟ, ಬ್ಯಾರಿ ಭಾಷಾ ದಿನಾಚರಣೆಯ ಅಂಗವಾಗಿ ಅ.3ರಂದು ನಗರದ ಕುವೆಂಪು ಕಲಾ ಮಂದಿರದಲ್ಲಿ ಜಿಲ್ಲಾ ಮಟ್ಟದ ದಫ್ ಸ್ಪರ್ಧೆಯನ್ನು ಏರ್ಪಡಿಸಿದೆ.

ವಿಜೇತ ತಂಡಗಳಿಗೆ ಪ್ರಥಮ ಬಹುಮಾನ ಐದು ಸಾವಿರ ರೂ., ದ್ವಿತೀಯ ಮೂರು ಸಾವಿರ ರೂ., ಮತ್ತು ತೃತೀಯ ಬಹುಮಾನ ಎರಡು ಸಾವಿರ ರೂ. ನಗದು ಹಾಗೂ ಪ್ರಮಾಣ ಪತ್ರ ನೀಡಲಿದೆ.

ದಫ್ ನೃತ್ಯದ ಹಾಡುಗಳು ಬ್ಯಾರಿ ಭಾಷೆಯಲ್ಲಿದ್ದು ಸ್ಪರ್ಧೆಯಲ್ಲಿ ಪ್ರತಿ ತಂಡಕ್ಕೆ 10 ನಿಮಿಷ ಕಾಲಾವಧಿ ನೀಡಲಾಗುವುದು, ಸ್ಪರ್ಧಾಳುಗಳು ಸಮವಸ್ತ್ರ ಧರಿಸುವುದು ಕಡ್ಡಾಯವಾಗಿದ್ದು ಹತ್ತು ಮಂದಿಯ ತಂಡಕ್ಕೆ ಮಾತ್ರ ಸ್ಪರ್ಧಿಸಲು ಅವಕಾಶವಿದೆ.

ಸ್ಪರ್ಧೆಗಳಲ್ಲಿ ಭಾಗವಹಿಸಲು ಇಚ್ಛಿಸುವವರು ಸೆ.25ರ ಒಳಗೆ ಕಾರ್ಯಕ್ರಮದ ಸಂಚಾಲಕ ಬಿ.ಎಸ್.ಮುಹಮ್ಮದ್ ಅವರನ್ನು ಸಂಪರ್ಕಿಸಬಹುದು, ಹೆಚ್ಚಿನ ಮಾಹಿತಿಗೆ 7337783477 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸುವಂತೆ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಯು.ಎಚ್. ಉಮರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News